ಸಂಧ್ಯಾ ರಾಗ – ೨೪

ಲಕ್ಷ್ಮಣನಿದ್ದ ಸ್ಥಿತಿಯಲ್ಲಿ ಯಾರೂ ಅವನನ್ನು ಗುರುತಿಸುವಂತಿರಲಿಲ್ಲ. ಗುಣಿಬಿದ್ದ ಕಣ್ಣುಗಳು, ಅರ್ಧ ನರೆತ ತಲೆ, ಒಣಗಿ ಎಲುಬಿನ ಗೂಡಿನಂತಿದ್ದ ಮೆ, ಕೊಳಕಿನ ಮುದ್ದೆಯಾಗಿದ್ದ ಬಟ್ಟೆ- ಇದೇ ಲಕ್ಷ್ಮಣ ಎಂದು ಯಾರೂ ನಂಬುವಂತಿರಲಿಲ್ಲ. ರೆಲು ಸಿಕ್ಕಿದಲ್ಲಿ ಹತ್ತುವನು. ಮನಸ್ಸು ಬಂದಾಗ ಇಳಿದುಬಿಡುವನು. ಎಲ್ಲಿಗೆ ಹೋಗಬೇಕೆಂಬ ನಿಶ್ಟಯವಿಲ್ಲ, ಗುರಿಯಿಲ್ಲ. ಇಂದಿದ್ದ ಊರು ನಾಳೆಯಿಲ್ಲ, ನಾಳೆಯಿದ್ದದ್ದು ನಾಳಿದ್ದಿಲ್ಲ, ನಿಂತಲ್ಲಿ ನಿಲ್ಲುತ್ತಿರಲಿಲ್ಲ, ಕುಳಿತಲ್ಲಿ ಕೂಡುತ್ತಿರಲಿಲ್ಲ. ಯಾರಾದರೂ ತನ್ನನ್ನು ನೋಡಿದರೆ ಒಂದೇ ಸಮನೆ ಅವರಿಂದೆ ಓಡುವನು. ಯಾರಾದರೂ ಕೃಪೆಯಿಟ್ಟು ನೀಡಿದಂದು ಆಹಾರ, ನೀಡದಂದು ನಿರಾಹಾರ. ನೋಡಿದವರೆಲ್ಲಾ ‘ಹುಚ್ಚ ಹುಚ್ಚ’ ಎಂದು ಹಾಸ್ಯಮಾಡುತ್ತಿದ್ದರು. ತಾನೇ ತನ್ನ ರೂಪವನ್ನು ಹೊಟೇಲಿನ ಬಾಗಿಲಲ್ಲಿ ಕಟ್ಟಿದ್ದ ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ
“ಹುಚ್ಚ-ಹುಚ್ಚ”
ಎಂದು ನಕ್ಕುಬಿಟ್ಟಿದ್ದನು. ಒಂದೊಂದು ಸಲ ತಾನು ಕನ್ನಡಿಯಲ್ಲಿ ನೋಡಿದ ವ್ಯಕ್ತಿ ಬೇರೆ, ತಾನು ಬೇರೆ ಎಂದುಕೊಳ್ಳುವನು. ಕನ್ನಡಿಯಲ್ಲಿದ್ದ ವ್ಯಕ್ತಿಯ-ಹುಚ್ಚು ಮನುಷ್ಯನ ರೂಪವನ್ನು ನೆನೆದು ತನ್ನಷ್ಟಕ್ಕೇ ನಗುವನು, ತಲೆಯಲ್ಲಿ ಏನೋ ಶಬ್ದ. ಒಂದೊಂದು ಸಲ ಹಳೆಯ ನೆನಪುಗಳು ಬರುತ್ತಿದ್ದವು. ಅವು ಅಪೂರ್ಣವಾಗಿ ನಿಲ್ಲುತ್ತಿದ್ದುವು. ಒಂದೆರಡು ಸಲ ಪೋಲೀಸಿನವರ ಕೆಗೆ ಸಿಕ್ಕಿಬಿದ್ದಿದ್ದಾಗ ತನ್ನ ಗುರುತನ್ನು ಹೇಳಲಾರದೆ ಹೋಗಿದ್ದನು. ಹುಚ್ಚನೆಂದು ನಾಲ್ಕು ಛಡಿ ಹೊಡೆದು ಅವರು ಆಚೆಗೆ ಅಟ್ಟಿಬಿಟ್ಟಿದ್ದರು. ಹುಡುಗರು ಹೋದಲ್ಲಿ ಅಟ್ಟಿಸಿಕೊಂಡುಬಂದು ಕಲ್ಲು ಬೀರುತ್ತಿದ್ದರು.
