ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ ಸಂಜೆಯ ಕೆಂಪು ಕರಗುವ ಹೊತ್ತು, ಮರದ ಬೊಡ್ಡೆಗೆ ಆತು ಕೂತಿದ್ದ ಪುಟ್ಟ ಹುಡುಗ. ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ ಸಂಜೆಯಾಕಾಶಕ್ಕೆ […]
ಟ್ಯಾಗ್: Kannada Poetry
ನೆರಳಿನ ಜೋಡಿ
ಅವ ಸತ್ತ ಬಗೆ ಪೋಲೀಸರಿಗೆ, ಅವರ ನಾಯಿಗೆ ಪತ್ರಿಕೆಗೂ ಬಗೆ ಹರಿಯದೆ ಹಾಗೇ ಇದೆ. ಫೈಲುಗಳಲ್ಲಿ ಸಿಳ್ಳು ಹಾಕುವ ಮಾಮೂಲಿಕೇಸು ಬಲ್ಲವರಿಗೆ ಈ ದಿಗಿಲು ದಕ್ಕುವುದು ಸುಲಭವಲ್ಲ. ಹೇಳಬಾರದ್ದೇನಲ್ಲ- ಈತ ತನ್ನ ನೆರಳಿನ ಜೋಡಿ […]
ಕೆ ವಿ ಸುಬ್ಬಣ್ಣನವರು
ಸುಬ್ಬಣ್ಣ ಎಂಬವರು ಸುಮ್ಮನೇ ಆದವರೇ? ಜನ ಬದುಕಲೆಂದು ತಪ ತಪಿಸಿದವರು. ಭೂಮಿ ಬರಿ ಮಣ್ಣಾಗಿ ನಮಗೆ ತೋರಿದ್ದಾಗ ಹಸಿರಿನ ಪವಾಡಗಳ ತೋರಿದವರು. ಮಣ್ಣಿನಿಂಗಿತ ಅದರ ಎಲೆ ಅಡಿಕೆ ಜೀವರಸ ಮುಕ್ಕುಳಿಸಿ ಅರಳಿದವರು. ಮಲೆನಾಡ ಮರವಾಗಿ […]
ಕಾಡು ಕುದುರೆ
ಕಾಡು ಕುದುರಿ ಓಡಿ ಬಂದಿತ್ತ || ಊರಿನಾಚೆ ದೂರ ದಾರಿ ಸುರುವಾಗೊ ಜಾಗದಲ್ಲಿ | ಮೂಡ ಬೆಟ್ಟ ಸೂರ್ಯ ಹುಟ್ಟಿ ಹಸಿರಿನ ಗುಟ್ಟ ಒಡೆವಲ್ಲಿ ಮುಗಿವೇ ಇಲ್ಲದ | ಮುಗಿಲಿನಿಂದ | ಜಾರಿ ಬಿದ್ದ […]
ಕಾಡು ಕಾಡೆಂದರೆ
ಕಾಡು ಕಾಡೆಂದರೆ ಕಾಡಿನ ಮರವಲ್ಲ ಕಾಡಿನ ಒಳಗೆರೆ ತಿಳಿಲಾರೆ || ಶಿವನೆ || ಹೊರಗಿನ ಪರಿ ನಂಬಲಾರೆ || ನೋಡೋ ಕಂಗಳ ಸೀಳೊ ಏಳು ಬಣ್ಣಗಳುಂಟು ಹರಿಯೂವ ಹಾವನ್ನ ಕೊರೆಯೂವ ಹಸಿರುಂಟು ಹೂವುಂಟು ಮುಳ್ಳಿನ […]
ನಿತ್ಯೋಲ್ಲಂಘನ
ಇವ ಹುಟ್ಟು ಹಾರಾಟಗಾರ; ಇವನಮ್ಮ, ಇವನಜ್ಜಿ ಅಕ್ಕ-ತಂಗಿಯರ, ಅತ್ತೆಯಂದಿರ ಮುದ್ದು ಹನುಮ. ಚಿಕ್ಕಂದಿನಿಂದ ಹಾರುತ್ತಲೇ ಇದ್ದಾನೆ; ಮನೆಬಾಗಿಲು, ಗೋಡೆ, ಮಹಡಿ ಮೆಟ್ಟಿಲು, ಬಚ್ಚಲು, ತಿಕ್ಕಲು ಹರಿವ ಕೊಚ್ಚೆಯನೆಲ್ಲ ಒಂದೇ ಏಟಿಗೆ ಧಡಂ ಎಂದು ಹಾರುತ್ತಾ […]
ಅಗೋ ಸತ್ತಿದೆ ನಾಯಿ ನೋಡು
ವಲ್ಲಿ ಕ್ವಾಡ್ರಸ್, ಅಜೆಕಾರ್ (ಕನ್ನಡಕ್ಕೆ ಕೊಂಕಣಿ ಮೂಲದಿಂದ. ಅನುವಾದ ಲೇಖಕರಿಂದ) ಅಗೋ ಸತ್ತಿದೆ ನೋಡಲ್ಲಿ ನಾಯಿಯೊಂದು ರಾಜರಸ್ತೆಯಲ್ಲೇ ಹಾಡು ಹಗಲಲ್ಲೇ ತನ್ನ ಜೀವದ ಕೆಂಪು ರಗ್ತವ ಹರಿಸಿ ಆರಾಮವಾಗಿ ಹಾದು ಹೋಗುವ ಕಣ್ಣು, ಆತ್ಮ, […]
ಇಂಥ ಮಧ್ಯಾಹ್ನ
ಸಿಟ್ಟೋ ಸೆಡವೋ ಹಠವೋ ಜ್ವರವೋ ತನಗೇ ತಿಳಿಯದೇ ಧುಮುಗುಡುವ ಸೂರ್ಯ, ಕರಗುವುದ ಮರೆತು ಬಿಳುಚು ಹೊಡೆದು ಹಿಂಜಿದ ಹತ್ತಿಯಂತಹ ಮೋಡಗಳು, ಹನಿ ನೀರಿಗೆ ಕಳವಳಿಸಿದ ವಿಭ್ರಾಂತ ಭುವಿ, ಕಾಕಾ ಎನ್ನಲೂ ತ್ರಾಣವಿಲ್ಲದ ಮರದ ಮೇಲಿನ […]
