ಸಂಧ್ಯಾ ರಾಗ – ೨೬

ರಾಮಚಂದ್ರನ ಕೋರ್ಟು ಜಗಳಕ್ಕೆ ಪ್ರಸಿದ್ಧವಾಗಿಬಿಟ್ಟಿತು. ಅವನ ಕೋರ್ಟಿಗೆ ಹೋಗುತ್ತಿದ್ದ ಲಾಯರು ಹೊಸಬನಾಗಲಿ, ಹಳಬನಾಗಲಿ ಅವನೊಂದಿಗೆ ಕಾದದೆ ಬರುತ್ತಿರಲಿಲ್ಲ. ಕಕ್ಷಿಗಾರರ ಪಕ್ಷವೇನಿದೆಯೆಂದು ಲಾಯರು ಹೇಳುವುದಕ್ಕೆ ಅವಕಾಶ ಸಿಕ್ಕುತ್ತಿರಲಿಲ್ಲ. ಮ್ಯಾಜಿಸ್ಟ್ರೇಟರಿಗೆ ಮುಂದಿನ ಕೇಸಿಗೆ ಹೋಗುವ ಆತುರ. ಎಲ್ಲರಿಗಿಂತಲೂ ಹೆಚ್ಚಾಗಿ ಕೇಸುಗಳ ವಿಚಾರಣೆಯನ್ನು ನಡೆಸಿದ್ದೇನೆಂದು ತೋರಿಸುವ ಭರದಲ್ಲಿ ಕಕ್ಷಿಗಾರರೂ, ಲಾಯರುಗಳೂ ನುಚ್ಚು ನುರಿಯಾಗಿಬಿಡುತ್ತಿದ್ದರು. ಮ್ಯಾಜಿಸ್ಟ್ರೇಟರು ಆಕ್ಷೇಪಣೆಯನ್ನು ತೆಗೆಯುತ್ತಲೇ ಲಾಯರು
ಮಹಾಸ್ವಾಮಿಯವರು ಬೇಕಾದ ಹಾಗೆ ನಿರ್ಣಯಮಾಡಬಹುದು. ಕೇಸನ್ನು ವರ್ಗಾಯಿಸಬೇಕೆಂದು ನಾವು ಅರ್ಜಿ ದಾಖಲು ಮಾಡುವವರಿದ್ದೇವೆ” ಎಂದು ಹೇಳಿಬಿಡುತ್ತಿದ್ದರು.
ಕೋರ್ಟೆಂದರೆ ಅಸಂತುಷ್ಟಿಯ ತೌರುಮನೆಯಾಗಿಬಿಟ್ಟಿತು. ಮ್ಟಾಜಿಸ್ಟ್ರೇಟರ ಮೇಲೆ ನಿತ್ಯವೂ ಹೆಕೋರ್ಟಿಗೆ ದೂರುಗಳು ಹೋಗುತ್ತಲೇ ಇದ್ದವು. ಹಾಗೆ ದೂರು ಹೊತ್ತ ಲಾಯರು ಕೋರ್ಟಿಗೆ ಬಂದರೆ ಅವನನ್ನು ಮನಸ್ಸಿಗೆ ಬಂದ ಹಾಗೆ ಬಯ್ದು ತನ್ನ ಕೋಪವನ್ನು ರಾಮಚಂದ್ರ ಉಪಶಮನ ಮಾಡಿಕೊಳ್ಳುತ್ತಿದ್ದನು. ರಾಮಚಂದ್ರನ ಕೋರ್ಟು ವ್ಯವಹಾರಗಳೆಂದರೆ ನಗೆಯ ಮಾತುಗಳಾಗುತ್ತ ಬಂದವು.
ಸೊಸೆಟಿ, ಬ್ಯಾಂಕುಗಳು ತಪ್ಪಿಹೋದ ಮೇಲೆ ರಾಮಚಂದ್ರನ ಮೇಲು ವರಮಾನ ನಿಂತೇ ಹೋಯಿತು. ಅವನಿಗೆ ಬರುತ್ತಿದ್ದ ಸಂಬಳದಲ್ಲಿ ಸಂಸಾರದ ಖರ್ಚು ಕಳೆದು ಹೆಚ್ಚು ಸಿಗುತ್ತಿರಲಿಲ್ಲ. ಒಮ್ಮೊಮ್ಮೆ ತಿಳಿದ ಲಾಯರುಗಳ ದಯೆಯಿಂದ ಒಂದೆರಡು ಉಂಡೆ ನೋಟುಗಳು ಕೆ ಹತ್ತುತ್ತಿದ್ದವು. ಅದನ್ನು ಬರುಬರುತ್ತ ಕೋರ್ಟಿನ ಕ್ರಮ ಮಾಡುತ್ತ ಬಂದನು. ಒಂದೊಂದು ಸಲ ಎರಡು ಪಕ್ಷದವರಿಂದಲೂ ಮರ್ಯಾದೆಯನ್ನು ಸ್ವೀಕರಿಸಿ ಹೆಚ್ಚು ಕೊಟ್ಟವರ ಕಡೆ ನ್ಯಾಯವನ್ನು ತೀರ್ಮಾನಿಸುತ್ತಿದ್ದನು.
ಕ್ರಿಮಿನ ಮೊಕದ್ದಮೆಯೆಂದರೆ ನ್ಯಾಯ ಯಾವಾಗಲೂ ಪೋಲೀಸಿನವರ ಕಡೆಯದೆಂದೇ ಮ್ಯಾಜಿಸ್ಟ್ರೇಟರ ಭಾವನೆ. ಆಪಾದಿತನಿಗೆ ಹನ್ನೊಂದು ಗಂಟೆಗೆ ಬರಹೇಳಿ ನಾಲ್ಕೂವರೆ ಗಂಟೆಗೆ ತೀರ್ಪನ್ನು ಕೊಡುತ್ತಿದ್ದುದು ರಾಮಚಂದ್ರನ ಕೋರ್ಟಿನ ಹಿರಿಮೆಯಾಗಿದ್ದಿತು. ಲಾಯರು ಸೆಷ ಕೋರ್ಟಿನಲ್ಲಿ ಜಾಮೀನಿಗೆ ಅರ್ಜಿ ಹಾಕಿ ಆಪಾದಿತನನ್ನು ಮನೆಗೆ ಕರೆದೊಯ್ಯಲು ಸಾಧ್ಯವಾಗದಂತೆ ಕೋರ್ಟು ಮುಚ್ಚುವ ಹೊತ್ತಿಗೆ ತೀರ್ಪು ಹೇಳುತ್ತಿದ್ದನು. ನಿರಪರಾಧಿಗಳಾದ ಆಪಾದಿತರು ಅನವಶ್ಯಕವಾಗಿ ಒಂದು ರಾತ್ರಿಯನ್ನು ಜೆಲಿನಲ್ಲಿ ಕಳೆಯಬೇಕಾಗುತ್ತಿತ್ತು.
