………. – ೯

ಸೂರ್‍ಯ ಬಲ್ಬಿನ ಯುಗದಲ್ಲೂ ದೀಪಾವಳಿಗೊಮ್ಮೆ ಮಣ್ಣಿನ ಹಣತೆ ಮನೆಸುತ್ತ; ಬಣ್ಣ ಬಣ್ಣದ ಮೋಂಬತ್ತಿ ಸಾಲು ಹಬ್ಬ ಹಳೆಯದಾದರೂ ಬೆಳಕು ಮಾತ್ರ ವಸಾಹತುಶಾಹಿಗೆ ಬದ್ಧ. *****

ಅಖಂಡ ಕರ್ನಾಟಕ

ಅಖಂಡ ಕರ್ನಾಟಕವೆ! ವಿಶ್ವಾತ್ಮರೂಪಕವ! ಎಚ್ಚರಿಸು ನಿದ್ರೆಯಿಂ ಮುದ್ರಿತರ, ಮತ್ತಿತರ ಆಳಿಕೆಗೆ ಮೈಗೊಟ್ಟು ಸೋತವರ, ಬೀತವರ- ಇಲ್ಲದಿರೆ ಎಂದೆಂದು ಈ ಪತನ ಈ ನೋವೆ. ಹುಟ್ಟಳಿಸು ದೂಷಕರ, ನಾಶಕರ, ಸಟೆವೇಷ- ಧಾರಕರ, ಮಾರಕರ, ಜಾತಿಮತ ಲುಬ್ಬಕರ. […]

ಹೊಸ ಬಾಳು ನಮ್ಮದಿದೆ

ಹೊಸ ಜಗವು ರೂಪುಗೊಂಡಿಹುದೀಗ; ಹೊಸ ಬಾಳು ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು! ಹಳೆಯ ಕಾಲದ ರೂಢಿ-ಜಡಮತೀಯರನೆಲ್ಲ ಬಿಟ್ಟು ಬಿಡಿ ಅವರವರ ಪಾಡಿಗಿನ್ನು – ಯುವ ಜನಾಂಗವೆ ಬನ್ನಿ ನವರಂಗಕೆ ಹೊಸ ಪಾತ್ರಧಾರಿಗಳ ಹೊಸ ಕುಣಿತಕೆ; ಮೂಲೆಯಲ್ಲವಿತವಗೆ […]

ಸೃಷ್ಟಿ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಕೆಂಪ ಕೆನ್ನೆಯ ಕಂಡು, ಕಲ್ಲುಗಿರಣಿ ಕೂಡಾ ಹುಚ್ಚೆದ್ದು ಕುಣಿದೀತು ಪರದೆಯಾಚೆಗಿನ ಮುಖ ಕಂಡು, ಮೂಕ ಪ್ರೇಮಿಯ ಹೃದಯ ಶಾಂತವಾದೀತು ಜ್ಞಾನ ದಿಕ್ಕೆಟ್ಟು ದಾರಿ ಮರೆತೀತು, ತಾರ್ಕಿಕನ […]

………. – ೮

ಹನ್ನೆರಡು ಅಂಕಿಗಳ ಮಂಡಲದಲ್ಲಿ ಹಿಡಿದಿಟ್ಟ ಹಗಲು ರಾತ್ರಿಗಳು ಕತ್ತಲೆ ಬೆಳಕು ನೆನ್ನೆ ನಾಳೆಗಳಿಗೆ ಅವಕಾಶ ಗೋಲಾಕಾರ ಸಮಯ ಕಾಲಾತೀತ. ಡಿಜಿಟಲ್ ಗಡಿಯಾರದಲ್ಲಿ ಕಾಲಕ್ಕೆ ರೂಪವೇ ಬೇರೆ. *****

ಆಕಾಶಬುಟ್ಟಿ

೧ ಹೊಗೆ ತುಂಬಿ ನಗೆ ತುಂಬಿ ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ ಜೀವ ತುಂಬಿ, ದೂರ ಹಾರುವದೆಂಬ ಭರವಸೆಯ ನಂಬಿ, ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು ಉತ್ಸಾಹ ಸಾಹಸಕೆ ರೂಪುಗೊಟ್ಟು ಮೇಲುನಾಡಿಗೆ ತೇಲಬಿಟ್ಟೆವಿದೊ […]

ಬೋರು ಕಣೆ ಲೀನ

ಲೀನಾ- ಯುಗಾದಿ ಬಂತು ಗೊತ್ತ ಬೋರು ಕಣೆ ಮಾಮೂಲು ಬದಲಾವಣೆ ನಿನ್ನ ಕರಿ ತುರುಬು ಬಿಚ್ಚಿ ಹರಡಿದಂತೆ ಒದ್ದೆಯಾಯಿತು ಸಂಜೆ. ಹೌದೆ ಕತ್ತಲಿಗು ಬತ್ತಲಿಗು ನಂಟೆ ? ಓಹೋ ನಮಗಾಗೂ ಉಂಟಲ್ಲ ಬಯಲು ತಂಟೆ […]