ಸಾವು

ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ ಯಾರೋ ಕರೆದಂತೆ ಪಾಠದ ಮಧ್ಯಕ್ಕೇ ಸಟ್ಟನೆ ಎದ್ದು ಹೊರಗೆ ನಡೆದುಬಿಡುತ್ತಾರೆ *****

ದ್ವಂದ್ವ

ಎಲ್ಲಾ ಬಿಟ್ಟು ತಲೆಯೊಳಗೇ ಏಕೆ ಸುರುವಾಯ್ತೊ ಹಾಳಾದ ಕಾರಖಾನೆ ! ನೂರು ಯಂತ್ರದ ಗಾಲಿ ಚೀತ್ಕರಿಸಿ ಓಡುತಿವೆ ಇಲ್ಲಿ ಒಂದೇಸವನೆ ಹಗಲಿರುಳು ಬಿಟ್ಟೂ ಬಿಡದೆ ಕಪ್ಪು ಹೊಗೆಯುಗುಳಿ ಅಳಿಸಿಬಿಟ್ಟಿದೆ ಅಗೊ ಆಕಾಶದ ನಕಾಶವನ್ನೆ ! […]

ಕಾವ್ಯದ ಆತ್ಮಾನುಸಂಧಾನ

ಕಣ್ಣು ತಪ್ಪಿಸಿ ಅಜ್ಜನ ನಿಮಿತ್ಯದ ಕವಡೆ ಆಡಿದ್ದು ಉಂಟು; ಕಣ್ಮರೆಯಾದದ್ದನ್ನು ಹಳೆಮನೆಯ ನಾಗಂದಿಗೆಯಲ್ಲಿ ಕಂಡು ಈಗ ಅನಿಮಿತ್ತ ನನಗೆ ನಾನೇ ಆಡಿಕೊಳ್ಳುವ ವಾರಿಧಿಯ ಅವಶೇಷವಾದ ಈ ವಿಶೇಷ ಮುಷ್ಠಿಯಲ್ಲಿ ಜಾರುವ ನಯದ ತಕರಾರು ಎನ್ನಿಸಿ […]

ನೀವು ಜೊತೆಗಿದ್ದರೆ

ನಿತ್ಯ ಸುಡುವ ಸೂರ್ಯನಡಿ ನೆತ್ತಿ ಬಿರಿದರೂ ಕಾಲು ಕೊಂಡೊಯ್ಯುತ್ತದೆ ನಡೆದ ದಾರಿಯಲ್ಲೇ ಮತ್ತೆ ಮತ್ತೆ ನಡೆದು, ಮೈಲಿಗಟ್ಟಲೆ ದೂರ ಹುಲ್ಲುಗಾವಲ ಹಾಗೆ ಬಿದ್ದುಕೊಂಡಿದೆ ನೋಡಿ ಬೇಕು ಬೇಡಗಳು. ರಾತ್ರಿ ಮಲ್ಲಿಗೆ ಹೂವ, ಕಂಪು ಸುರಿಸಿದ […]

ಕೊನೆಯ ನಿಲ್ದಾಣ

೧ ಜೇನು ಹುಟ್ಟಿಗೆ ಯಾರೊ ಹೊಗೆಯಿಟ್ಟು ಹೋದಂತೆ ಮಂದಿ ಗಿಜಿಗಿಟ್ಟಿರುವ ನಿಲ್ದಾಣ; ಯಾವುದೋ ಊರು ಎಲ್ಲಿಯೋ ಏತಕೋ ಅವಸರದ ಕೆಲಸ ಮನದ ಕೊನೆಯಂಚಿನಲಿ ಮತ್ತಾವದೋ ಸರಸ ವಿರಸ ; ನಿಂತಲ್ಲಿಯೆ ಕುಳಿತಲ್ಲಿಯೆ ಎದೆಯ ಮಗ್ಗದಲಿ […]

ಹಿತೋಪದೇಶ

ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. *****

ಕನ್ನಡಿ

ನಮ್ಮ ಮನೆಯ ಕನ್ನಡಿ ಯಲಿ ಮಾತ್ರ ನನಗೆ ನಾ ಚಂದ ಉಳಿದಲ್ಲಿ ಪ್ರೇತ ನರಪೇತಲ ಊದಿಕೊಂಡ ಗಲ್ಲ ಚಿಂತೆ ತುರಿಸುವ ಮೂಗು ಆಸೆ ಇಂಗಿದ ಕಣ್ಣು ತುಟಿ ಕಿವಿ ಥೇಟು ಮಳ್ಳ ನ ರೂಪ […]

ಪಣತಿ

೧ ನೂರು ಹೃದಯ ಮೇರು ಭಾವಗಳ ನೂರಾರು ಸಾಲುದೀಪ ಹೊತ್ತಿ ಉರಿದಿವೆ ಸುತ್ತು ಕತ್ತಲೆಯ ಕೂಪದಲಿ- ಒಂದು ಚಣ, ಬೆಳಕು ನಗೆ ನಲಿವು ಸಲ್ಲಾಪ: ಮರುಗಳಿಗೆ ‘ಆ’ ಎಂದು ಅಂಧಕಾಸುರ ಬಂದು ಕೊಳ್ಳೆ ಹೊಡೆಯಲು […]

ಬೇರೊಬ್ಬ

ಸುಲಭ ಲಭ್ಯವಾದ ಯಾವ ‘ಹು ಈಸ್ ಹು’ನಲ್ಲಾದರೂ ಅವನ ಮಾಹಿತಿ ಸಿಗುತ್ತದೆ: ಬಾಲ್ಯದಲ್ಲಿ ಕ್ರೂರಿಯಾದ ಅಪ್ಪನ ಶಿಕ್ಷೆ ಸಹಿಸಲಾರದೆ ಅವನು ಪರಾರಿಯಾದದ್ದು ಭಿಕಾರಿಯಾಗಿ ಅಲೆದದ್ದು, ನರಳಿದ್ದು ಯೌವನವಿಡೀ ಹಗಲಿರುಳು ದುಡಿದು, ದಣಿದು, ಗೆದ್ದು ಖ್ಯಾತನಾಗುತ್ತ […]

ಮುತ್ತಿನ ಹಾರ

ಅದು ಹೇಗೋ ಏಕಕಾಲಕ್ಕೆ ಬೆಣಚಿಕಲ್ಲುಜ್ಜಿ ಬೆಂಕಿ ಕಿಡಿ ಹೊಳೆದ ಹಾಗೆ ತಿಳಿದೇ, ತಿಳಿಯದ ಹಾಗೆ ಭುಜಕ್ಕೆ ಭುಜ ತಾಗಿಸಿ ಮೈಯ್ಯೆಲ್ಲ ಮಕಮಲ್ಲು. ರಾತ್ರಿ ಸಣ್ಣಗೆ ಗಾಳಿ ಬೆನ್ನಹುರಿಯಲ್ಲಿ ಸಿಳ್ಳೆ ಹೊಡೆದಂತೆ. ಶವರ್‍ರಿನಡಿ ಕಪ್ಪು ಗುಂಗುರ […]