ಪದ್ಮ ಗಂಡು ಮಗುವನ್ನೇ ಹೆತ್ತಳು. ಸದ್ಯ ಮಗುವಿಗೆ ಯಾವ ಅಂಗವೂ ಹೀನವಾಗಿರಲಿಲ್ಲ. ಸಾವಿತ್ರಮ್ಮನಿಗೆ ಒಂದು ಕಡೆ ಹಿಡಿಸಲಾಗದಷ್ಟು ಸಂತೋಷ, ಒಂದು ಕಡೆ ತಡೆಯಲಾರದಷ್ಟು ಸಂಕಟ.
“ಅಕ್ಕ ಬದುಕಿದ್ದರೆ ಎಷ್ಟು ಅಕರಾಸ್ತೆಪಡುತ್ತಿದ್ದರೋ ಅವರನ್ನು ಉಳಿಸಿಕೊಳ್ಳುವ ಅದೃಷ್ಟ ನಮಗಿಲ್ಲ”
ಎಂದು ದುಃಖಪಟ್ಟಳು. ಮನೆಯಲ್ಲಿ ಸಂತೋಷದ ವಿಷಯವೇನೇ ಆದರೂ ಸಾವಿತ್ರಮ್ಮ ತಟ್ಟನೆ ಅಕ್ಕನನ್ನು ಜ್ಞಾಪಿಸಿಕೊಳ್ಳುತ್ತಿದ್ದಳು. ತಿಂಗಳಿಗೊಮ್ಮೆಯಾದರೂ ಅಕ್ಕನ ಹೆಸರು ಹೇಳಿ ನಾಲ್ಕು ಜನ ಮುತ್ತೆದೆಯರಿಗೆ ಹೂವೀಳ್ಯ ಕೊಟ್ಟ ಹೊರತೂ ಆಕೆಗೆ ಸಮಾಧಾನವಿಲ್ಲ. ರಾಮಚಂದ್ರ ಅದಕ್ಕೂ ಆಕ್ಷೇಪಣೆ ತೆಗೆದಿದ್ದ. ಸಾವಿತ್ರಮ್ಮ ಕೆಣಕಿದ ಸಿಂಹಿಣಿಯಂತಾಗಿಬಿಟ್ಟಳು.
“ಆ ಸುದ್ದಿ ನಿನಗೇಕೋ ರಾಮು. ಅವರ ದೊಡ್ಡತನದಿಂದಲೇ ನಾನೂ ನೀನೂ ಇಲ್ಲಿರೋದು. ನಿನ್ನ ಪಾಡಿಗೆ ನೀನಿರು. ಈ ಮಾತೆಲ್ಲಾ ನಿನಗೇಕೆ?”
ಎಂದು ಥಳಿಸಿಬಿಟ್ಟಿದ್ದಳು. ದಿನಕ್ಕೊಮ್ಮೆ ಶಾಂತಾ ಬಂದು ತಂದೆಯನ್ನು ನೋಡಿಕೊಂಡು ಹೋಗುತ್ತಿದ್ದಳು. ರಾಮು ಮಗನ ನಾಮಕರಣಕ್ಕೆ ಅವಳಾಗಲಿ ವೆಂಕಟೇಶನಾಗಲಿ ಕಾಲಿಡಲಿಲ್ಲ. ರಾಮು ಖರ್ಚೇ ಮಿಕ್ಕಿತು ಎಂದುಕೊಂಡು ಎಲ್ಲವನ್ನೂ ಅಲ್ಪ ಖರ್ಚಿನಲ್ಲಿಯೇ ಮುಗಿಸಿಬಿಟ್ಟ.
ರಾಮುವಿಗೆ ನಿಜವಾಗಿಯೂ ಶುಕ್ರದೆಶೆಯೇ ಆರಂಭವಾಗಿತ್ತು ಅವನು ಯಾವ ಕೇಸಿಗೆ ಕೆಹಾಕಿದರೂ ಅದರಲ್ಲಿ ಗೆದ್ದೇ ಬರುತ್ತಿದ್ದ ಇದಕ್ಕೆ ಒಂದು ಕಾರಣವೂ ಇತ್ತು. ಹಿರಣ್ಣಪ್ಪನವರು ಬಂದಬಂದಾಗಲೆಲ್ಲಾ ಅಳಿಯನನ್ನು ಕರೆದುಕೊಂಡು ಹೋಗಿ ದೊಡ್ಡ ದೊಡ್ಡ ಅಧಿಕಾರಿಗಳಿಗೂ, ಮ್ಯಾಜಿಸ್ಟ್ರೇm ಮುನಸೀಫರಿಗೂ ಪರಿಚಯ ಮಾಡಿಕೊಟ್ಟು ಬರುತ್ತಿದ್ದರು. ರಾಮು ಅದರ ಉಪಯೋಗವನ್ನು ಚೆನ್ನಾಗಿ ತೆಗೆದುಕೊಂಡು ಜಡ್ಜುಗಳ ಆಶ್ರಯವನ್ನು ಚೆನ್ನಾಗಿ ಮಾಡಿಕೊಂಡಿರುತ್ತಿದ್ದ ಅವರ ‘ಮರ್ಜಿ’ಯನ್ನನುಸರಿಸುವ ವಿದ್ಯೆಯಲ್ಲಂತೂ ಪಾರಂಗತನಾಗಿದ್ದ. ಕೆಲವು ಕೋರ್ಟುಗಳಲ್ಲಂತೂ ರಾಮಚಂದ್ರನೇ ಸg ತೇe ಬಹದ್ದೂg ಸಪ್ರೂ .
