ಪಣತಿ

೧ ನೂರು ಹೃದಯ ಮೇರು ಭಾವಗಳ ನೂರಾರು ಸಾಲುದೀಪ ಹೊತ್ತಿ ಉರಿದಿವೆ ಸುತ್ತು ಕತ್ತಲೆಯ ಕೂಪದಲಿ- ಒಂದು ಚಣ, ಬೆಳಕು ನಗೆ ನಲಿವು ಸಲ್ಲಾಪ: ಮರುಗಳಿಗೆ ‘ಆ’ ಎಂದು ಅಂಧಕಾಸುರ ಬಂದು ಕೊಳ್ಳೆ ಹೊಡೆಯಲು […]

ಪಡುಗಡಲು

೧ ಇದೋ ಕಡಲು ! ಅದೋ ಮುಗಿಲು ! ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು! ಎನಿತೆನಿತೋ ಹಗಲು ಇರುಳು ತೆರೆಗಳ ಹೆಗಲೇರಿ ಬರಲು ನೆಲವನಳಲ ಮಳಲಿನಲ್ಲಿ ಹುಗಿದು ಮುಂದೆ ಸಾಗಿವೆ! ಋತು ಋತುಗಳು ಓತು […]

ಹೊಸಹುಟ್ಟು

ನಿದ್ದೆ ಮಡಿಲೊಳು ದಣಿದು ಮಲಗಿಹುದು ಜಗದ ಬಾಳು ; ಹಗಲಿನ ಅಪಸ್ವರಗಳೆಲ್ಲ ಮೌನದಲಿ ಮರೆತಿಹವು ನೂರಾರು ಮೇಲುಕೀಳು ! ನಿದ್ದೆ ಬಾರದೆ ನಿನಗೆ? ಬೀಳದೆಯ ಸವಿಗನಸು ? ನೆಲದಿಂದ ಮುಗಿಲವರೆಗೂ ಚಿಮ್ಮಿ ಬರುತಿಹವೆ ಬಾಣ […]

ಮೃತ್ಯುಬಂಧ

೧ ಅಲ್ಲಿಯೇ ಕುಳಿತಿತ್ತು ಹಾವು! ಮೆತ್ತಗೆ ಸುರುಳಿ ಸುತ್ತಿ ಹೆಡೆಯೆತ್ತಿ ಆಡುತ್ತಿತ್ತು ಕೈ ಮಾಡಿ ಕರೆವಂತೆ ಮೋಹಬಂಧ ! ಜೋಡು ನಾಲಗೆ-ನಾ ಮುಂಚು ತಾ ಮುಂಚು ಮುಗಿಲ ಮೋಹರದಲ್ಲಿ ಸಳ ಸಳ ಮಿಂಚು ಹರಿದಾಡಿ, […]

ಕಾಲಾತೀತ

‘ಬಿಡುವಿಲ್ಲ, ಅರ್‍ಜಂಟು!’ ಟಾರುಬೀದಿಯ ತುಡಿತ! ಕಾರು ಮೋಟಾರು ಸೈಕಲ್ಲು ಟಾಂಗಾ ಟ್ರಕ್ಕು ಉಸಿರು ಕಟ್ಟುವ ತೆರದಿ ಬಟ್ಟೆಯಲ್ಲಿ ಹಾಸು ಹೊಕ್ಕು! ಗಡಿಯಾರದೆಡೆಬಿಡದ ಟಕ್ಕುಟಕ್ಕಿನ ಬಡಿತ! ಅಫೀಸು ಶಾಲೆ ಕಾಲೇಜು ಅಂಗಡಿ ಬ್ಯಾಂಕು ಎಳೆಯುತಿಹವಯಸ್ಕಾಂತದೋಲು ಜೀವಾಣುಗಳ […]

ನೆರಳು

ನಿಟ್ಟುಸಿರನೆಳೆದು ದಾಟಿತು ಕೊನೆಯರೈಲು : (ತಕ್ಕೊ ಕೈಮರದ ಕರಡೀಸಲಾಮು !) ಕೈಯ ಚಾಚಿದ ನೆರಳು ಚಲಿಸುತ್ತಿದೆ…..! ಮೆಲ್ಲಮೆಲ್ಲನೆ ಸಂಜೆ ಹಿಂಬಾಲಿಸುತ ಬಂತು! ಅಸ್ಥಿ ಪಂಜರದೊಡಲ ತುಂಬುತ್ತಿದೆ! ಕೈಯಕೋಲನು ಮೀಟಿ ಸೇತುವೆಯ ದಾಟಿ ಕೈಯ ಚಾಚಿದ […]

ಋತುಸಂಸಾರ

-೧-ಮೂರು ತಿಂಗಳುಬೇಸರವ ನೀಗಿಕೊಳ್ಳಲು ಬಂದು ತಂಗಿದಳುಮಗಳ ಮನೆಯೊಳು ಮುದುಕಿ ಮೋಜುಗಾರ್‍ತಿ.ಮೊದಲೆರಡು ದಿನ ಕ್ಷೇಮಸಮಾಚಾರದ ಸುದ್ದಿ,ಬೇಡವೆಂದರು ಕೂಡ ಕೆಲಸಕ್ಕೆ ಹಾತೊರೆವ ಕೈಹಾಗೆಯೇ ನಾಲ್ಕು ದಿನ ಸೈ ;ಸುರುವಾಯ್ತು ರಗಳೆಅಷ್ಟಿಷ್ಟು ಮಾತಿಗೇ ವಟವಟಾ ಪಿಟಿಪಿಟೀ … …ಲಟಿಕೆ […]

ಚಿಂತನ

೧ ತೆರಳಿದರು ಅತಿಧಿಗಳು ಮರಳಿದರು ಮನೆಗೆ ನನ್ನ ಮನೆ (ಗುಬ್ಬಿ ಹೆರವರ ಮನೆಗೆ ತನ್ನ ಮನೆ ಎಂದಂತೆ) ಬರಿದಾಯ್ತು ಕೊನೆಗೆ! ಎದೆಯೊಲವನರಳಿಸುತ ಕೆರಳಿಸುತ ಬಂದು ಒಂದು ದಿನ ನಿಂದು, ಏನೆಲ್ಲವನು ಒಮ್ಮೆ ಹೊಳಹಿನಲಿತಂದು ಎದೆಯ […]

ಸೊಳ್ಳೆ

೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […]

ವಿರಹಿ-ಸಂಜೆ

ಉರಿದುರಿದು ಹಗಲುಆರಿ ಹೋಗಿಹ ಕೆಂಡವಾಯ್ತು ಮುಗಿಲು!ನೇಸರನಿಗೂ ಬೇಸರಾಗುವದು ಸಹಜನಿಜ- ,ರಜೆಯೆ ಸಿಗದಿರಲು ಅವನಿಗೆಲ್ಲಿಯದು ಮಜ?ಅಂತೆಯೇಅವನೆಂದಿನಂತೆಯೇಕರಿಯ ಮೋಡದ ಬರಿಯ ಕಂಬಳಿಯ ಮುಖಕೆಳೆದುಹೊತ್ತೂಂಟ್ಲೆ ಮಲಗಿದನು ಗಪ್ಪುಗಡದು ! ಮಗುವು ಕಿಟಕಿ ಹಚ್ಚಿ ಕೀಸರಿಟ್ಟಂತೆಮಳೆಯು ಜಿಟಿ ಜಿಟಿ ಹತ್ತಿ […]