‘ಜೈ ಯಮುನಾಮಯ್ಯಾ… ಜೈ ಗಂಗಾಮಯ್ಯಾ… ಜೈ ಕೇದಾರೇಶ್ವರ…. ಜೈ ಬದರೀ ವಿಶಾಲ…’ ಕಳೆದ ಏಳೆಂಟು ದಿನಗಳಿಂದ ಈ ಚಾರಧಾಮ ಯಾತ್ರೆಯಲ್ಲಿ ಗುರಣ್ಣ ಈ ಜೈಜೈಕಾರಗಳಲ್ಲಿ ಮುಳುಗೇಳುತ್ತಿದ್ದಾನೆ. ಯಾತ್ರೆಯ ಸುರುವಾತಿಗೆ ಗುರಣ್ಣಗ ಈ ಜೈಕಾರಗಳು ಮಜಾ […]
ಟ್ಯಾಗ್: Kannada Short Stories
ಸಾವಿನತ್ತ ಒಂದು ಹೆಜ್ಜೆ
ಮೇ ತಿಂಗಳ ಎರಡನೇ ತಾರೀಖು. ರವಿ ಸಾಯಬೇಕೆಂದು ನಿರ್ಧರಿಸಿದ ದಿನ. ಮೇಜಿನ ತುಂಬ ಖಾಲಿ ಹಾಳೆಗಳನ್ನು ಹರಡಿಕೊಂದು ಪೆನ್ನಿನ ಟೋಪಿ ತೆರೆದು ಬಹಳಷ್ಟು ಯೋಚಿಸಿದ, ನಂತರ ಬರೆದ. ಪೊಲೀಸ್ ಅಧಿಕಾರಗಳ ಉದ್ದೇಶಿಸಿ, ಮೊದಲ ಪತ್ರ_‘ತನ್ನ […]
ಮುನ್ನೂರು ಗಳಿಗೆಗಳ ಆಚೆಗೊಂದು ಲಂಘನ
ಈ ಊರಿನಲ್ಲಿ ಬಳಕೆಗೊಳ್ಳುವ ಎಷ್ಟೊಂದಕ್ಕೆ ನೋಡಿ – ನಮ್ಮಲ್ಲಿ ಪರಿಭಾಷೆಗಳು ಇಲ್ಲ. ಕಳೆದ ಹತ್ತು ವರ್ಷಗಳಲ್ಲಿ ಆಮದುಗೊಂಡ ಸರಕುಗಳಂತೆ ಇಲ್ಲಿ ತಲೆಯೆತ್ತಿ ಹೊಸ ಸಹಸ್ರಮಾನದ ರೂಪಕಗಳಂತೆ ಕೂಡಿಕೊಂಡಿರುವ mಚಿಟಟ, mಚಿಡಿಣ, soಜಿಣತಿಚಿಡಿe ಠಿಚಿಡಿಞ, ಜಿಟಥಿoveಡಿ, […]
ಕೆಲವು ಬೇವಾರಸೀ ಟಿಪ್ಪಣಿ
(೨೧ನೇ ಜುಲೈ ೨೦೦೧) ಇಂಗ್ಲಿಷಿನ ‘ಲಿಗಸಿ’ ಇದಕ್ಕೆ ಕನ್ನಡದ ಪರಿಭಾಷೆಯನು? ಹುಡುಕುತ್ತಲೇ ಇದ್ದೇನೆ. ಕಳೆದ ಹತ್ತು ವರ್ಷಗಳಿಂದ… ಅಂದರೆ ಮೈಯಲ್ಲಿ ಗಂಡಸ್ತಿಕೆಯ ಛಾಪು ಗಟ್ಟಿಕೊಂಡಂದಿನಿಂದ. ಮನಸ್ಸು ಹುಡುಗು ಅಳುಮುಂಜಿತನವನ್ನು ಕಳಚಿಕೊಂಡಾಗಿನಿಂದ. ಅಮ್ಮನ ಸೆರಗಿನಾಚೆಗಿನ ಪ್ರಪಂಚಕ್ಕೆ […]
ಕಟಕಟೆಯಲ್ಲಿ ಇಂದು ಫಿರ್ಯಾದುಗಳ ಗೋಜಿಲ್ಲ
ಎಲ್ಲ ನೇರ ಅಂತ ಲಾಯರ್ ಹೇಳಿದ್ದರು. ಈ ನಾಲ್ಕಂತಸ್ತಿನ ಎರಡನೇ ಮಹಡಿಗೆ ಕುರಿಮಂದೆಯಂತಹ ಜನಜಂಗುಳಿಯಲ್ಲಿ ನಿರ್ವಿಣ್ಣವಾಗಿ ಹತ್ತಿ ಬಲಗಡೆಯ ಹತ್ತಡಿಯಗಲದ ಜನವೇ ಜನವಿದ್ದ ಕಾರಿಡಾರಿನಲ್ಲಿ ಹೆಜ್ಜೆ ಹಾಕುವಾಗ ನಿಮ್ಮ ರಿಸ್ಟ್‌ವಾಚು ಹತ್ತು ಮುಕ್ಕಾಲು ತೋರಿಸುತ್ತಿರುತ್ತದೆ. […]