ವಕೀಲಿ ವೃತ್ತಿಯಲ್ಲಿ ಮುಂದುವರಿಯುವುದಕ್ಕೆ ಬರೀ ವಕೀಲನಾಗಿರುವುದಷ್ಟೇ ಸಾಲದೆಂದು ರಾಮು ಬೇಗನೆ ಅರಿತುಕೊಂಡ. ವರ್ಗವಾಗಿ ಹೋಗುವ ಮ್ಯಾಜಿಸ್ಟ್ರೇm ಮುನಿಸೀಫರಿಗೆ ಔತಣ ಸಮಾರಂಭಗಳನ್ನೇರ್ಪಡಿಸುತ್ತಿದ್ದುದಲ್ಲದೇ ವರ್ಗವಾಗಿ ಹೋಗುವ ಇತರ ದೊಡ್ಡ ಅಧಿಕಾರಿಗಳಿಗೂ ಏರ್ಪಡಿಸುತ್ತಿದ್ದನು. ಸರ್ಕಾರಿ ಅಧಿಕಾರಿಗಳು ಎಂದರೆ ರಾಮುವಿಗೆ ಸಾಕ್ಷಾv ಹರಿಹರ ಸ್ವರೂಪರು. ಅವರು ತನ್ನನ್ನು ನೋಡಿ ನಕ್ಕರೆ ಸಾಕು, ಮಾತನಾಡಿಸಿದರೆ ಸಾಕು, ಟೀಗೆ ಪಕ್ಕದಲ್ಲಿ ಕೂಡಿಸಿಕೊಂಡರಂತೂ ಮುಗಿದೇ ಹೋಯಿತು. ರಾಮು ಅಷ್ಟಮ ಸ್ವರ್ಗದಲ್ಲಿರುವೆನೆಂದೇ ಭಾವಿಸುತ್ತಿದ್ದನು. ಸರ್ಕಾರಿ ಅಧಿಕಾರಿಗಳು ಎಷ್ಟು ಮೇಲೆಂದು ಭಾವಿಸುತ್ತಿದ್ದನೋ ಇತರರು ಅಷ್ಟು ಕೀಳೆಂದು ಭಾವಿಸುತ್ತಿದ್ದರು. ಸರ್ಕಾರಕ್ಕೆ ವಿರೋಧವಲ್ಲದ ಸಾರ್ವಜನಿಕ ಕೆಲಸದಲ್ಲಿ ಕೆಯಾಡಿ ನಾಲ್ಕು ಕಡೆ ತನ್ನ ಹೆಸರು ಗುಡುಗಾಡುವಂತೆ ಮಾಡಬೇಕೆಂದು ರಾಮು ಬಯಸಿದನು.
ರಾಮುವಿನ ಕಕ್ಷಿಗಾರರು ಕೆಲವರು ಸಹಕಾರ ಸಂಘಗಳ ಸೂತ್ರ ಚಾಲಕರಾಗಿದ್ದರು. ಸಹಕಾರ ಸಂಘ, ಸಹಕಾರ ಬ್ಯಾಂಕುಗಳನ್ನು ಏಣಿಯನ್ನಾಗಿ ಉಪಯೋಗಿಸಿಕೊಳ್ಳುವುದೇ ಲೇಸೆಂದು ಅವರು ಸಲಹೆಯಿತ್ತರು. ರಾಮುವಿಗೂ ಅದು ಸೂಕ್ತವಾಗಿ ಕಂಡುಬಂತು.
