೧ ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ ನೈರಾಶ್ಯದಭ್ರಂಗಳು; ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ ಬೆಳಕೆಲ್ಲಿ? ಬರಿಯ ಇರುಳು! ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ ಕಾಳುಗೆಟ್ಟೋಡಿಸುವವು; ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು ದಂಡೆಗಪ್ಪಳಿಸುತಿಹವು. ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು ತಾಂಡವಂಗೈಯುತಿಹವು, […]
ವರ್ಗ: ಕವನ
ಬಂಧದಿಂ ಬಿಡುಗಡೆಗೆ
(ಅಗಸ್ಟ ಹದಿನೈದು) ನಾಡಿನೆದೆಯಲ್ಲಿಂದು ಹರುಷ ಉಕ್ಕೇರುತಿದ ಫಲಿಸಲಿದೆ ಬಹು ದಿನದ ಹಿರಿಯ ಬಯಕೆ; ನಿಶೆಯಿಂದ ಉಷೆಯಡೆಗೆ, ಬಂಧದಿಂ ಬಿಡುಗಡೆಗೆ ಜನಕೋಟಿ ಸ್ವಾತಂತ್ರ್ಯ ತೀರದೆಡೆಗೆ ಸಾಗಿಹರು; ನೀಗಿಹರು ಹಾಳು ಕೂಳೆ ನನಹುಗಳ- ಬಳಿಸಾರಿ ಬಂದಿಹುದು ಸೌಖ್ಯ […]
ಪ್ರಣಯ ಪಂಚಮಿ
೧ ತುಂಟಾಗಿ ನಾಚಿ ಮೊಣಕಾಲು ಮಡಿಸಿ, ಗಲ್ಲ ಊರಿ ಮುನಿದ೦ತೆ ನಟಿಸಿ ಕಣ್ಣುಗಳನ್ನು ತುಂಬಿಕೊಂಡವನನ್ನು ತನ್ನ ಖಾಸಗಿ ಕತ್ತಲೆಗೆ ಒಯ್ಯುತ್ತ ಒಡಲುಗೊಳ್ಳುವ ಅವಳ ನಿರೀಕ್ಷೆ: ಅವನ ಧಾರಾಳ ಅವಕಾಶ ಮತ್ತು ಆಗ್ರಹ ೨ ಸುಮ್ಮಗೆ […]
ಗೆಲುವೆನೆಂಬುವ ಭಾಷೆ
ಸಂಸಾರ ದಂದುಗದ ಹುರಿಹಂಚಿನಲಿ ಬೆಂದು ಹುರುಪಳಿಸಿ ತಡಬಡಿಸಿ ನಾಣುಗೆಟ್ಟೋಡುತಿಹ ಅಳಿಮನದಿ ತಲ್ಲಣಿಸಿ, ನಂಬದಿಹ ನಚ್ಚದಿಹ ಡಾಂಭಿಕದಲಂಕಾರ ತೊಟ್ಟ ಜೀವವೆ, ಎಂದು ಎಂದು ನಿನ್ನಯ ಬಾಳಿಗೊಂದು ನಿಲುಗಡೆ ಸಂದು ಕಲ್ಯಾಣಮಾದಪುದು, ಶಾಂತಿ ನೆಲೆಗೊಳ್ಳುವುದು? ಭಾವಶುದ್ಧಿಯ ಪಡೆದು […]