ಇದು ಆಗಾಗ್ಗೆ ಎಲ್ಲ ಪತ್ರಿಕೆಗಳಲ್ಲಿಯೂ ಹರಕು ಮುರಕು ಮಾತಾಗಿ ಪ್ರಕಟವಾಗುತ್ತಿತ್ತು. ‘ವೀರ ಕರ್ಣಾಟಕ’ದಲ್ಲಿ ಮಾತ್ರ ಹೆಚ್ಚು ವಿವರಗಳೂ ಹೆಚ್ಚು ಸಂಗತಿಗಳೂ ಪ್ರಕಟವಾಗುತ್ತಿದ್ದವು. ಪತ್ರಿಕೆಯ ‘ನ್ಯಾಯ ಸ್ಥಾನ ವಿಭಾಗ’ದಲ್ಲಿ ಮೊಕದ್ದಮೆಯ ವಿವರ, ತೀರ್ಪುಗಳು ಆಮೂಲಾಗ್ರವಾಗಿ ಪ್ರಕಟವಾಗುತ್ತಿದ್ದವು. ಕಾಯಿದೆ ಪಾಠಮಾಡದ ಸಾಮಾನ್ಯ ಹುಡುಗರು ಸಹಾ ಈ ನ್ಯಾಯ ವಿಮರ್ಶೆಯ ರೀತಿಯನ್ನು ಅವಹೇಳನ ಮಾಡಲಾರಂಭಿಸಿದರು.
ತನ್ನ ವ್ಯವಹಾರವೆಲ್ಲಾ ಇಷ್ಟು ವಿವರವಾಗಿ ಪತ್ರಿಕೆಯವರಿಗೆ ಹೇಗೆ ತಿಳಿಯುತ್ತದೆ ಎಂದು ರಾಮಚಂದ್ರ ಯೋಚಿಸಿದನು. ‘ವೀರ ಕರ್ಣಾಟಕ’ ಸಂಪಾದಕರಿಗೆ ಹೇಳಿ ಕಳುಹಿಸಿ ಇಂತಹ ಸುದ್ದಿಗಳನ್ನು ಪ್ರಕಟಿಸಬಾರದೆಂದು ತಿಳಿಸೋಣವೇ ಎಂದು ಯೋಚಿಸಿದನು. ಹೇಳಿ ಕಳುಹಿಸಿದ್ದ ಸಂಗತಿಯನ್ನೂ ಸಂಪಾದಕ ಪ್ರಕಟಿಸಿಬಿಟ್ಟರೆ? ರಾಮಚಂದ್ರನಿಗೆ ಬಹಳ ಯೋಚನೆಗಿಟ್ಟುಕೊಂಡಿತು. ಏನು ಮಾಡುವುದಕ್ಕೂ ಮಾರ್ಗವಿಲ್ಲದಂತಾಯಿತು.
‘ಏನು ಮಾಡುವುದು’ ಎಂದು ಯೋಚಿಸುತ್ತಿದ್ದಂತೆಯೇ ‘ವೀರ ಕರ್ಣಾಟಕ’ದಲ್ಲಿ ಒಬ್ಬ ಮ್ಯಾಜಿಸ್ಟ್ರೇಟರು ಒಂದು ತೀರ್ಪನ್ನು ಬರೆದು ಅನಂತರ ಎದುರು ಕಡೆಯವರ ಸಂಭಾವನೆಗೆ ಮರುಳಾಗಿ ಆ ತೀರ್ಪನ್ನು ರದ್ದುಮಾಡಿ ಬೇರೆ ತೀರ್ಪನ್ನು ಕೊಟ್ಟ ವಿಚಾರ ಪ್ರಕಟವಾಗಿಬಿಟ್ಟಿತು. ಪತ್ರಿಕೆಯವರು ಕೇಸಿನ ವಿವರವನ್ನೆಲ್ಲಾ ಹೆಕೋರ್ಟಿಗೆ ಕಳುಹಿಸಿಕೊಟ್ಟು ಹೆಕೋರ್ಟು ವಿಚಾರಣೆಯನ್ನು ಆರಂಭಿಸದಿದ್ದರೆ ತಾವು ಮ್ಯಾಜಿಸ್ಟ್ರೇಟರ ಕುಲಗೋತ್ರಗಳನ್ನೆಲ್ಲಾ ಪ್ರಕಟಿಸುವುದಾಗಿ ತಿಳಿಸಿದರು. ಹೆಕೋರ್ಟಿನ ಅಧಿಕಾರಿಗಳು ರಾಮಚಂದ್ರನ ವ್ಯವಹಾರಗಳನ್ನು ವಿಚಾರಿಸಲಾರಂಭಿಸಿದರು. ಇದರ ಪರಿಣಾಮವಾಗಿ ರಾಮಚಂದ್ರ ಎರಡು ತಿಂಗಳು ರಜೆ ತೆಗೆದುಕೊಳ್ಳಬೇಕಾಯಿತು.
ರಾಮಚಂದ್ರ ರಜೆ ತಗೆದುಕೊಂಡು ಮನೆಯಲ್ಲಿ ಕುಳಿತಾಗಲೇ ಗೋಪಾಲನಿಗೆ ಪತ್ರಿಕೆಯಲ್ಲಿ ಮ್ಟಾಜಿಸ್ಟ್ರೇಟರ ಬರುತ್ತಿದ್ದ ಸುದ್ದಿಗಳ ಮರ್ಮ ಗೊತ್ತಾದದ್ದು. ಈ ಸುದ್ದಿಗಳೆಲ್ಲಾ ‘ವೀರ ಕರ್ಣಾಟಕ’ದಲ್ಲಿ ಪ್ರಕಟವಾದದ್ದು ಅವನಿಗೆ ತುಂಬ ಆಶ್ಚರ್ಯವನ್ನುಂಟುಮಾಡಿತು. ‘ಇದರ ಹಿಂದೆ ವೆಂಕಟೇಶಯ್ಯನ ಕೆಯೇನಾದರೂ ಇರಬಹುದೇ’ ಎಂದು ಯೋಚಿಸಿದನು. ಮೊದಲು ಅಣ್ಣನನ್ನು ಮಾತನಾಡಿಸಿ ಮುಂದೆ ವೆಂಕಟೇಶಯ್ಯನನ್ನು ಕಾಣುವುದೆಂದು ನಿರ್ಧರಿಸಿದನು. ಆದರೆ ಅಣ್ಣನನ್ನು ಕೇಳುವುದು ಹೇಗೆ? ಹೇಗಾದರೂ ಕೇಳಿಬಿಡುವುದೆಂದೇ ನಿಶ್ಚಯಿಸಿದನು.