ರಾಮು ಎ.ಎ.ಬಿ. ಮುಗಿಸಿಕೊಂಡು ಬರುವಾಗಲೇ ಕೆಯಲ್ಲಿ ಒಂದು ಸಾವಿರ ರೂಪಾಯಿಯಷ್ಟು ಗಂಟುಮಾಡಿಕೊಂಡು ಬಂದಿದ್ದ. ತಿಂಗಳಿಗೆ ತನಗೆ ಬೇಕಾಗುವುದಕ್ಕಿಂತಲೂ ಹೆಚ್ಚಾಗಿ ಹಣ ತರಿಸಿಕೊಂಡು ಮೂಲಧನ ಮಾಡಿಕೊಂಡಿದ್ದನು ‘ಕೃಷ್ಣ ಜನ್ಮಾಷ್ಟಮಿ ಸಹಕಾರ ಸಂಘ’ದ ಕೆಲವು ಷೇರುಗಳನ್ನು ಕೊಂಡಿದ್ಡ. ಉಳಿದ ಹಣವನ್ನು ‘ಕರ್ನಾಟಕ ಬ್ಯಾಂP’ನ ಷೇರುಗಳಿಗೆ ವಿನಿಯೋಗಿಸಿದ್ದ.
ಕರ್ನಾಟಕ ಬ್ಯಾಂP ಸಂಸ್ಥಾನದಲ್ಲೆಲ್ಲಾ ಹೆಸರಾದ ದೊಡ್ಡ ಸಹಕಾರ ಬ್ಯಾಂP. ಸುಮಾರು ೨,೩೦೦ ಜನದಷ್ಟು ಷೇರುದಾರರಿದ್ದರು. ಆ ಬ್ಯಾಂಕಿನ ಷೇರುಗಳಿಗೆ ಜನ ಹಾತೊರೆಯುತ್ತಿದ್ದರು. ಕರ್ನಾಟಕ ಬ್ಯಾಂಕಿನ ಡೆರೆಕ್ಟg ಪದವಿಗಂತೂ ವಿಶೇಷ ಪೆಪೋಟಿಯಿರುತ್ತಿದ್ದಿತು. ಒಮ್ಮೆಲೇ ಪ್ರಯತ್ನ ಪಟ್ಟವರು ಯಾರೂ ಜಯಶೀಲರಾಗುತ್ತಿರಲಿಲ್ಲ. ಅದಕ್ಕೆ ಮೊದಲು ‘ಕೃಷ್ಣ ಜನ್ಮಾಷ್ಟಮಿ’ ಮೊದಲಾದ ಸಣ್ಣಪುಟ್ಟ ಸಂಘ. ಬ್ಯಾಂಕುಗಳ ಡೆರೆಕ್ಟg ಪದವಿಯನ್ನು ದೊರಕಿಸಿಕೊಂಡು ಅನಂತರ ಕರ್ನಾಟಕ ಬ್ಯಾಂಕಿನ ಮುತ್ತಿಗೆ ಹಾಕುತ್ತಿದ್ದರು. ಕರ್ನಾಟಕ ಬ್ಯಾಂಕಿನ ಡೆರೆಕ್ಟg ಪದವಿ ಕೆಬಿಟ್ಟರೆ ಮಿಕ್ಕ ಡೆರೆಕ್ಟರ ಪದವಿಗಳನ್ನು ಕಸದ ಕೂಪಕ್ಕೆ ತಳ್ಳಿಬಿಡುತ್ಸ್ಥಾಘವು ‘ಕೃಷ್ಣ ಜನ್ಮಾಷ್ಟಮಿ ಕೋ – ಆಪರೇಟಿ ಸೊಸೆಟಿ’ಯಾಯಿತು. ಆದರೆ ಡೆರೆಕ್ಟg ಪದವಿಯಂತೂ ರಾಮುವಿಗೆ ಸುಲಭವಾಗಿ ಸಿಕ್ಕಿತು. ಅದೇ ವರ್ಷವೇ ಕರ್ನಾಟಕ ಬ್ಯಾಂಕಿನ ಡೆರೆಕ್ಟg ಪದವಿಯನ್ನೂ ಹೊಡೆಯಬೇಕೆಂದು ರಾಮು ವಿಶ್ವಸಾಹಸ ಮಾಡಲಾರಂಭಿಸಿದನು.
ಜನಾಬ್ ಷರೀಫ್‌ಖಾನರು ಕಬ್ಬಿಣದ ಸಾಮಾನಿನ ಅಂಗಡಿಯ ಮಾಲೀಕರು. ವ್ಯವಹಾರಕ್ಕೆ ಬೇಕಾಗುವಷ್ಟು ಇಂಗ್ಲೀಷಿನ ಜ್ಞಾನವೂ ಇತ್ತು ಲೋಕವನ್ನು ಚೆನ್ನಾಗಿ ಬಲ್ಲವರಾದುದ್ದರಿಂದ ಯಾರನ್ನು ಹೇಗೆ ಹೇಗೆ ಆಡಿಸಬೇಕೆಂದು ತಿಳಿವಳಿಕೆಯಿತ್ತು. ಕರ್ನಾಟಕ ಬ್ಯಾಂಕಿನ ಡೆರೆಕ್ಟg ಪದವಿಯನ್ನು ಬಯಸುತ್ತಿದ್ದವರಲ್ಲಿ ಅವರೂ ಒಬ್ಬರಾಗಿದ್ದರು.