“ನಾನೇ ಹುಚ್ಚ, ಕನ್ನಡಿಯಲ್ಲಿದ್ದವನು ಜಾಣ”
ಎಂದು ನಿರ್ಧರಿಸಿಕೊಂಡನು. ಈ ಹುಚ್ಚಲೆದಾಟವು ಲಕ್ಷ್ಮಣನನ್ನು ಮದರಾಸಿಗೆ ಕರೆದುಕೊಂಡು ಬಂದಿತ್ತು. ತಿರುವಳ್ಳಿಕೇಣಿಯಲ್ಲಿ ಬರುತ್ತಿರುವಾಗ ಒಂದು ಜನಸಂದಣಿಯನ್ನು ಕಂಡನು. ಕುತೂಹಲದಿಂದ ತಾನೂ ಬಂದು ನಿಂತನು. ಮದುವೆಯ ಮನೆ, ಒಳಗೆ ಸಂಗೀತ ಕಛೇರಿ ನಡೆಯುತ್ತಿತ್ತು. ಬೀದಿಯ ಜನ ಹೊರಗೆ ಸಂಗೀತ ಶ್ರವಣ ಮಾಡುತ್ತ ನಿಂತಿತ್ತು. ಜಾಗ ಬಿಡಿಸಿಕೊಂಡು ಲಕ್ಷ್ಮಣನೂ ಸಂಗೀತವನ್ನು ಕೇಳುತ್ತ ನಿಂತ. ಭಾಗವತರು ತೋಡಿಯ ಆಲಾಪನೆಗೆ ತೊಡಗಿದ್ದರು. ಲಕ್ಷ್ಮಣನ ಎದೆಯು ಡವಡವನೆ ಹೊಡೆದುಕೊಳ್ಳಲಾರಂಭಿಸಿತು. ತಲೆಯಲ್ಲಿ ತುಂಬಿದ್ದ ಮಂಕು ಸ್ವಲ್ಪ ಸ್ವಲ್ಪ ಹರಿಯತೊಡಗಿತು. ಆಲಾಪನೆ ಮುಗಿಯಿತು, ಲಕ್ಷ್ಮಣ ಸ್ಮೃತಿ ತಪ್ಪಿ ಬಿದ್ದುಬಿಟ್ಟ. ಮದುವೆಯ ಮನೆಯವರು ಲಕ್ಷ್ಮಣನನ್ನು ಆಸ್ಪತ್ರೆಗೆ ಸಾಗಿಸಿದರು.
ತಲೆಯ ಮೇಲಾಗಿದ್ದ ಗಾಯ ಮಾಗುತ್ತಿತ್ತು. ಲಕ್ಷ್ಮಣನಿಗೆ ಎಲ್ಲವೂ ಜ್ಞಾಪಕಕ್ಕೆ ಬರಲಾರಂಭವಾಯಿತು. ತನ್ನ ಬಾಳು, ತನ್ನ ಆಸೆ, ತನ್ನ ಸ್ಥಿತಿ ಎಲ್ಲವನ್ನೂ ನೆನೆದು ಗೊಳೋ ಎಂದು ಅತ್ತನು. ಜಯನ ರೂಪ ಎದುರಿಗೆ ಬಂದು ನಿಂತಿತು.
