ಓ ನಿಲ್ಲಿ

ಓಯ್ ಕಮಲಗಳೇ
ತುಸು ತಾಳಿ ಅರಳಬೇಡಿ
ಏಯ್ ಮೋಡಗಳೇ ತುಸು ತಾಳಿ
ಓಡಬೇಡಿ
ಅಯ್ಯೊ ಕವಿಸಮಯಗಳೇ ತಾಳಿ
ಜಾರಬೇಡಿ

ನಾನೀಗ
ಕಚೇರಿಯೊಂದರಲ್ಲಿ ಒಂದು ಇನ್‌ಕಂ
ಸರ್‍ಟಿಫಿಕೇಟ್‌ಗಾಗಿ
ಉತ್ಕಟ ತುದಿಗಾಲಲ್ಲಿ ನಿಂತು ಕಾಯುತ್ತಿರುವೆ

ಮುಂಜಾನೆಯಿಂದ
*****