ಚಿಂತಾಮಣಿ ಲಕ್ಷ್ಮಣಶೆಟ್ಟರು ದೊಡ್ಡ ಜವಳಿ ವ್ಯಾಪಾರಿಗಳು ಅವರು ಹಿಂದೆ ಒಂದೆರಡು ಸಲ ಬ್ಯಾಂಕಿನ ಡೆರೆಕ್ಟರಾಗಿದ್ದವರು. ಅವರಿಗೂ ಷರೀಫಖಾನರಿಗೂ ತುಂಬ ಸ್ನೇಹವಿತ್ತು. ಷರೀಫಖಾನರೇ ಶೆಟ್ಟರ ಪರಿಚಯವನ್ನು ಲಾಯರಿಗೆ ಮಾಡಿಕೊಟ್ಟರು.
ರಾಮಚಂದ್ರ, ಷರೀಫಖಾನರು, ಲಕ್ಷ್ಮಣಶೆಟ್ಟರು ಮೂರು ಜನರೂ ಬ್ಯಾಂಕಿನ ಡೆರೆಕ್ಟರ ಪದವಿಗೆ ಉಮೇದುವಾರರಾಗುವುದೆಂದು, ಕೂಡಿ ಕೆಲಸ ಮಾಡುವುದೆಂದೂ ಗೊತ್ತಾಯಿತು. ರಾಮಚಂದ್ರನಿಗೆ ಲಾಯರುಗಳು, ಸರ್ಕಾರಿ ನೌಕರರ ಬೆಂಬಲ; ಷರೀಫಖಾನರಿಗೆ ಮುಸಲ್ಮಾನ ಮತದಾರರ ಬೆಂಬಲ; ಶೆಟ್ಟರಿಗೆ ವ್ಯಾಪರಸ್ಥರ ಬೆಂಬಲ. ಮೂವರೂ ಕೂಡಿ ಕೆಲಸ ಮಾಡಲಾರಂಭಿಸಿದರು. ಸಂಜೆಯಾಗುತ್ತಲೂ ರಾಮಚಂದ್ರನ ಕಛೇರಿಯಲ್ಲಿ ಕೂಡಿ ತಮ್ಮ ಅಂದಿನ ಕೆಲಸ ಕಾರ್ಯಗಳನ್ನು ಚರ್ಚಿಸುತ್ತಿದ್ದರು.
ಚುನಾವಣೆಯೂ ಮುಗಿಯಿತು. ಫಲಿತಾಂಶ ಹೊರಬಿತ್ತು. ಹತ್ತು ಜನ ಡೆರೆಕ್ಟರುಗಳಲ್ಲಿ ರಾಮುವಿಗೆ ೬ನೇ ರ್‍ಯಾಂಕು. ಶೆಟ್ಟರಿಗೆ ೯ನೆಯ ರ್‍ಯಾಂಕು. ಖಾನರಿಗೆ ೧೦ನೆಯ ರ್‍ಯಾಂಕು ದೊರೆತಿತ್ತು. ಎಲ್ಲರೂ ತಮ್ಮ ಮತದಾರರ ಕೆಯಲ್ಲಿ ’ಪೂರ್ಣಮತ’ (Siಟಿgಟe ಗಿoಣe ) ವನ್ನು ದೊರಕಿಸಿ ಕೊಂಡಿದ್ದರು. ಒಬ್ಬರನ್ನೊಬ್ಬರು ಕತ್ತರಿಸಿವುದಕ್ಕೆ ತೊಡಗಿದ್ದುದರಿಂದ ಯಾರೂ ಆಕ್ಷೇಪಣೆಯನ್ನೆತ್ತುವ ಹಾಗಿರಲಿಲ್ಲ. ಮುಂದೆಯೂ ಮೂರು ಜನವೂ ಕೂಡಿ ಕೆಲಸ ಮಾಡತಕ್ಕದ್ದೆಂದು ನಿರ್ಣಯಿಸಿಕೊಂಡರು. ಶೆಟ್ಟರು ಬ್ಯಾಂಕಿನ ಕಾರ್ಯದರ್ಶಿಗಳಾದರು, ಸಾಹೇಬರು ಖಚಾಂಚಿಗಳಾದರು, ರಾಮು ಅದರ ವಕೀಲ (ಐegಚಿಟ ಂಜvisoಡಿ) ನಾದನು.
