ಸಸ್ಯೂರ್‌ನಿಗಾಗಿ ಬರೆದ ಕಿರುಗೀತೆ ಎಂದಲ್ಲ
‘ಮರ’ಕ್ಕೆ ಮರವೆನ್ನದೆ
ಸುಮ್ಮನೆ ಬೇರೇನೋ ಕರೆದಿದ್ದರೆ,
‘ಮರ’ ಬೇರೇನೋ ಆಗಿರುತ್ತಿತ್ತು.
ಅದನ್ನು ‘ಆಕಾಶ’ ಎಂದು ಕರೆದಿದ್ದರೆ,
ಅದು ಮೂರಕ್ಷರದ ಮರವಾಗಿ;
ಮೂರಕ್ಷರದ ಆಕಾಶ ಮತ್ತೇನೋ ಆಗಿರುತ್ತಿತ್ತು.
ಹುಡುಗಿಯರಿಗೆ
ಸುಮ್ಮನೆ ಅವಳು ಎಂದು
ಏನೇನೋ ಬೇಕಾದ್ದು ಹೇಳದೆ
ಸರಿಯಾಗಿ ಬೇರೇನೋ ಕರೆದಿದ್ದರೆ;
ಹುಡುಗರು,
ಎಂದೂ ಹೀಗೆ….
ಈಗಿರುವ ಹಾಗೆ ಇರುತ್ತಿರಲಿಲ್ಲ.
ದ ಬಾಂಡ್ ಬಿಟ್ವೀನ್ ದ
ಸಿಗ್ನಿಫಯರ್ ಅಂಡ್ ದ ಸಿಗ್ನಿಫೈಡ್
ಈಸ್ ಆರ್ಬಿರ್ಟರಿ.
*****