ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ- ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ. ಬಲಿದಾನದಿತಿಹಾಸ ರಕ್ತಸಂಪುಟಮಾಗಿ ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ ಹೊಳೆದಿಹಿರಿ; ಕಲ್ಪಂಗಳುರುಳಿದರು […]
ಟ್ಯಾಗ್: Chennaveera Kanavi
ಬಿಡುಗಣ್ಣ ಬಾಲೆ
ಬಿಡುಗಣ್ಣ ಬಾಲೆ ನೀನಾವ ಬೆಳುದಿಂಗಳನು ಬಂಧಿಸಿಹೆ ಕಣ್ಣ ನುಣ್ಪೊಗರಿನಲ್ಲಿ? ಹೂಬಟ್ಟಲಿಂದ ಹಿಂದಿರುಗುತಿಹ, ಝೇಂಕಾರ ಗೈಯುತಿಹ ಭೃಂಗ ಕಣ್ಣಾಲಿಯಲ್ಲಿ. ಅಮಿತ ಸುಖ ಸೂಸುತಿದೆ ನವನವೋನ್ಮೇಷದಲಿ ನೋಟ ನಿಬ್ಬೆರಗಿನಲಿ, ನೀರವದಲಿ; ದಿವ್ಯ ಬಯಕೆಯ ಹಣ್ಣು ಹಾಲಾಗಿ ಜೇನಾಗಿ […]
ಎತ್ತು ಮೇಲಕೆನ್ನನು
೧ ಕಾಸಾರದ ಕೆಸರಿನಿಂದ ಪಾಚಿ ಜೊಂಡು ನೀರಿನಿಂದ ವಿಮಲ ಕಮಲ ಮೇಲಕ್ಕೆದ್ದು ಕೊಳದ ಎದೆಯನಮರಿ ಗೆದ್ದು ದಲ ದಲ ದಲವರಳುವಂತೆ ಥಳ ಥಳ ಥಳ ತೊಳಗುವಂತೆ ಎತ್ತು ಮೇಲಕನ್ನನು ಜೀವಪಥದಿ ಪತಿತನು. ೨ ಮುಳ್ಳು […]
ಈ ಘಟಪ್ರವಾಹ
ಬೆಟ್ಟದುದರದಿ ಹುಟ್ಟಿ ದರಿಕಂದರವ ಮೆಟ್ಟಿ ಮುಳ್ಳುಕೊಂಪೆಗಳಲ್ಲಿ ಬಂಡೆಗಲ್ಲುಗಳಲ್ಲಿ ಹರಿಹರಿದು ಸುರಿಸುರಿದು ಮೊರೆಮೊರೆದು ಕರೆಕರೆದು ಬಂದುದೀ ತೊರೆಗೆ ತ್ವರಿತದಿಂದೊಡ್ಡನೊಡ್ಡಿ ಜಲಸಂಗ್ರಹಿಪನೆಂಬಿಚ್ಛೆಯಿಂದದರ ಕೊರಲಿ- ಗುರುಲು ಬಿಗಿದಿದ್ದರಾ ಬಯಕೆ ಬರುದೊರೆಯಾಗಿ ಸ್ವಚ್ಛಂದವಹ ಸಲಿಲವಲ್ಲಿಯ ಕಲೆತು ಮಲೆತು ನಿಲುಗಡೆಯ ತಿರುಗಣಿಯಲುರುಳಿ […]
ಬಾಳಿನ ಬೀಳಿದು….
ಬಾಳಿನ ಬೀಳಿದು, ಕೂಳಿನ ಗೋಳಿದು ಸಾವಿನ ಸಂತೆಯು ನೆರೆಯುತಿದೆ; ವೇದ ಪುರಾಣದ ವಾದಕೆ ಸಿಲುಕದ ವೇದನೆಯೊಂದಿದು ಕೊರೆಯುತಿದೆ. ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ ಕಣ್ಣಿಗೆ ಕತ್ತಲೆಗಟ್ಟುತಿದೆ; ಬಡತನ ಶಾಪಕೆ, ಒಡಲುರಿ ತಾಪಕೆ ಮಸ್ತಕ ಚಿಣ್ […]
ನನಸಿನ ಕನಸು
ಹೋದೆ ಹೋದೆನು ದೂರ ನಡೆದೆನು ಕನಸು ಕೈಹಿಡಿದಾಚೆಗೆ, ಊರಿನಾಚೆಗೆ ಗಿರಿಯ ಶೃಂಗಕೆ ಚೆಲುವು ಚಿಮ್ಮುವ ಕಾಡಿಗೆ; ಕಾಡಗಿಡಗಳು ಮುಗಿಲ ಮುತ್ತಿಡೆ ಈರ್ಷೆ ತೋರಿಸುವಲ್ಲಿಗೆ, ಹಚ್ಚ ಹಸುರಿನ ಪಚ್ಚ ಪಯಿರಿನ ನಿಚ್ಚಸುಂದರ ಬೀಡಿಗೆ ಏರಿ ಗಿರಿಯನು, […]