ಎಲ್ಲವೂ ತುಂಬಿ ತುಂಬಿ
ಶಿವಾಜೋಯಿಸರಿಗೆ ಏನೊಂದೂ ತೋರದಿದ್ದಾಗ, ಸುಮ್ಮನೆ ಬೆಂಗಳೂರಿನ ಓಣಿ ಕೋಣಿಗಳಲ್ಲಿ ಬೀದಿ ಉದ್ಯಾನ ಸುತ್ತಬೇಕೆನಿಸುತ್ತದೆ. ಅದೇ ಅವರ ಹವ್ಯಾಸ. ಹಿಂದಿನ ದಿನಗಳಲ್ಲಿ ಪ್ರಜಾ ಸಂಕ್ಷೇಮ ವಿಚಾರಿಸಲು ಹೋಗುತ್ತಿದ್ದ ಛದ್ಮ ವೇಷಧಾರಿ ರಾಜಮಹಾರಾಜರ ಹಾಗೆ! ರಿಟೈರಾದಮೇಲೆ ಜೋಯಿಸರು […]
ಇಷ್ಟು ನಕ್ಷತ್ರಗಳಲ್ಲಿ ಯಾವುದು ನನಗೆ?
ಮಧುಕರ, ಇನ್ನೊಮ್ಮೆ ಯೋಚಿಸುತ್ತ ಕೂತರೆ ಹಿಂದೆ ಅನೇಕ ಸಲ ಆದ ಹಾಗೆ ಅಡಧಳೆಯಾಗಿ, ಮನಸ್ಸಿಗೆ ನಿಷ್ಕಾರಣ ಕಣಕಣಿ ಆವರಿಸಿ; ನಿರ್ಧಾರ ಬದಲಾಗುವ ಎಲ್ಲ ಶಕ್ಯತೆಯೂ ಇದೆಯೆಂದು ಅನ್ನಿಸಿದ್ದರಿಂದ ಅಂದುಕೊಂಡದ್ದನ್ನು ಪಕ್ಕೀಮಾಡಲು ಟಪಾಲು ಬರೆದುಹಾಕಿದ್ದ. “…ಈ […]
ಬೆಸಿಲ್ ಒಪ್ಪಂದ
ಗಾಜಿನ ಗೋಡೆಯಂತೆ ಹರಡಿಕೊಂಡ ಕಿಟಕಿಯ ಕರ್ಟನುಗಳು ಅವಳ ಹಿಂದೆ ನಾಲಿಗೆ ಚಾಚುತ್ತ ಹೊರಳುತ್ತಿದ್ದವು. ಛಾವಣಿಗೆ ನೇತು ಹಾಕಿದಂತಿದ್ದ ಆ ಟಿವಿಯಲ್ಲಿ ಅನಗತ್ಯವಾಗಿ ಕೊಲೆಗಳಾಗುತ್ತಿದ್ದವು, ರಾಜಕಾರಣಿಗಳು ಬೈದುಕೊಳ್ಳುತ್ತಿದ್ದರು. ಹುಡುಗಿಯರು ಬಟ್ಟೆ ತೊಡದಂತೆ ಕಾಣಿಸಿಕೊಂಡು ಮರೆಯಾಗುತ್ತಿದ್ದರು. ರಾತ್ರಿಯಿಡೀ […]
ಮುತ್ತುಚ್ಚೇರ
[೧] ಜಡಿಮಳೆಯ ಅಡಿಯಲ್ಲೇ ದಾಪುಗಾಲು ಹಾಕುತ್ತಿದ್ದರು ಬೀರಾನ್ ಕೋಯಾ. ನಾಲ್ಕು ಹೆಜ್ಜೆಗಳಿಗೊಮ್ಮೆ ರಪ್ಪನೆ ರಾಚುವ ಮಳೆಗಾಳಿ ಮುದಿ ಕೋಲುದೇಹವನ್ನು ಥರಗುಟ್ಟಿಸುತ್ತಿತ್ತು. ಎರಡೂ ಕೈಗಳಿಂದ ಅಮುಕಿ ಹಿಡಿದಿದ್ದ ಕೊಡೆಯನ್ನು ಸ್ವಲ್ಪ ವಾಲಿಸಿದ ಕೋಯಾ ಕೈಗಡಿಯಾರಕ್ಕೆ ಕಣ್ಣು […]