ರಾಮಚಂದ್ರ ಭೂಮಿಗೆ ಇಳಿದುಹೋಗಿಬಿಟ್ಟ. ಈ ಪತ್ರಿಕಾ ಸುದ್ದಿಯನ್ನು ಇಷ್ಟುದೂರ ಬೆಳೆಯಲು ಅವಕಾಶ ಕೊಟ್ಟದ್ದು ತಪ್ಪಾಯಿತೆಂದು ತಿಳಿದುಕೊಂಡ. ‘ಮುಂದೇನು ಗತಿ. ಮಾತು ಹೆಕೋರ್ಟಿನವರೆಗೂ ಮುಟ್ಟಿದೆ. ಕೆಲಸದ ಬಾಯಿಗೆ ಮಣ್ಣು ಬಿದ್ದರೇನು ಗತಿ’ ಎಂದು ಯೋಚನೆ ಹಿಡಿಯಿತು. ಅನ್ನ ಸೇರದಾಯಿತು, ನಿದ್ದೆ ಬಾರದಾಯಿತು. ತನ್ನ ಪರವಾಗಿ ಯಾರಾದರೂ ಸ್ವಲ್ಪ ಕಷ್ಟಪಡಬಾರದೇ ಎಂದು ಯೋಚಿಸಿದನು. ಯಾರನ್ನು ಕೇಳುವುದು? ಈಗ ತನ್ನ ಬಡತನವನ್ನು ಶಪಿಸಿದನು. ನಿಜವಾದ ಬಂಧುಗಳು, ಹಿತೆಷಿಗಳು, ಕಷ್ಟದಲ್ಲಿ ಜತೆಗೆ ನಿಲ್ಲುತ್ತಿದ್ದವರು ತನ್ನ ನಡತೆಗೇ ಬೇಸರ ಪಟ್ಟು ದೂರವಾಗಿದ್ದರು. ಇನ್ನು ಗೆಳೆಯರು, ಗೆಳೆಯರು ಯಾರೂ ಇರಲೇ ಇಲ್ಲವೆಂದು ನೆನೆದು ಬಹಳ ದುಃಖಿತನಾದನು. ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ, ಬೇರೆಬೇರೆ ಕಾರಣಗಳಿಗೆ ತನ್ನ ಸಮೀಪಗತರಾದವರು. ಈಗ ಅವರು ಯಾರಿಗೂ ತನಗೂ ನಿಕಟಬಾಂಧವ್ಯವಿರಲಿಲ್ಲ. ‘ನನ್ನ ಅಧಿಕಾರ ಹಣ, ದರ್ಪಗಳೆಲ್ಲವೂ ಈಗ ನಿರರ್ಥಕವೇ’ ಎಂದು ಚಿಂತಿಸಿದನು. ಅಣ್ಣನ ಅವಗುಣಗಳನ್ನು ಅವನ ದುಃಖವು ಮರೆಸುತ್ತಿತ್ತು. ಗೋಪಾಲ ಸಮಾಧಾನ ಹೇಳಲು ಧೆರ್ಯ ಮಾಡಿದನು.
“ಅಣ್ಣಾ!”
“ಏನಪ್ಪಾ ಗೋಪೂ?”
“ಒಂದು ಮಾತು ಕೇಳು, ಅಂದರೆ ಕೇಳುತ್ತೇನೆ.”
“ಕೇಳು.”
“ವೀರ ಕರ್ಣಾಟಕದಲ್ಲಿ ಬಂದಿರುವುದು ನಿಜವೇ”
“ಅದೆಲ್ಲಾ ನಿನಗೆ ಸಂಬಂಧವಿಲ್ಲದ ವಿಚಾರ ಗೋಪೂ. ನಿನ್ನ ಪಾಡಿಗೆ ನೀನು ಓದಿಕೊಂಡು ಇರು.”
“ನನಗೆ ಸಂಬಂಧಪಟ್ಟ ವಿಚಾರವಾದ್ದರಿಂದಲೇ ಕೇಳಿದೆ. ಆ ಪತ್ರಿಕೆಯ ವಿಚಾರ ನನಗೆ ಒಂದೆರಡು ವಿಷಯಗಳು ಗೊತ್ತಿವೆ.”
“ಏನು ಹೇಳು”
“ನಾನು ಕೇಳಿದ ಪ್ರಶ್ನೆಗೆ ಮೊದಲು ಉತ್ತರ ಬರಲಿ.”
ರಾಮಚಂದ್ರನಿಗೆ ಬಹಳ ಕಷ್ಟಕ್ಕೆ ಬಂತು. ತನ್ನ ಚಾರಿತ್ರ್ಯವನ್ನು ತಮ್ಮನೆದುರಿಗೆ ಒಪ್ಪಿಕೊಳ್ಳಬೇಕಲ್ಲಾ ಎಂದು ವಿಷಾದಿಸಿದನು. ಆದರೆ ವಿಧಿಯಿಲ್ಲ – ‘ಆಪತ್ಕಾಲೇ ನಾಸ್ತಿ ಮರ್ಯಾದಾ.’
“ನಿಜ ಗೋಪೂ, ಅವಿವೇಕದ ಕೆಲಸ ಮಾಡಿದೆ. ಅದೇನದು ‘ವೀರ ಕರ್ಣಾಟಕ’ದ ವಿಚಾರ?”
ಗೋಪುವಿಗೆ ಬಹಳ ದುಃಖವಾಯಿತು. ಅಣ್ಣನ ವಿದ್ಯೆ, ಗೌರವ, ಸಂಸ್ಕೃತಿ, ಅಧಿಕಾರ ಎಲ್ಲದರ ಪರ್ಯವಸಾನವೂ ಇಷ್ಟರಲ್ಲಿ ಆಯಿತೇ? ಬಾಳು ನಡತೆಯಿಲ್ಲದೆ, ನೀತಿಯಿಲ್ಲದೆ ಮುಂದಕ್ಕೆ ಸಾಗಬೇಕೆ? ಹಣ ಸಂಪಾದಿಸುವುದೊಂದೇ ಜೀವನದ ಗುರಿಯೇ ಎಂದು ಯೋಚಿಸಿದನು.
“ಅದೇನು ಗೋಪು, ವೀರಕರ್ಣಾಟಕದ ವಿಷಯ?”
“ಅದಕ್ಕೂ ವೆಂಕಟೇಶ ಭಾವನಿಗೂ ಸ್ವಲ್ಪ ಸಂಬಂಧವಿದೆ.”
“ಹಾ! ಹಾಗಂದರೆ? – ”
“ಹಾಗಂದರೆ – ಅವನು ಅದರ ಮಾಲಿಕ. ಸಂಪಾದಕ ಅನಂತರಾಯ ಅದರ ನೌಕರ ಅಷ್ಟೇ.”