ರಾಮುವಿನ ಮತ್ತು ಅವನ ಇಬ್ಬರು ಸ್ನೇಹಿತರ ಕೆಗೆ ಇಡೀ ಬ್ಯಾಂಕೇ ಸಿಕ್ಕಿದಂತಾಯಿತು. ಮುಂದಿನ ಚುನಾವಣೆಗಳಲ್ಲಿ ತಮ್ಮ ಬುಡ ಭದ್ರವಾಗುವಂತೆ ಮೂವರೂ ತಮ್ಮ ಕಡೆಯ ಜನಕ್ಕೆ ಷೇರುಗಳನ್ನೂ, ಸಾಲಗಳನ್ನೂ ಕೊಡಿಸುತ್ತಿದ್ದರು. ಇತರರಿಗೆ ಷೇರುಗಳಿಲ್ಲ. ಎಲ್ಲಾ ತುಂಬಿ ಹೋಗಿವೆ ಎಂದು ಹೇಳುತ್ತಲೇ ಡೆರೆಕ್ಟರುಗಳು ತಮ್ಮ ಷೇರಿನ ಲೆಕ್ಕವನ್ನು ೨೪ಕ್ಕೆ ಏರಿಸಿದರು.
ಕರ್ನಾಟಕ ಬ್ಯಾಂಕಿನ ಡೆರೆಕ್ಟg ಪದವಿ ನಾನಾ ವಿಧದಲ್ಲಿ ರಾಮುವಿಗೆ ಅನುಕೂಲ ಮಾಡಿತು. ಡೆರೆಕ್ಟರುಗಳಿಗೆ ಬರುವ ಆದಾಯವಲ್ಲದೆ ಬ್ಯಾಂಕಿನ ವಕೀಲನೆಂದೂ ಆದಾಯ ಬರುತ್ತಿತ್ತು. ಈ ಅಲ್ಪಾದಾಯಗಳನ್ನು ರಾಮುವು ಲೆಕ್ಕಕ್ಕೆ ಇಟ್ಟಿರಲಿಲ್ಲ. ಸಾಲ ಕೊಡಿಸಬೇಕಾದರೆ, ಸ್ವತ್ತುಗಳ ಮೇಲೆ ತನ್ನ ಅಭಿಪ್ರಾಯವನ್ನು ಸೂಚಿಸಬೇಕಾದರೆ ಸರಿಯಾದ ಶುಲ್ಕವನ್ನು ವಸೂಲು ಮಾಡುತ್ತಿದ್ದನು. ಸಾಲ ಕೇಳಲು ಬರುತ್ತಿದ್ದವರ ಮೇಲೆ ಬೇಕಾದಷ್ಟು ಅಧಿಕಾರ ಮಾಡಬಹುದಾಗಿತ್ತು. ಅವರನ್ನು ಮನಸ್ಸಿಗೆ ತೋರಿದಂತೆ ಬಯ್ಯಬಹುದಾಗಿತ್ತು. ಮನೆಯ ಹತ್ತಿರ ಬಂದರೆ, ಆಫೀಸಿನ ಹತ್ತಿರ ಬಾ, ಆಫೀಸಿನ ಹತ್ತಿರ ಬಂದರೆ ಬ್ಯಾಂಕಿನ ಹತ್ತಿರ ಬಾ ಎಂದು ಅಂಡಲೆಸಬಹುದಾಗಿತ್ತು. ರಾಮುವನ್ನು ಅವನ ಕುರುಕುಲವನ್ನೂ ವಿರೋಧಿಸಿ ಯಾರೂ ಬದುಕುವ ಹಾಗೇ ಇರಲಿಲ್ಲ. ಅಂತಹವರು ತಮ್ಮ ಷೇರುಗಳನ್ನು ನೀಗಿಕೊಂಡು ಬ್ಯಾಂಕಿಗೆ ನಮಸ್ಕಾರ ಹೊಡೆದುಬಿಡಬೇಕಾಗುತ್ತಿತ್ತು.
ಈ ಸಂಬಂಧಗಳಿಂದ ರಾಮುವು ಊರಿನಲ್ಲಿ ಒಬ್ಬ ಗಣ್ಯಪುರುಷನಾಗಿಬಿಟ್ಟ. ಅವನನ್ನು ಕೇಳದೆ, ಅವನನ್ನು ಸಮಿತಿಗೆ ಸೇರಿಸಿಕೊಳ್ಳದೇ ಯಾರೂ ಸಾರ್ವಜನಿಕೆ ಕೆಲಸಗಳಿಗೆ ಕೆಹಾಕುವ ಹಾಗೇ ಇರಲಿಲ್ಲ. ಹಾಗೆ ಯಾರಾದರೂ ಉಪೇಕ್ಷೆ ಮಾಡಿದರೆ ಸಮಿತಿ ಹುಟ್ಟಿದಲ್ಲಿಯೇ ಸಾಯುತ್ತಿತ್ತು. ಸಮಿತಿಯ ಸದಸ್ಯರು ಪರಸ್ಪರ ಜಗಳವಾಡಿ ಮುಗಿಸುತ್ತಿದ್ದರು. ರಾಮುವೂ ಮೀಸೆಯನ್ನು ಹುರಿಮಾಡುತ್ತ
“ನಾನು ಹೇಳಲಿಲ್ಲವೇ. ನನ್ನನ್ನು ಬಿಟ್ಟು ಕಮಿಟಿ ಮಾಡುತ್ತೇವೆಂದರೆ…..”
