ವಿದ್ಯೆ ಖರೀದಿಸಿದ ಮಾತ್ರಕ್ಕೆ ಬುದ್ದಿ ಬಂತೆ?
ಉಬ್ಬೆಗೆ ಹಾಕಿದರೆ ನಯವಾಗುವುದೆ ಬೊಂತೆ?
ಯಾವೊತ್ತಿಗೂ ಈ ಅಸಂಸ್ಕೃತ ಖೋಡಿ
ಅವಿನಯ ಪೊಗರುಗಳ ಜೈಲೆ;
ಗುರುತಿನ ಗುರು ಹಿರಿಯರು ಜೊತೆಗೂಡಿ
ಬೀದಿಯೊಳೆದುರಾದರೆ, ಇವ ನೋಡಿ
ಸಲಾಂ ಮಾಡುವುದು ಎಡಗೈಲೆ.
*****
ವಿದ್ಯೆ ಖರೀದಿಸಿದ ಮಾತ್ರಕ್ಕೆ ಬುದ್ದಿ ಬಂತೆ?
ಉಬ್ಬೆಗೆ ಹಾಕಿದರೆ ನಯವಾಗುವುದೆ ಬೊಂತೆ?
ಯಾವೊತ್ತಿಗೂ ಈ ಅಸಂಸ್ಕೃತ ಖೋಡಿ
ಅವಿನಯ ಪೊಗರುಗಳ ಜೈಲೆ;
ಗುರುತಿನ ಗುರು ಹಿರಿಯರು ಜೊತೆಗೂಡಿ
ಬೀದಿಯೊಳೆದುರಾದರೆ, ಇವ ನೋಡಿ
ಸಲಾಂ ಮಾಡುವುದು ಎಡಗೈಲೆ.
*****