“ನೀವು ಸೋತಿರಿ.”
“ಇಲ್ಲಾ ಜಯಾ.”
“ನನಗೆ ಮೋಸ ಮಾಡಿದಿರಿ.”
“ಇಲ್ಲಾ ಜಯಾ, ಖಂಡಿತವಾಗಿಯೂ ಇಲ್ಲ.”
“ಕಲಾವಿದರಾಗಬೇಕೆಂಬ ನಿಮ್ಮ ಆಸೆ ಎಲ್ಲಿ ಹೋಯಿತು?”
“ನಿನ್ನ ಹಿಂದೆ ಹೋಯಿತು.”
“ನಾನು ಎಲ್ಲಿಗೆ ಹೋದೆ – ನಿಮ್ಮಲ್ಲಿಯೇ ಇರುವೆನಲ್ಲಾ.”
“ಜಯಾ!”
“ನೀವು ಕರ್ತವ್ಯಭ್ರಷ್ಟರಾದಿರಿ. ಗುರಿಯನ್ನು ಮರೆತಿರಿ.”
“ಇಲ್ಲ ಮರೆತಿಲ್ಲ.”
“ಗುರು ಋಣವನ್ನು ತೀರಿಸಲಿಲ್ಲ. ಚನ್ನಪ್ಪನವರಿಗೆ ಏನು ಹೇಳುವಿರಿ? ಅನಂತಾಚಾರ್ಯರಿಗೆ ಏನು ಹೇಳುವಿರಿ?”
“ತೀರಿಸುತ್ತೇನೆ.”
“ಖಂಡಿತವೇ?”
“ಖಂಡಿತ.”
ಜಯನ ರೂಪ ಮತ್ತೆ ಮತ್ತೆ ಎದುರು ನಿಲ್ಲುತ್ತಿತ್ತು. ಸಂಜೆ ಡಾಕ್ಟರು ಬಂದಾಗ ಕೇಳಿದನು.
“ಇನ್ನು ಎಷ್ಟು ದಿವಸ ಇರಬೇಕು ಡಾಕ್ಟರೇ?”
“ಮೂರು, ನಾಲ್ಕು ದಿವಸ. ಗುಣವಾಗಿದೆ. ವಿಶ್ರಾಂತಿ ಬೇಕು.”
“ಒಂದು ಪ್ರಶ್ನೆ ಕೇಳಲೆ?”
“ಕೇಳಪ್ಪಾ.”
“ನನ್ನನ್ನು ತಂಜಾವೂರಿಗೆ ಕಳುಹಿಸಿ ಕೊಡುತ್ತೀರಾ?”
“ಏತಕ್ಕೆ – ನೀನು ಮೆಸೂರಿನವನ ಹಾಗೆ ಕಾಣುವೆಯಲ್ಲ?”
“ನಿಮಗೆ ಹೇಗೆ ಗೊತ್ತಾಯಿತು?”
“ನನ್ನ ಹೆಂಡತಿ ಮೆಸೂರಿನವಳು.”
“ಹೌದು, ನಾನು ಮೆಸೂರಿನವನೇ. ಆದರೆ ಹೇಳಿಕೊಳ್ಳಲು ಧೆರ್ಯವಿಲ್ಲ.”
“ತಂಜಾವೂರಿಗೆ ಏತಕ್ಕೆ ಹೋಗಬೇಕು. ಊರಿಗೆ ಹೋಗಬಾರದೆ?”
“ಇಲ್ಲ. ಸದ್ಯಕ್ಕೆ ನಾನು ಊರಿಗೆ ಹೋಗುವ ಹಾಗಿಲ್ಲ. ತಂಜಾವೂರು ಕೃಷ್ಣಯ್ಯgರವರು ಚೆನ್ನಾಗಿದ್ದಾರೆಯೆ?”