ಎಂದು ಅರ್ಥಗರ್ಭಿತವಾದ ನಗುವೊಂದನ್ನು ತೇಲಿಸುತ್ತಿದ್ದನು.
ರಾಮುವಿನ ಮಿತ್ರರಿಬ್ಬರೂ ಪ್ರಜಾಪ್ರತಿನಿಧಿಸಭೆಯ ಸದಸ್ಯರಾಗಿದ್ದರು. ಸಾಹೇಬರು ಮುಸಲ್ಮಾನರ ಸಂಘದ ಪರವಾಗಿಯೂ, ಶೆಟ್ಟರು ವೆಶ್ಯಸಂಘದ ಪರವಾಗಿಯೂ ಬರುತ್ತಿದ್ದರು. ರಾಮುವೂ ಸದಸ್ಯನಾಗಿಬಿಟ್ಟರೆ ಮೂರು ಜನವೂ ಒಟ್ಟಿಗೆ ಹೋಗುವುದಕ್ಕೆ ಬರುವುದಕ್ಕೆ ಚೆನ್ನಾಗುತ್ತದೆಂದು ಯೋಚಿಸಿದರು. ಬ್ಯಾಂಕಿನಿಂದ ಪ್ರಜಾಪ್ರತಿನಿಧಿ ಸಭೆಗೆ ಒಬ್ಬ ಸದಸ್ಯನನ್ನು ಕಳುಹಿಸಬಹುದಾಗಿತ್ತು. ಬ್ಯಾಂಕಿನ ಡೆರೆಕ್ಟರುಗಳಲ್ಲಿ ಒಬ್ಬರಾದ ಮಳೂರು ಕೃಷ್ಣ ಅಯ್ಯಂಗಾರ್ಯರು ಕೆಲವು ವರ್ಷಗಳಿಂದ ಸಭೆಗೆ ಹೋಗುತ್ತಿದ್ದರು. ಮೂರು ಜನವೂ ಅಯ್ಯಂಗಾರ್ಯರಲ್ಲಿಗೆ ಹೋಗಿ ಒಂದು ಆಲೋಚನೆಯನ್ನು ಅವರ ಮುಂದಿಟ್ಟರು.
“ನೋಡಿ ಅಯ್ಯಂಗಾರ್‍ಯರೇ, ನೀವು ಅಸೆಂಬ್ಲಿ ಸ್ಥಾನ ಬಿಟ್ಟುಕೊಟ್ಟರೆ ಶೆಟ್ಟರು ಕಾರ್‍ಯದರ್ಶಿ ಸ್ಥಾನವನ್ನು ನಿಮಗೆ ಬಿಟ್ಟುಕೊಡುತ್ತಾರೆ. ಬೇಕಾದರೆ ನಾನೇ ಬಿಟ್ಟುಕೊಡುತ್ತೇನೆ. ನೀವು ಖಜಾಂಚಿಗಳಾಗಬಹುದು.”
ಅಯ್ಯಂಗಾರ್ಯರಿಗೆ ವಯಸ್ಸಾಗಿತ್ತು. ಬ್ಯಾಂಕಿನ ಕಾರ್ಯದರ್ಶಿಯಾಗಿ ಸ್ವಲ್ಪ ಕಾಲ ತೀರಿಸಿಕೊಳ್ಳಬೇಕೆಂದು ಅವರ ಬಹಳ ದಿವಸಗಳ ಅಭಿಲಾಷೆಯಾಗಿತ್ತು. ಷರೀಫಖಾನರು ಈ ಆಲೋಚನೆಯನ್ನು ತಮ್ಮ ಮುಂದಿಟ್ಟ ತಕ್ಷಣವೇ ಅಯ್ಯಂಗಾರ್ಯರು ಸಂತೋಷದಿಂದ ಒಪ್ಪಿ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆಯನ್ನು ಕೊಟ್ಟುಬಿಟ್ಟರು. ಮುಂದಿನ ಡೆರೆಕ್ಟರುಗಳ ಸಭೆಯಲ್ಲಿ ರಾಮಚಂದ್ರನನ್ನು ಅಸೆಂಬ್ಲಿಗೆ ಕಳುಹಿಸಿವುದೆಂದು ನಿರ್ಣಯವಾಗಿಬಿಟ್ಟಿತು. ಅಯ್ಯಂಗಾರ್ಯರು ಶೆಟ್ಟರಿಗೆ ಗಂಟುಬಿದ್ದರು.