“ಹಾಗಾದರೆ ನಾನು ಕೆಟ್ಟೇ!”
“ಏತಕ್ಕೆ ಹಾಗೆನ್ನುವೆ?”
“ವೆಂಕಟೇಶ ಹಿಂದೆ ಒಂದು ಮಾತು ಹೇಳಿದ್ದ – ಈಗ ಅವನ ಕೆ ಮೇಲುಗೆ. ಅವನನ್ನು ನಾನು ಮನೆಯಿಂದ ಓಡಿಸಿದ್ದೆ – ಈಗ ನನ್ನನ್ನು ಕೆಲಸದಿಂದ ಓಡಿಸುತ್ತಾನೆ.”
“ಇದಕ್ಕೇನು ಮಾಡುವೆ?”
“ಏನು ಮಾಡಲಿ ಹೇಳು. ಇತ್ತ ಹೊಳೆ, ಅತ್ತ ಕೆರೆ ಎನ್ನುವ ಹಾಗಾಗಿದೆ ನನ್ನ ಬಾಳು.”
“ವೆಂಕಟೇಶ ಭಾವನನ್ನು ಒಮ್ಮೆ ಏತಕ್ಕೆ ನೋಡಬಾರದು?”
“ಪ್ರಯೋಜನವೇನು?”
“ನಿನಗೆ ತೊಂದರೆಯಾಗದಂತೆ ಅವನು ಇದರ ಇತ್ಯರ್ಥ ಮಾಡಬಹುದು.”
“ಅಯ್ಯೋ – ನನ್ನ ಹಣೆಯ ಬರಹವೇ. ವೆಂಕಟೇಶನ ಕೃಪೆಗೆ ನಾನು ಪಾತ್ರನಾಗಬೇಕಾಗಿದೆಯಲ್ಲಾ.”
“ಹಾಗಾದರೆ ಕೆಲಸವನ್ನು ಕಳೆದುಕೊಳ್ಳುವೆಯೇನು?”
“ಇದು ವೆಂಕಟೇಶನ ಕೆಯೂ ಮೀರಿದೆ. ಹೆಕೋರ್ಟಿನವರೆಗೆ ಹೋಗಿದೆಯಪ್ಪಾ. ಅವರು ವಿಚಾರಣೆಗೆ ಆರಂಭಿಸಿದ್ದಾರೆ.”
“ಪಾರ್ಟಿಗಳು ರಾಜಿಯಾಗಿ ಕೇಸನ್ನು ಹಿಂದಕ್ಕೆ ತೆಗೆದುಕೊಂಡರೆ?”
“ಆಗ ಆಗಬಹುದು. ಅಷ್ಟು ಮಾಡುವವರು ಯಾರು?”
“ವೆಂಕಟೇಶ ಭಾವ.”
“ಅವನ ಕಾಲು ಹಿಡಿಯುವ ಹೊತ್ತು ಬಂತೇ?”
“ನಿನ್ನ ತಂಗಿ ಮನೆಗೆ ನೀನು ಹೋಗುವುದಕ್ಕೆ ಇಷ್ಟೇಕೆ ಯೋಚನೆ?”
ಅಳೆದೂ ಸುರಿದೂ ಕೊನೆಗೆ ವೆಂಕಟೇಶನನ್ನು ಕಾಣುವುದೆಂದು ರಾಮಚಂದ್ರ ನಿಶ್ಚಯಿಸಿದನು. ಧನ, ಅಧಿಕಾರ ದರ್ಪಗಳಿಂದ ವಿಶ್ವರೂಪ ತಾಳಿದ್ದ ದೇಹವು ಕುಗ್ಗಿ ಕುಬ್ಜಾವತಾರವನ್ನು ತಾಳಿಬಿಟ್ಟಿತು. ಮನಸ್ಸು ಬಹಳ ನೊಂದಿತು. ವೆಂಕಟೇಶನ ಮಾತು ಸತ್ಯವಾಯಿತಲ್ಲಾ ಎಂದು ಕೊರಗಿದನು.
ರಾಮಚಂದ್ರ ತಮ್ಮ ಮನೆಗೆ ಬಂದುದು ಶಾಂತನಿಗೆ ಆಶ್ಚರ್ಯವನ್ನುಂಟುಮಾಡಿತು. ರೆಲಿನಿಂದಿಳಿದವನು ನೇರವಾಗಿ ಮಾಡg ‘ಹಿಂದೂ ಹೋಟೆಲಿ’ನಲ್ಲಿ ಸಾಮಾನನ್ನು ಹಾಕಿ ಸ್ನಾನ ಉಪಹಾರಗಳನ್ನು ತೀರಿಸಿಕೊಂಡು ವೆಂಕಟೇಶಯ್ಯನ ಮನೆಗೆ ಹೊರಟನು. ಅಣ್ಣನಿಗೆಂದು ಕಾಫಿ ಮಾಡಿ ತಂದು ಕೊಟ್ಟು ಶಾಂತಾ
“ಸಾಮಾನೆಲ್ಲಿ ರಾಮಣ್ಣಾ?” ಎಂದಳು.
“ಹೋಟೆಲಿನಲ್ಲಿ ಹಾಕಿ ಬಂದೆನಮ್ಮ.”
“ಏತಕ್ಕೆ. ಇಲ್ಲೇ ತರಬಾರದಿತ್ತೇ?”
“ಸ್ವಲ್ಪ ಅವಸರದಲ್ಲಿ ಬಂದೆ. ಹೆಚ್ಚು ನಿಲ್ಲುವ ಹಾಗಿಲ್ಲ. ವೆಂಕಟೇಶ ಎಲ್ಲಿ?”
“ಬೆಳಿಗ್ಗೆ ಎದ್ದು ಎಲ್ಲಿಗೋ ಹೋದರು.”
“ಬರುವುದು ಯಾವಾಗ?”
“ಗೊತ್ತಿಲ್ಲ. ಒಂದೊಂದು ದಿವಸ ಊಟಕ್ಕೇ ಬರುವುದಿಲ್ಲ.”
ರಾಮಚಂದ್ರನಿಗೆ ಆಶಾಭಂಗವಾಯಿತು. ಮುಖ ಸಪ್ಪೆಯಾಯಿತು.
“ಏತಕ್ಕಣ್ಣಾ, ಇಗಲೇ ನೋಡಬೇಕಾಗಿತ್ತೇ… ಏನು ವಿಷಯ – ನೀನೇತಕ್ಕೆ ಹೀಗೆ ಇಳಿದು ಹೋಗಿದ್ದೀ – ಮೆಯಲ್ಲಿ ಚೆನ್ನಾಗಿಲ್ಲವೇ?”
“ಏನೂ ಇಲ್ಲ ಶಾಂತಾ. ನಿನ್ನ ಗಂಡ ನನಗೊಂದು ಉಪಕಾರ ಮಾಡಬೇಕಾಗಿದೆ.”