“ಸೊಗಸಾಗಿದ್ದಾರೆ. ಕಳೆದ ವಾರ ಅಕೆಡಮಿಯಲ್ಲಿ ಅವರ ಸಂಗೀತ ಕಛೇರಿ ಕೂಡ ಆಯಿತು.”
“ಕಛೇರಿ ಆಯಿತೇ? ಎಂತಹ ನಿರ್ಭಾಗ್ಯ? ಅವರ ದರ್ಶನ ಇಲ್ಲೇ ಸಿಕ್ಕುತ್ತಿತ್ತಲ್ಲಾ!”
“ನೀನು ಅವರಲ್ಲಿ ಸಂಗೀತ ಕಲಿಯುವುದಕ್ಕೆ ಹೋಗುವೆಯಾ?”
“ಹೌದು ಅದೇ ಉದ್ದೇಶ.”
“ಆದರೆ…”
“ಏನು ಹೇಳಿ. ಸಂಕೋಚಪಡಬೇಡಿ.”
“ಅವರು ಬಹಳ ದೊಡ್ಡ ವಿದ್ವಾಂಸರು. ಈ ಕಡೆ ಅವರನ್ನು ಸಾಕ್ಷಾv ತ್ಯಾಗರಾಜರ ಅವತಾರ ಎಂದು ಭಾವಿಸುತ್ತಾರೆ. ನೀನು ಈಗೀಗ ಕಲಿಯುವುದಕ್ಕೆ ಆರಂಭಿಸಿ ಅವರಲ್ಲಿ ಹೋದರೆ ಹೇಳಿಕೊಡುತ್ತಾರೆಯೋ ಇಲ್ಲವೋ ಸಂದೇಹ.”
“ಇಲ್ಲ. ನನಗೆ ಸ್ವಲ್ಪ ಸಂಗೀತ ಬರುತ್ತದೆ.”
“ನಮ್ಮ ಮನೆಯಲ್ಲಿ ಹಾಡುವೆಯಾ?”
“ಏನು ಪ್ರಯೋಜನ?”
“ಏನಾದರೂ ಕೊಡುತ್ತೇನೆ.”
“ಅಯ್ಯೋ ಆ ಪ್ರಯೋಜನವಲ್ಲ. ನಾನು ದುಡ್ಡನ್ನು ಅಪೇಕ್ಷಿಸಲಿಲ್ಲ. ನನಗೆ ಗುರುಗಳ ಕಟಾಕ್ಷವನ್ನು ಸಂಪಾದಿಸಿಕೊಡುತ್ತೀರಾ?”
“ನೋಡು, ನಾನು ಕೃಷ್ಣಯ್ಯgರವರನ್ನು ಚೆನ್ನಾಗಿ ಬಲ್ಲೆ. ನೀನು ಗುಣವಾದ ಮೇಲೆ ಒಂದು ದಿವಸ ನಮ್ಮ ಮನೆಯಲ್ಲಿ ಹಾಡು. ನಾನು ಒಪ್ಪಿದಲ್ಲಿ ಭಾಗವತರಿಗೆ ಕಾಗದ ಬರೆದುಕೊಟ್ಟು ನಿನ್ನನ್ನು ಕಳುಹಿಸಿಕೊಡುತ್ತೇನೆ.”
“ಆಗಬಹುದು. ತುಂಬ ಉಪಕಾರವಾಯಿತು.”
ಎಂದನು. ಲಕ್ಷ್ಮಣ ಹಾಸಿಗೆ ಬಿಟ್ಟು ಏಳಲು ಒಂದು ವಾರಬೇಕಾಯಿತು. ಡಾಕ್ಟರು “ಈಗಲೇ ಬೇಡ. ಇನ್ನು ನಾಲ್ಕು ದಿವಸ ವಿಶ್ರಮಿಸಿಕೋ” ಎಂದರು. “ಪರವಾಗಿಲ್ಲ. ಇಂದು ರಾತ್ರಿ ಹಾಡುತ್ತೇನೆ” ಎಂದು ಹೇಳಿದನು. ಡಾಕ್ಟರು ಪಕ್ಕ ವಾದ್ಯಗಾರರಿಗೆ ಹೇಳಿ ನಾಲ್ಕು ಜನ ಸ್ನೇಹಿತರನ್ನೂ ಕರೆದರು.