“ಯಾವಾಗ ರಾಜೀನಾಮೆ ಕಳುಹಿಸುತ್ತೀರಪ್ಪಾ?”
“ಕಳುಹಿಸೋಣ, ಏನು ಅವಸರ?”
ಎಂದು ಶೆಟ್ಟರು ತಳ್ಳಿಕೊಂಡೇ ಬಂದರು. ಒಂದು ದಿವಸ ಅಯ್ಯಂಗಾರ್ಯರು ರೇಗಿ ಗಲಭೆ ಮಾಡಿದಾಗ
“ನಾನು ರಾಜಿನಾಮೆಯನ್ನು ಕೊಡುತ್ತೇನೆಂದು ಹೇಳಿದೆನೇ?”
ಎಂದು ಶೆಟ್ಟರು ಬಾಯಿಬಡಿದುಬಿಟ್ಟರು. ರಾಜಿನಾಮೆ ಕೊಡುತ್ತೇನೆಂದು ಶೆಟ್ಟರು ಹೇಳಿರಲಿಲ್ಲ. ಅವರ ಪರವಾಗಿ ಖಾನರು ಹೇಳಿದ್ದರು. ಖಾನರನ್ನು ಕೇಳಿದಾಗ
“ರಾಜೀನಾಮೆ ಕೊಡಬೇಕಾದವರು ಅವರು. ಅವರನ್ನು ನೀವು ಕೇಳದೆ ನನ್ನನ್ನು ಕೇಳಿದರೆ ಏನು ಪ್ರಯೋಜನ?”
ಎಂದುಬಿಟ್ಟರು. ಅಯ್ಯಂಗಾರ್ಯರು ಸಪ್ಪೆಮುಖ ಹಾಕಿಕೊಂಡು ಸುಮ್ಮನಾದರು. ಇನ್ನು ಹೆಚ್ಚು ಗಲಭೆ ಎಬ್ಬಿಸಿದರೆ ಮುಂದಿನ ಡೆರೆಕ್ಟg ಎಲೆಕ್ಷನ್ನಿನಲ್ಲಿ ಎಲ್ಲಿ ಸೊನ್ನೆ ಬೀಳುವುದೋ ಎಂಬ ಭಯವೂ ಕಾರಣವಾಯಿತು.
ಅಸೆಂಬ್ಲಿಗೆ ಈ ಮೂವರಿಂದ ಯಾವ ಪ್ರಯೋಜನವಾಗದಿದ್ದರೂ ಇವರಿಗೆ ಅಸೆಂಬ್ಲಿಯಿಂದ ಬಹಳ ಪ್ರಯೋಜನವಾಗುತ್ತಿತ್ತು. ವರ್ಷಕ್ಕೆ ಎರಡು ಸಲ ಕೆಯಿಂದ ಮೂರು ಕಾಸು ಖರ್ಚಾಗದಂತೆ ಮೆಸೂರಿಗೆ ಪ್ರವಾಸಗಳಾಗುತ್ತಿದ್ದವು. ಬಿಟ್ಟೀ ಊಟ, ತಿಂಡಿ, ದಿನಭತ್ಯ. ಎಷ್ಟೋ ದಿವಸಗಳು ಅಸೆಂಬ್ಲಿಗೆ ಹೋಗದೆಯೇ ಕನ್ನಂಬಾಡಿ, ಪಟ್ಟಣ, ನಂಜನಗೂಡು ಸುತ್ತಾಡಿಕೊಂಡಿದ್ದು ಕೊನೆಯ ದಿವಸ ಅಸೆಂಬ್ಲಿಯ ಗುಮಾಸ್ತರನ್ನು ಆಶ್ರಯಿಸಿ ಹಾಜರಿ ಹಾಕಿಸಿಕೊಂಡು ಎಲ್ಲಾ ದಿವಸಗಳಿಗೂ ಭತ್ಯ ಹಣವನ್ನು ವಸೂಲ್ಮಾಡಿಕೊಳ್ಳುತ್ತಿದ್ದರು.