“ಉಪಕಾರವೇ? ನಿನಗೆ ಅವರು ಏನು ಮಾಡಲಾಗುತ್ತದೆ? ನಾವು ಬಡವರು.”
“ಶಾಂತಾ, ನನ್ನ ಕುತ್ತಿಗೆಗೆ ಬಂದಿದೆಯಮ್ಮ. ವೀರಕರ್ಣಾಟಕ ನೋಡಿಲ್ಲವೇ? ನನ್ನ ಕೆಲಸದ ಬಾಯಿಗೆ ಮಣ್ಣು ಬೀಳುವ ಹಾಗಿದೆ.”
“ಇದಕ್ಕೆ ಅವರೇನು ಮಾಡಲಾಗುತ್ತದೆ?”
“ವೆಂಕಟೇಶ ಮನಸ್ಸು ಮಾಡಿದರೆ ಪತ್ರಿಕೆಯಲ್ಲಿ ನಾಲ್ಕು ಒಳ್ಳೆಯ ಮಾತು ಬರೆಯಬಹುದು. ನನ್ನ ಮೇಲೆ ಹೆಕೋರ್ಟಿಗೆ ದೂರು ಹೊತ್ತಿರುವವರಿಗೆ ಹೇಳಿ ರಾಜಿ ಮಾಡಿಸಬಹುದು.”
“ಅವರಿಗೂ ಇದಕ್ಕೂ ಏನು ಸಂಬಂಧ”
“ಅವನ ಕೆಮೇಲು ಶಾಂತಾ ಈಗ. ನಾನು ಕೆಳಗೆ ಬಿದ್ದಿದ್ದೇನೆ.”
“ಅವರೂ ಒಂದು ದಿವಸ ಬಿದ್ದಿದ್ದರಲ್ಲವೇ? ನೀನು ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರದೂಡಿದ್ದೆಯಲ್ಲವೇ? ಈಗ ನಿನಗೇತಕ್ಕೆ ಉಪಕಾರ ಮಾಡಬೇಕು?”
“ನನ್ನ ತಂಗಿ ನೀನು – ನೀನೂ ಹೀಗೆನ್ನುವೆಯಾ?”
“ತಂಗಿ – ನಿನಗೆ ತಂಗಿ, ತಮ್ಮ, ಹೆಂಡತಿ, ಮಕ್ಕಳು ಯಾರೂ ಇಲ್ಲ. ಧನ, ಅಧಿಕಾರ, ದರ್ಪಗಳೇ ನಿನ್ನ ಸಕಲ ಸಾಮ್ರಾಜ್ಯ.”
“ನಾನು ಮಹಾಪರಾಧಿ ಶಾಂತಾ. ನಿಮ್ಮೆಲ್ಲರ ವಿಚಾರದಲ್ಲಿಯೂ ಬಹಳ ಕೆಟ್ಟರೀತಿಯಲ್ಲಿ ನಡೆದುಕೊಂಡೆ. ನನ್ನನ್ನು ಕ್ಷಮಿಸಿ ಕಾಪಾಡಬೇಕು”
ಎಂದು ಬಹಳ ದೀನನಾಗಿ ಕೇಳಿಕೊಂಡ. ಶಾಂತವದನದ ಮೇಲೆ ರಾಮಚಂದ್ರನ ಪೂರ್ವ ಚರಿತ್ರೆ ಚಿತ್ರಿತವಾಗುತ್ತಿತ್ತು. ಲಕ್ಷ್ಮಣ ಜಯರ ಜೀವನವು ನೆನಪಿಗೆ ಬಂದು ಅವಳ ಹೃದಯವನ್ನು ಕಲ್ಲು ಮಾಡಿತು. ‘ಎಲ್ಲರ ಗೋರಿಯ ಮೇಲೆ ತಾನು ಸಾಮ್ರಾಜ್ಯವನ್ನು ಕಟ್ಟಬೇಕೆಂದು ಬಯಸಿದ, ಎಲ್ಲರೂ ಹಾಳಾಗಿ ಹೋಗಲಿ, ತಾನೊಬ್ಬ ಬದುಕಿದ್ದರೆ ಸಾಕೆಂದು ಹಾರೆಸಿದ… ಈಗ ಇವನು ಹಾಳಾಗಿಹೋಗುವ ಕಾಲ ಬಂದಿದೆ, ಹಾಳಾಗಿ ಹೋಗಲಿ. ಇದರಿಂದ ಲೋಕಕ್ಕೆ ಕ್ಷೇಮವಾದೀತು’ ಎಂದು ಮನಸ್ಸು ಕಟುವಾಗಿ ನುಡಿಯಿತು. ಮರುಕ್ಷಣವೇ ‘ನನ್ನ ಅಣ್ಣನಲ್ಲವೇ? ಅವಿವೇಕದಿಂದ ಅವನು ಎಲ್ಲರನ್ನೂ ಹಿಂಸಿಸಿದರೆ ನಾವೂ ಹಿಂಸಿಸುವುದೇ? ಹಿಂಸೆಯಿಂದ ಅವನು ದೊಡ್ಡವನಾದ, ಕ್ಷಮೆಯಿಂದ ನಾವು ಚಿಕ್ಕವರಾದರೂ ಚಿಂತೆಯಿಲ್ಲ’ ಎಂದು ಅಂತಃಕರಣವು ನುಡಿಯಿತು.
ಶಾಂತಾ ಅಂತಃಕರಣದ ಈ ಹೊಯ್ದಾಟಕ್ಕೆ ಸಿಕ್ಕಿರುವಾಗಲೇ ವೆಂಕಟೇಶನೂ ಮನೆಗೆ ಬಂದ. ರಾಮಚಂದ್ರನನ್ನು ನೋಡಿ ಪರಮಾಶ್ಚರ್ಯವಾಯಿತು. ರಾಯರ ಮನೆಯಲ್ಲಿ ಆ ಪ್ರಕರಣವಾದ ಮೇಲೆ ಇಂದೇ ಅವರು ಒಬ್ಬರನ್ನೊಬ್ಬರು ಭೆಟ್ಟಿಯಾಗಿದ್ದುದು. ತನ್ನ ಮನೆಗೆ ಬಂದಿರುವನಲ್ಲಾ ಎಂದು ವೆಂಕಟೇಶನೇ ಮೊದಲು ಮಾತನಾಡಿಸಿದ.
“ಯಾವಾಗ ಬಂದಿಯಪ್ಪಾ ಬೆಂಗಳೂರಿಗೆ?”
“ಇದೇ ಬೆಳಿಗ್ಗೆ.”
“ಮನೆಯಲ್ಲಿ ಎಲ್ಲರೂ ಕ್ಷೇಮವೋ?”