“ಇವರ ಮುಂದೆಲ್ಲಾ ಹಾಡಬೇಕೇ” ಎಂದು ಲಕ್ಷ್ಮಣ ಕೇಳಿದ.
“ಅವರೂ ನನ್ನ ಹಾಗೆ ಸಂಗೀತ ಪ್ರೇಮಿಗಳು. ಹಾಡು ಪರವಾಯಿಲ್ಲ. ಸಂಕೋಚವೇತಕ್ಕೆ” ಎಂದು ಹೇಳಿದರು. ಲಕ್ಷ್ಮಣ ಭೆರವಿ ವರ್ಣ ಹಾಡಿ ಒಂದೆರಡು ಕೀರ್ತನೆಗಳನ್ನು ಹಾಡಿ ವಿಸ್ತಾರವಾಗಿ ತೋಡಿ ರಾಗವನ್ನು ಆಲಾಪನೆ ಮಾಡಿದನು. ವಾದ್ಯಗಾರರು ಮುಗ್ಗರಿಸುತ್ತ ಮುಗ್ಗರಿಸುತ್ತ ಅನುಸರಿಸುತ್ತಿದ್ದರು. ಅತಿಥಿಗಳಲ್ಲಿ ಒಬ್ಬರು
“ದಯವಿಟ್ಟು ಸ್ವಲ್ಪ ಪೂರ್ವಿ ಹಾಡಿ.”
“ಅದೊಂದು ರಾಗ ಬೇಡ. ಬೇರೆ ಯಾವುದನ್ನು ಬೇಕಾದರೂ ಹಾಡುತ್ತೇನೆ.”
“ಹಾಗಾದರೆ ಮೋಹನ ಹಾಡಬಹುದಲ್ಲಾ.”
ಮೋಹನವನ್ನೂ ಮುಗಿಸಿದ. ಡಾಕ್ಟರು ಒಂದು ಬೆಳ್ಳಿ ತಟ್ಟೆಯಲ್ಲಿ ಫಲತಾಂಬೂಲ ಐವತ್ತು ರೂಪಾಯಿಗಳನ್ನಿಟ್ಟು
“ನೀವು ಇಷ್ಟು ದೊಡ್ಡ ವಿದ್ವಾಂಸರು ಎಂದು ಹೇಳಲೇ ಇಲ್ಲವಲ್ಲ. ನಾನು ಯಾರೋ ಸಾಮಾನ್ಯ – ದೇಶಾವಾರದ ಸಂಗೀತಗಾರರು ಎಂದುಕೊಂಡೆ. ನನ್ನ ಕ್ಷಮಿಸಿ ಈ ಅಲ್ಪ ಮರ್ಯಾದೆ ಸ್ವೀಕರಿಸಬೇಕು.”
“ಕ್ಷಮಿಸಬೇಕು. ನಾನಿನ್ನೂ ಕೇವಲ ವಿದ್ಯಾರ್ಥಿ. ನನಗೆ ಹಣಬೇಡ. ಗುರುಕೃಪೆ ಒಂದು ತಾವು ದೊರಕಿಸಿಕೊಟ್ಟರೆ ಲಕ್ಷ ರೂಪಾಯಿ ಕೊಟ್ಟದ್ದಕಿಂತಲೂ ಹೆಚ್ಚಾಗುತ್ತದೆ.”
“ಅವಶ್ಯಕವಾಗಿ ಆಗಲಿ”
ಎಂದರು ಡಾಕ್ಟರ ಹೆಂಡತಿ.