ಸರ್ಕಾರದ ವಿರೋಧವಾಗಿ ಯಾರು ಮಾತನಾಡಿದರೂ ಅವರನ್ನು ಪ್ರತಿಭಟಿಸುವುದು ತನ್ನ ಕರ್ತವ್ಯವೆಂದು ರಾಮಚಂದ್ರ ತಿಳಿದುಕೊಂಡಿದ್ದನು. ಅಸೆಂಬ್ಲಿಯ ಸದಸ್ಯರಲ್ಲಿ ಯಾರಾದರೂ
“ಕಂದಾಯ ಹೊರೆ ತಾಳಲಾರೆವು ಸ್ವಾಮಿ. ಮಳೆ ಬೆಳೆಯೆಲ್ಲಾ ಹೋಗಿಬಿಟ್ಟಿತು. ಹಳ್ಳಿಯ ಜನ ತಿನ್ನುವುದಕ್ಕಿಲ್ಲದೆ ಕಂಗಾಲಾದರು”
ಎಂದು ಬೊಬ್ಬೆ ಹಾಕಿದರೆ, ರಾಮಚಂದ್ರ
“ಇಷ್ಟುಸ್ವಲ್ಪ ಕಂದಾಯ ಹಾಕಿ ನಮಗೆ ಇಷ್ಟೊಂದು ಸೌಕರ್ಯಗಳನ್ನು ಕಲ್ಪಿಸಿಕೊಟ್ಟಿರುವ ಘನ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ನಮ್ಮಲ್ಲಿಯೇ ಕಂದಾಯ ಹೆಚ್ಚು ಎನ್ನುವ ಇವರು ಇಂಗ್ಲೆಂq ಅಮೇರಿಕಾ ದೇಶಗಳನ್ನು ಪರಿಶೀಲಿಸಬೇಕು.”
ಎಂದು ಮಾರುತ್ತರ ಕೊಡುತ್ತಿದ್ದನು. ಮತ್ತೊಬ್ಬ ಸದಸ್ಯ “ಸರ್ಕಾರದ ಅಧಿಕಾರಿಗಳ ಸಂಬಳ ತಗ್ಗಿಸಬೇಕು. ಅವರಿಗೆ ಸಂಬಳ ಹೆಚ್ಚಿದಷ್ಟು ದರ್ಪ, ದುರಭ್ಯಾಸಗಳು ಹೆಚ್ಚುತ್ತವೆ. ಗ್ರಾಮಾಂತರಗಳಲ್ಲಿ ಅವರ ಹಾವಳಿಯಂತೂ ಸಹಿಸಲಸಾಧ್ಯವಾಗಿದೆ”
ಎಂದರೆ, ರಾಮಚಂದ್ರ
“ನಮ್ಮ ಅಧಿಕಾರಗಳ ದಕ್ಷತೆಗೆ, ಅವರ ಯೋಗ್ಯತೆಗೆ ಈಗ ಕೊಡುತ್ತಿರುವ ಸಂಬಳ ಬಹಳ ಕಡಿಮೆ. ಬ್ರಿಟಿ ಹಿಂದೂಸ್ಥಾನದಲ್ಲಿ ಕೊಡುತ್ತಿರುವಷ್ಟನ್ನು ಕೂಡ ಕೊಡದಿರುವುದು ಶೋಚನೀಯ. ಅಧಿಕಾರಿಗಳ ಸಂಬಳದ ಬಗ್ಗೆ ವಿರೋಧವಾಗಿ ಮಾತನಾಡುವವರಿಗೆ ಜವಾಬ್ದಾರಿಯಿಲ್ಲ. ಜವಾಬ್ದಾರಿ ಸ್ಥಾನಗಳ ಕಷ್ಟ ಸುಖಗಳು ಗೊತ್ತಿಲ್ಲ”
ಎಂದು ಆರ್ಭಟಿಸಿ ಅಧಿಕಾರಿ ವರ್ಗದ ಚಿರಕೃತಜ್ಞತೆಗೆ ಪಾತ್ರನಾಗುತ್ತಿದ್ದನು. ಸರ್ಕಾರದ ಕೃಪೆಗೆ ಪಾತ್ರವಾಗಿದ್ದ ಪತ್ರಿಕೆಗಳು ರಾಮಚಂದ್ರನ ಭಾಷಣವನ್ನು ದಪ್ಪಕ್ಷರಗಳಲ್ಲಿ ಮುದ್ರಿಸಿ ಅವನ ‘ದೇಶಾಭಿಮಾನ’ವನ್ನು ಮನದಣಿಯೆ ಕೊಂಡಾಡುತ್ತಿದ್ದವು.
ಸರ್ಕಾರದವರು ರಾಮುವಿನ ನಿಷ್ಠತೆಯನ್ನು ಗಮನಿಸದಿರಲಿಲ್ಲ. ತಮ್ಮ ಪಕ್ಷವನ್ನು ಇಷ್ಟು ಅಭಿಮಾನದಿಂದ ಪ್ರತಿಪಾದಿಸುವ ರಾಮಚಂದ್ರನನ್ನು ಸಮಯಾನುಕೂಲವೊದಗಿದಾಗ ಗೌರವಿಸಬೇಕೆಂದು ಸರ್ಕಾರದವರೂ ನಿಶ್ಚಯಿಸಿಕೊಂಡಿದ್ದರು.
*****
ಮುಂದುವರೆಯುವುದು
ಸಂಧ್ಯಾ ರಾಗ – ೧೯