“ಎಲ್ಲರೂ ಕ್ಷೇಮ.”
“ಇದೇನು ಈಗ ಬಂದದ್ದು, ಕೋರ್ಟಿಗೆ ರಜವೇನು?”
“ಇಲ್ಲ. ಒಂದು ಕೆಲಸದ ಮೇಲೆ ಬಂದೆ.”

ಆ ಕೆಲಸ ವೆಂಕಟೇಶನಿಗೆ ಚೆನ್ನಾಗಿ ಗೊತ್ತಿತ್ತು. ಮುಂದೆ ವೆಂಕಟೇಶ ಮಾತನಾಡದಿದ್ದುದನ್ನು ನೋಡಿ
“ವೆಂಕಟೇಶ, ‘ವೀರ ಕರ್ಣಾಟಕ’ ನಿನ್ನದೇ?”
“ಹೌದು, ನಿನಗೆ ಯಾರು ಹೇಳಿದರು?”
“ಹೀಗೇ ಗೊತ್ತಾಯಿತು. ನಿನ್ನ ಪತ್ರಿಕೆಯಲ್ಲಿಯೇ ನನ್ನನ್ನು ಹೀಗೆ ಬಯಲಿಗೆಳೆಯುವುದೇ?”
“ತಪ್ಪೇನೂ ಬರೆದಿಲ್ಲವಲ್ಲ. ಬರೆದುದು ಸುಳ್ಳಾದ್ದರೆ ಕೋರ್ಟಿದೆ, ಸರ್ಕಾರವಿದೆ. ಪತ್ರಿಕೆಯನ್ನು ನಿಲ್ಲಿಸಿಬಿಡಬಹುದಲ್ಲ.”
“ನಿಜವಾಗಿದ್ದರೂ – ನೀನು ಪ್ರಕಟಿಸಬಹುದೇ?”
“ಏತಕ್ಕೆ ಪ್ರಕಟಿಸಬಾರದು? ಸ್ಥಾನದ ಬಲದಿಂದ ನೀನು ಮಾಡಬಾರದ ಅನ್ಯಾಯಗಳನ್ನು ಮಾಡಬಹುದು, ಅದನ್ನು ಪತ್ರಿಕೆಯವರು ಪ್ರಕಟಿಸಬಾರದೋ?”
“ನಾನು ಮಾಡಿದ ಅನ್ಯಾಯವೇನು?”
“ಎರಡು ತೀರ್ಪು – ಎರಡು ಕಡೆಯಿಂದಲೂ ದುಡ್ಡು ತೆಗೆದುಕೊಂಡದ್ದು – ನಿನ್ನ ಮೇಲೆ ಬರುತ್ತಿದ್ದ ಕಾಗದ ಪತ್ರಗಳಿಗೆ ನಮ್ಮ ಕಾರ್ಯಾಲಯದಲ್ಲಿ ಬೇರೆಯೊಂದು ಫೆಲನ್ನೇ ತೆಗೆಯಬೇಕಾಯಿತು – ನಾಳೆ ವ್ಯವಹಾರ ಕೋರ್ಟಿಗೆ ಹೋದರೆ ನಮ್ಮ ತಲೆಯನ್ನು ನಾವು ಕಾಯ್ದುಕೊಳ್ಳಬೇಕಲ್ಲಾ.”
“ಇದರಿಂದ ನನ್ನ ಗತಿಯೇನಾಗಬಹುದೆಂದು ಯೋಚಿಸಿದೆಯಾ?”
“ಯೋಚಿಸಿದೆ. ಕೆಲಸದಿಂದ ಡಿಮಿ ಆಗಬಹುದೆಂದು.”
“ಅದು ನಿನಗೆ ಸಮ್ಮತವೇ”
“ಪೂರ್ಣವಾಗಿ ಸಮ್ಮತ. ನನಗಾಗಿ ಸಮ್ಮತ, ಲೋಕಕ್ಕಾಗಿ ಸಮ್ಮತ, ನಿನ್ನ ಅಧಿಕಾರ ದರ್ಪ ರಥದ ಗಾಲಿಗೆ ಸಿಕ್ಕಿ ಎಷ್ಟು ಸಂಸಾರ ನುಚ್ಚುನೂರಾಗಿದೆ ಬಲ್ಲೆಯಾ? ಎಷ್ಟು ಜನ ನಿರಪರಾಧಿಗಳು ಮನೆಮಠವಿಲ್ಲದ ಭಿಕಾರಿಗಳಾಗಿದ್ದಾರೆ ಬಲ್ಲೆಯಾ? ಕೆಯಲ್ಲಿ ಅಧಿಕಾರವಿದೆಯೆಂದು ಜನಹಿಂಸೆಯನ್ನಾರಂಭಿಸಿದರೆ ಎಷ್ಟು ದಿವಸ ನಡೆಯುತ್ತದೆ? ನನ್ನನ್ನು ತುಳಿದೆ ರಾಯರು ತಮ್ಮ ದೆವೀಗುಣದಿಂದ ಹಾಕುತ್ತಿದ್ದ ಅನ್ನಕ್ಕೆ ಕಲ್ಲು ಬೆರೆಸುತ್ತಿದ್ದೆ. ಮನೆ ಬಿಟ್ಟು ದೂಡಿದೆ. ಸ್ವಂತ ತಮ್ಮನ ಹೆಂಡತಿಯನ್ನು ಕಟುನುಡಿಗಳಿಂದ ಆಹುತಿ ತೆಗೆದುಕೊಂಡೆ. ಅವನು ದಿಕ್ಕಿಲ್ಲದ ಪರದೇಶಿಯಂತೆ ಅಲೆಯುವ ಹಾಗೆ ಮಾಡಿದೆ. ಹೆತ್ತು ಹೊತ್ತು ತಾಯಿಯೇ ಕಣ್ಣೀರು ಕಾಲುವೆಯಲ್ಲಿ ನಿತ್ಯ ಮೀಯುವಂತೆ ಮಾಡಿದೆ. ಈಗ ಅಧಿಕಾರಿ, ದೊಡ್ಡ ಮ್ಯಾಜಿಸ್ಟ್ರೇm. ಬೇಕಾದವರನ್ನು ಜೆಲಿಗೆ ಕಳುಹಿಸಬಲ್ಲೆ ಹಾಗೇ ಕಳುಹಿಸುತ್ತಿರುವೆ. ಲಂಚ ಕೊಡಲಿಲ್ಲವೆಂದು ಕಕ್ಷಿಗಾರರನ್ನು ಕೊಲ್ಲುತ್ತಿರುವೆ. ನಿನಗಾಗ ಶುಕ್ರದೆಶೆ – ಈಗ ಯಾವ ದೆಶೆ… ಶನಿದೆಶೆ.”