“ಅಪ್ಪಾ, ನೀವು ವಿದ್ಯಾ ಮುಗಿಸಿಕೊಂಡು ಊರಿಗೆ ಹೋಗುವಾಗ ನಮ್ಮ ಮನೆಗೆ ಬಂದು ಹೋಗಬೇಕು. ಇದು ನಿಮ್ಮ ಮನೆ
ಎಂದು ಹೇಳಿದರು. ಕನ್ನಡತಿಯ ಆದರದ ಮಾತುಗಳನ್ನು ಕೇಳಿ ಲಕ್ಷ್ಮಣನ ಹೃದಯ ಅರಳಿತು.
“ನಿಜ ತಾಯಿ ಇದು ನನ್ನ ಮನೆ. ನೀವು ನಿಮ್ಮ ಯಜಮಾನರೂ ನನ್ನ ತಾಯಿ – ಶಾರದಾಂಬಾ – ಸೇವೆ ಮಾಡುತ್ತಾ ಇದ್ದೀರಿ. ನನಗೆ ನೀವೇ ಬಂಧುಬಳಗ, ಬರುತ್ತೇನಮ್ಮ. ಖಂಡಿತ ಬಂದು, ನಿಮ್ಮ ಮುಂದೆ ಹಾಡಿ ಹೋಗುತ್ತೇನೆ”
ಎಂದು ಮಾತು ಕೊಟ್ಟನು. ಲಕ್ಷ್ಮಣನಿಗೆ ಬೇಕಾಗುವ ಬಟ್ಟೆಬರೆಗಳನ್ನು ಒದಗಿಸಿ ಡಾಕ್ಟರು ಕಾಗದ ಬರೆದುಕೊಟ್ಟು ತಂಜಾವೂರಿಗೆ ಲಕ್ಷ್ಮಣನನ್ನು ಕಳುಹಿಸಿಕೊಟ್ಟರು. ಕಾಗದವನ್ನು ಕೆಯಲ್ಲಿ ಹಿಡಿದು ಬಸ್ಸಿನಲ್ಲಿ ಕುಳಿತನು. ಅದನ್ನು ಮತ್ತೆ ಮತ್ತೆ ಮುಟ್ಟುವನು. ತಮಿಳಿನಲ್ಲಿ ಬರೆದಿದ್ದ ವಿಳಾಸವನ್ನು ಎವೆಯಿಕ್ಕದೆ ನೋಡುವನು. ಡಾಕ್ಟರು ಅವರ ಹೆಂಡತಿಯನ್ನು ಮನಸಾರೆ ನೂರಾರು ಸಾರಿ ವಂದಿಸಿದನು.
“ದಿಕ್ಕಿಲ್ಲದ ಪರದೇಶಿಯಂತೆ ಬಂದೆ. ಇಲ್ಲಿ ನನ್ನ ಭಾಗ್ಯದ ಬಾಗಿಲು ತೆಗೆಯಿತು. ಆತ್ಮೀಯನಾದ ಬಂಧು ದೊರಕಿದ” ಎಂದುಕೊಂಡನು. ತಕ್ಷಣವೇ ತನ್ನ ಅಣ್ಣನ ಜ್ಞಾಪಕ ಬಂದಿತು. “ಈ ಡಾಕ್ಟರು ನನ್ನ ಅಣ್ಣನಾಗಿ ಹುಟ್ಟಬಾರದಾಗಿತ್ತೇ? ಈ ಡಾಕ್ಟರ ಹೆಂಡತಿ ನನ್ನ ಅತ್ತಿಗೆಯಾಗಬಾರದಾಗಿತ್ತೇ? ಆಗ – ಆಗ – ನನ್ನ ಜಯ ಉಳಿಯುತ್ತಿದ್ದಳೇನೋ?”
ಎಂದುಕೊಂಡನು. ದುಃಖವು ದೇಹವನ್ನಲುಗಿಸಿಬಿಟ್ಟಿತು.
*****
ಮುಂದುವರೆಯುವುದು