ಅನ್ವರ್‍ಥ

ಗರಿಮುರಿ ಹುಲ್ಲುಗರಿಕೆ ಚೂಪಾಗಿ ಸೀರಾಗಿ ಪುಳಕಿಸಿ ನಿಂತಂತೇ ನನ್ನ ಭಾವನೆಗಳಿಗೆಲ್ಲ ‘ಹಿಟ್’-ಆಗುವ ಆಕಾರ ತುಂಬುವ-ಜಿಜ್ಞಾಸೆ ವ್ಯರ್‍ಥ ಕಂಡ ಕೆಂಡಸಂಪಿಗೆಗೆಲ್ಲ ನಿಗಿನಿಗೀ ಮುತ್ತಿಕ್ಕಿ ತುಟಿಯ ಕುಡಿ ಸುಟ್ಟ ಕಲ್ಪನೆಗೂ ಅನುಭವದ ಅರ್‍ಥ ಹೀಗೆಷ್ಟೋ ಮಾತು, ಮನಸಿಗೂ […]

ಗಾಂಧಿ ಮತ್ತು ಎಂಟನೇ ಹೆನ್ರಿ

ಬೇಸರವಾದಾಗ ತಾಯಂದಿರು ಊಟ ಬಿಡಲ್ಲವೆ? ಮಾತಾಡೋದು ಬಿಡಲ್ಲವೆ? ಎಲ್ಲ ಬಿಟ್ಟಂತೆ ಕಂಡರೂ ಕಸ ಮುಸುರೆ ಅಂತ, ವ್ರತಗ್ರಿತ ಅಂತ ಕಾಲ ಕಳೀತಾನೆ ಮನೆಮಂದಿ ಮೇಲೆ ಒಂದು ಕಣ್ಣಿಟ್ಟು ಕಾಯಲ್ಲವೆ? ಅದೇ ಆಗ್ರಹದ ಗಾಂಧಿಗೆ ದೇಶವೇ […]

ಹೈದರಾಬಾದ್

ಪಾಳು ಗುಮ್ಮಟದ ಮೈಗೆ ಪಾರಿವಾಳದ ತೇಪೆ ಹಸಿರು ಚಾದರದಂಚಿಗೆ ಹೊಳೆವ ಜರದೋಜ್ಹಿ ಕೈ ಕೆಲಸ ಮಂಡಿಯೂರಿ, ಬೆನ್ನಬಗ್ಗಿಸಿ ‘ಅಲ್ಲಾ….. ಹೂ…..!’ ಮುಂಜಾನೆ ಹೊನ್ನ ಬೆಳಕು ಶಹರಿನ ತುಂಬ ತಣ್ಣನೆ ಗಾಳಿ ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ […]

ಬಸಳೆ – ನಾನು

ನನ್ನ ಪ್ರೀತಿಯ ಹಿತ್ತಲಲ್ಲಿ ಅಮ್ಮ ನೆಟ್ಟು ತೊನೆಸಿದ ಬದನೆಯ ಬಳಿಯೇ ತಂದು ಸ್ಥಾಪಿಸಿದ್ದೇನೆ ಬಸಳೆ ಸಾಮ್ರಾಜ್ಯ ಚಪ್ಪರಿಸಿದ್ದೇನೆ ಬೇಗ ಬೇಗ ಊರು ಕೊಟ್ಟಿದ್ದೇ ತಡ ಹಬ್ಬಿದ್ದೇ ಹಬ್ಬಿದ್ದು ತಲೆ ತಗ್ಗಿಸಿ ಮನತುಂಬಿ ಚಪ್ಪರ ತಬ್ಬಿದೇ […]

ಅಭಾವ

ಅವಳಿಗೆ ಪ್ರಿಯವೆಂದು ನೆನಪಿರುವ ಮಿಡಿಮಾವಿನ ಮರದ ಬುಡದಲ್ಲಿತಾನೇ ಮುಂದಾಗಿ ಬಂದು ಅವಳಿಗೆ ಕಾಯಬೇಕೆಂದುಕೊಂಡಿದ್ದ ತನಗಿಂತಲುಅವಳೇ ಮುಂದಾಗಿ ಬಂದು ಹೀಗೆ ಅವಳು ಕಾದಿರುವುದುಅದೇ ಹಿಂದಿನ ಸಲಿಗೆಯಿಂದಲೋ? ಉತ್ತುವ ನೆನಪಿಗೆ ಫಲವತ್ತಾಗುತ್ತ ಗಮನಿಸಿದ:ಅಲ್ಲಲ್ಲಿ ಬೆಳ್ಳಿಗೂದಲು;ಕೋಮಲವಾದ, ಈಗ ಕೊಂಚ […]

ಬತ್ತಲಾರದ ಗಂಗೆ

ಬತ್ತಲಾರದ ಗಂಗೆಗೆಂಥ ಕುತ್ತಿದು, ನೋಡು; ಅದೇ ಪಾತ್ರ, ಧಾಟಿ, ವಸ್ತುಗಳ ಪಾಳಿ; ಹೊಸ ನೀರು ಬಂದರೂ ಅದೇ ಪುರಾತನದಮಲು, ರಂಗಮಂದಿರ ಅದೇ, ನಾಟಕವೂ ಅದೇ. ಹಿಮಾಲಯವೆ ಕರಗಿ ಕೆಳಗಿಳಿವ ವರ್ಷದ ತೊಡಕು, ಅಮೃತಜಲ ಮೃತ್ತಿಕೆಗಳಸಮ […]

ಆನಂದತೀರ್ಥರಿಗೆ

ಇಲ್ಲೆ ಎದ್ದವರು, ಉದ್ಬುದ್ಧವಾಗಿದ್ದವರು, ಶಖೆ ಮಳೆಗೆ ಬೆಂದು ಮಿಂದೀಸಿದವರು; ಆಸ್ಫೋಟಿಸಿತ್ತಿಲ್ಲೆ ಆಕಾಶ ಬಾಣ, ಆ ಕಾಶಗಂಗೆಯನಿಳಿಸಿ ಜಯಿಸಿದವರು. ಹೆಬ್ಬಂಡೆಗಳನೆತ್ತಿ ತಂದ ಮುಖ್ಯ ಪ್ರಾಣ, ಅಲ್ಲಿಗಿಲ್ಲಿಗು ಸೇತು ಕಟ್ಟಿದವರು; ಚಾಣಕ್ಕೆ ಪ್ರಾಣರಸ ಹರಿಸಿ ಕಲ್ಲುಗಳಲ್ಲಿ ವಾಸುದೇವನ […]

ಒಂದು ಕಥೆ

ಪುಟ್ಟ ಮಗ ಓಡಿ ಬಂದು ಕೊರಳ ಸುತ್ತ ಬಳಸಿ ಪೀಡಿಸುತ್ತಾನೆ; “ಅಮ್ಮ ನನಗೊಂದು ಕಥೆ ಹೇಳು – ನಿನ್ನೂರ ಕಥೆ; ಕಾಡು, ನದಿ, ಮಳೆಯ ಕಥೆ!” ‘ಅದು ಒಂದಾನೊಂದು ಕಾಲದ ಒಂದಾನೊಂದು ಊರು. ನನ್ನೂರು […]