“ನಿಜ, ನಿಜ ವೆಂಕಟೇಶ. ನಿನ್ನ ಮಾತೆಲ್ಲವೂ ಸತ್ಯ. ಆದರೆ ನನಗೆ ದಯೆತೋರಲಾರೆಯಾ? ನನ್ನೆಲ್ಲ ಅಪರಾಧಗಳನ್ನೂ ಕ್ಷಮಿಸಿ ನನ್ನನ್ನು ಬದುಕಿಸಲಾರೆಯಾ?”
“ನಿನ್ನಲ್ಲಿ ನನಗೆ ದಯೆಯಿಲ್ಲ, ಮರುಕವಿಲ್ಲ, ಕರುಣವಿಲ್ಲ. ಒಂದು ದಿವಸ ನೀನು ಇಂತಹ ಗೊಂದಲಕ್ಕೆ ಬೀಳುವೆ ಎಂದು ನನಗೆ ಗೊತ್ತಿತ್ತು. ನನ್ನನ್ನು ಕಸಕ್ಕಿಂತ ಕಡೆಯಾಗಿ ಕಾಣುತ್ತಿದ್ದ ನೀನು ಮೊಣಕಾಲೂರಿ ಒಂದು ದಿನ ನನ್ನ ಕೃಪಾಭಿಕ್ಷೆಯನ್ನು ಬೇಡುವೆಯೆಂದು ನನಗೆ ಗೊತ್ತಿತ್ತು. ಅದು ನಿನ್ನ ಕಾಲ – ಇದು ನನ್ನ ಕಾಲ. ನನ್ನ ಕಾಲ ಬಂದಾಗ ನಿನಗೆ ಚೆನ್ನಾಗಿ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ್ದೆ. ಈಗ ಆ ಕಾಲ ಬಂದಿದೆ. ಬುದ್ಧಿ ಕಲಿಸುವೆ. ನಿನ್ನ ಹಳೆಯ ಬೋರ್‍ಡನ್ನು ನೀನು ಹುಡುಕಿಕೊಂಡು ಹೋಗುವಂತೆ ಮಾಡುವೆ. ನನಗೆ ನಿಲ್ಲುವುದಕ್ಕೆ ಹೆಚ್ಚು ವೇಳೆಯಿಲ್ಲ”
ಎಂದು ಹೇಳಿ ಹೊರಟೇಬಿಟ್ಟನು. ರಾಮಚಂದ್ರ ಮಾತುಗಾಣದಾದನು. ಭಯದಿಂದ ಮುಖವೆಲ್ಲ ಬಿಳುಪೇರಿ ಬೆವರು ಹನಿಗಳು ಹಣೆಯನ್ನು ಸಾಲುಗಟ್ಟಿದವು. ಮೆಯಲ್ಲಿ ನಡುಕ ಹುಟ್ಟಿತು.
“ಹೋಗಿ ಬರುತ್ತೇನಮ್ಮಾ ಶಾಂತಾ. ಸಾಧ್ಯವಾದರೆ ನಿಮ್ಮ ಯಜಮಾನರಿಗೆ ಒಂದು ಮಾತು ಹೇಳಿ ನೋಡು.”
“ಆಗಲಣ್ಣಾ” ಎಂದು ಹೇಳಿದಳು. ಅವನ ಕರುಣಾಜನಕವಾದ ಸ್ಥಿತಿಯು ಅವಳ ಕಣ್ಣುಗಳಲ್ಲಿ ನೀರು ತರಿಸಿತ್ತು.
ಮಧ್ಯಾಹ್ನ ವೆಂಕಟೇಶಯ್ಯನ ಊಟವಾದ ಮೇಲೆ ವೀಳೆಯದೆಲೆ ಮಡಿಸಿಕೊಡುತ್ತ ಶಾಂತಾ ಮೆಲ್ಲನೆ ಮಾತು ತೆಗೆದಳು.
“ರಾಮಣ್ಣ ವಿಚಾರ ಏನು ಮಾಡುತ್ತೀರಿ?”
“ಯಾವ ರಾಮಣ್ಣ?”
“ಯಾವ ರಾಮಣ್ಣ ಅಂದರೆ ನಿಮ ಭಾವ ರಾಮಣ್ಣ.”
“ನನಗೆ ರಾಮಣ್ಣ ಎನ್ನುವ ಹೆಸರಿನ ಭಾವನೇ ಇಲ್ಲ.”
“ಹಾಸ್ಯ ಸಾಕೂಂದ್ರೆ ಹೇಳಿ.”
“ಹೇಳುವುದನ್ನೆಲ್ಲಾ ಬೆಳಗ್ಗೆಯೇ ಹೇಳಿದೆನಲ್ಲಾ.”
“ಬಹಳ ಕೆಟ್ಟುಹೋಗುತ್ತಾನಂತಲ್ಲ.”
“ಹೌದು, ಕೆಲಸ ಹೋಗುತ್ತದೆ.”
“ನೀವು ಉಳಿಸಬಹುದು, ಏತಕ್ಕೆ ಉಳಿಸಬಾರದು?”
“ಏತಕ್ಕೆ ಉಳಿಸಬೇಕು, ಅವನು ಇತರರ ಮನೆ ಹಾಳುಮಾಡುವ ಪವಿತ್ರಗೆಲಸವನ್ನು ಮುಂದುವರಿಸಲೆಂದೇ – ಅಂತಹ ಧರ್ಮಬುದ್ಧಿ ನನ್ನಲ್ಲಿಲ್ಲ.”
“ಅವನೇನೋ ತಪ್ಪಿ ನಡೆದಿದ್ದಾನೆ. ತಿದ್ದುವುದಕ್ಕೆ ನಿಮಗೆ ಅವಕಾಶವಿರುವಾಗ ನೀವೇತಕ್ಕೆ ತಿದ್ದಬಾರದು?”
“ಇದು ತಿದ್ದು ಅವಕಾಶವಲ್ಲ ಪ್ರತೀಕಾರದ ಅವಕಾಶ. ಇಂದು ನಾನೇ ಅವನಾಗಿ ಅವನೇ ನಾನಾಗಿದ್ದರೆ ಏನು ಮಾಡುತ್ತಿದ್ದ ಗೊತ್ತೇ?”
“ಗೊತ್ತು”
“ಅದನ್ನೇ ನಾನು ಮಾಡಬೇಕೆಂದಿರುವುದು.”
“ನೀವು ಅವನನ್ನು ಭಾವನಲ್ಲ ಎನ್ನಬಹುದು – ನಾನು ಅಣ್ಣನಲ್ಲ ಎನ್ನಲಾಗುವುದೇ?”
“ಆಗುವುದು – ಆಗಬೇಕು. ನಿನಗಾಗಿರುವ ಚಿತ್ರಿಹಿಂಸೆಯನ್ನು ನಾನು ಮರೆತಿರುವೆನೆಂದು ಭಾವಿಸಿರುವೆಯಾ?”
