ಹಿತ್ತಲಮನಿ ಕಾಶೀಂಸಾಬ

ರಂಗರಾಯರದು ನಾಕೆತ್ತಿನ ಕಮತದ ಮನಿ. ಮನೆಯಲ್ಲಿ ಸಾಕಷ್ಟು ಆಕಳೂ ಇದ್ದವು. ಕಾಶೀಂಸಾಬ ಚಿಕ್ಕಂದಿನಿಂದಲೂ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ. ನಂಬಿಗಸ್ತನಾಗಿದ್ದರಿಂದ ರಾಯರ ಮನೆಯಲ್ಲಿ ಅವನು ಕೆಲಸದ ಆಳು ಎಂದಾಗಿರಲೇ ಇಲ್ಲ. ಅವರ ಮನೆಯವರಲ್ಲೇ ಒಬ್ಬನಾಗಿದ್ದ. […]

ಬಿಟ್ಟ್ಯಾ

ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ. ಸುಸ್ತಾಗಿ ಊರ ಹೊರಗಿನ ಒಂದು ಗಿಡದ […]

ಅಂಚು

ಈ ವರ್ಷದ ಸ್ಕೂಲ್ ಗ್ಯಾದರಿಂಗ್ ದಿವಸದವರೆಗೂ ಸುಬ್ಬರಾಯಪ್ಪ ಅತ್ಮ ವಿಮರ್ಶೆಯ ಗೋಜಿಗೆ ಹೋದವರಲ್ಲ. ತನ್ನನ್ನು ಎದುರಿಸುವ ಎದೆ ಯಾರಿಗೂ ಇಲ್ಲ ಎಂಬ ಧಿಮಾಕಿನಿಂದ, ತನ್ನ ತಾರುಣ್ಯ ಮತ್ತು ಹುಮ್ಮಸ್ಸು ಸತತ ಎಂಬ ಹುಂಬತನದಲ್ಲೇ ಆವರೆಗೂ […]

ಯೋಗಣ್ಣ, ಕಾರ್ಡಿಯಾಲಜಿ, ವಿಷ್ಣುಸಹಸ್ರನಾಮ ಇತ್ಯಾದಿ

ಮೈ ಮೇಲೆ ಸಹಸ್ರ ಟನ್ನಿನ ಟ್ರಕ್ಕು ಹೋದರೂ ಅರಿಯದೆ ಸತ್ತ ಹಾವಿನಂತೆ ಬಿದ್ದಿರುವ ನುಣುಪಾದ ಕಪ್ಪು ರಸ್ತೆ, ಎಪ್ಪತ್ತು ಮೈಲಿ ವೇಗದಲ್ಲಿ ಹೋದರೂ ಮೈ ಅಲುಗದ ಮರ್ಸೀಡಿಸ್, ಅಕ್ಕಪಕ್ಕ ಒಣಗಿದ ಮರಗಿಡಗಳ ಮೇಲೆ ನಿಲ್ಲಲೂ […]

ಲಂಗರು

-೧- ಒಲ್ಲದ ಮನಸ್ಸಿನಿಂದ ಮನೆ ಬಿಟ್ಟು ