ಬೇಜವಾಬು

“ನಿಮ್ಮ ಹೊಸ ಕವಿತೆ ಹಾಗೂ ಹೊಸ, ವಿಶಿಷ್ಟ ಭಾವ-
ಚಿತ್ರ ಕಳಿಸಿ” ಎಂಬ ಸಂಪಾದಕರ ಪತ್ರ ಬಂತು.
ಆಗ ಒಸಡಿನ ಊತದ ಜೊತೆ ಸಖತ್
ಹಲ್ಲು ನೋವಿನಿಂದ ನರಳುತ್ತಿದ್ದೆ.
ನರಕ ಯಾತನೆಯಲ್ಲೂ ಫೋಟೊ ತೆಗೆಸಿ ಕಳಿಸಿದೆ.
ತಲಪಿದ್ದಕ್ಕೆ ಅವರಿಂದ ಈ ತನಕ ಪ್ರತಿಕ್ರಿಯೆ ಇಲ್ಲ.
*****