“ನಾನು ಅವುಗಳನ್ನು ಮರೆತಿದ್ದೇನೆ.”
“ನಿನ್ನದು ದೊಡ್ಡ ಗುಣ; ಆದರೆ ನಾನು ಮರೆತಿಲ್ಲ.”
“ಅದು ಹೋಗಲಿ. ನನಗಾಗಿ ನೀವು ಅವನನ್ನು ಬದುಕಿಸಬೇಕು.”
“ವಿಷಯ ನನ್ನ ಕೆಮೀರಿದೆ. ಪ್ರಯತ್ನಪಟ್ಟರೂ ಸಫಲನಾಗುವ ಹಾಗಿಲ್ಲ. ಹೆಕೋರ್ಟಿನ ತನಕ ಪಾರ್ಟಿಗಳೇ ದೂರು ತೆಗೆದುಕೊಂಡು ಹೋಗಿದ್ದಾರೆ.”
“ನೀವು ರಾಜೀ ಮಾಡಿಸಬಹುದಂತಲ್ಲಾ. ಏನಾದರೂ ಮಾಡೀಂದ್ರೆ ನನಗೋಸ್ಕರ ಇಷ್ಟು ಮಾಡಿ. ನಿಮ್ಮ ಉಪಕಾರದ ಋಣಕ್ಕೆ ಸಿಕ್ಕುವದಕ್ಕಿಂತಲೂ ರಾಮಣ್ಣನಿಗೆ ಹೆಚ್ಚು ಶಿಕ್ಷೆ ಬೇಕೇ?”
ಆ ಮಾತು ವೆಂಕಟೇಶನ ಮನಸ್ಸಿನ ಮೇಲೆ ಪರಿಣಾಮವನ್ನುಂಟುಮಾಡಿತು. ರಾಮಚಂದ್ರನ ಭವಿಷ್ಯವನ್ನು ನಿರ್ಣಯಿಸುವ ಶಕ್ತಿ ತನಗುಂಟಾಯಿತಲ್ಲಾ ಎಂದು ಹಿಗ್ಗಿದನು. ಹೆಂಡತಿಯ ಮಾತನ್ನೂ ಮೀರುವ ಹಾಗಿರಲಿಲ್ಲ. ಮೊದಮೊದಲು ಪ್ರತೀಕಾರದ ಆಸೆಯು ಮನಸ್ಸಿನಲ್ಲಿ ಗರ್ಜಿಸುತ್ತಿದ್ದರೂ ರಾಯರ ಮನೆಯನ್ನು ಸೇರಿ ತಾನು ಬದುಕಿ, ಬೆಳೆದು, ಬಾಳಿದುದನ್ನು ಜ್ಞಾಪಿಸಿಕೊಂಡನು. ರಾಮಚಂದ್ರನಿಗೋಸುಗ ತಾನು ಪ್ರಯತ್ನಿಸದಿದ್ದರೂ ರಾಯರ ದಿವ್ಯಸ್ಮೃತಿಗಾಗಿ ಪ್ರಯತ್ನಿಸಲು ನಿಶ್ಚಯಿಸಿದನು.
ಪ್ರಯತ್ನ ಫಲಿಸಿತು. ಪಾರ್ಟಿಗಳು ರಾಜಿಗೊಪ್ಪಿಕೊಂಡು ಹೆಕೋರ್ಟಿಗೆ ಹಾಕಿದ್ದ ಮನವಿಯನ್ನು ಹಿಂದಕ್ಕೆ ತೆಗೆದುಕೊಂಡರು. ಹೆಕೋರ್ಟಿನ ನ್ಯಾಯಾಧೀಶರು ರಾಮಚಂದ್ರ ಇತರ ವ್ಯವಹಾರಗಳಿಗೆ ಐದು ವರ್ಷ ಸಂಬಳವನ್ನು ಹೆಚ್ಚಿಸಕೂಡದೆಂದು ವಿಧಿಸಿ ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಿಬಿಟ್ಟರು.
ಸುದ್ದಿ ರಾಮಚಂದ್ರನಿಗೆ ಮುಟ್ಟಿತು. ಅವನ ಮನಸ್ಸಿನಿಂದ ದೊಡ್ಡ ಹೊರೆಯನ್ನಿಳುಹಿದಂತಾಯಿತು. ನಾಚಿಕೆಯಿಂದ ತಲೆ ತಗ್ಗಿಸಿದನು “ಯಾರನ್ನು ತಾನು ಕೇವಲ ನಿಕೃಷ್ಟವಾಗಿ ಕಾಣುತ್ತಿದ್ದೆನೋ ಅವರಿಂದಲೇ ಇಂತಹ ಉಪಕಾರವನ್ನು ಪಡೆಯಬೇಕಾಯಿತಲ್ಲಾ. ಯಾರನ್ನು ಮನೆ ಬಿಟ್ಟು ಹೊರದೂಡಿದೆನೋ ಅವರೇ ನನ್ನ ಮನೆಯನ್ನು ಉಳಿಸಬೇಕಾಯಿತಲ್ಲಾ” ಎಂದು ಯೋಚಿಸಿದನು. ತನ್ನ ಹಿಂದಿನ ಮತ್ತು ಅಧಿಕಾರದ ಪ್ರಕರಣಗಳೆಲ್ಲವೂ ಜ್ಞಾಪಕಕ್ಕೆ ಬಂದವು. ಜತೆಯಲ್ಲಿ ತಡೆಯಲಾರದಷ್ಟು ದುಃಖವು ಉಕ್ಕಿಬಂದಿತು. ಒಂದು ಕಡೆ ಮೀನಾಕ್ಷಮ್ಮನವರು ತನಗೆ ಮಾಡಿದ ಉಪಕಾರದ ಸ್ಮೃತಿ – ಮತ್ತೊಂದು ಕಡೆ ತಾನು ಲಕ್ಷ್ಮಣನಿಗೂ ಅವನ ಹೆಂಡತಿಗೂ ಮಾಡಿದ ಅಪಕಾರದ ಸ್ಮೃತಿಗಳು ಬಂದವು. ಗೊಳೋ ಎಂದು ಅತ್ತು ಬಿಟ್ಟನು. ಪಶ್ಚಾತ್ತಾಪದಿಂದ ಮನಸ್ಸು ಬೆಂದು ಹಗುರವಾಯಿತು. ಅಂದೇ ವೆಂಕಟೇಶಯ್ಯನಿಗೆ ಕೃತಜ್ಞತೆಯನ್ನು ಅರ್ಪಿಸಿ ಹೃದಯಪೂರ್ವಕವಾದ ಒಂದು ಕಾಗದವನ್ನು ಬರೆದನು.
*****
ಮುಂದುವರೆಯುವುದು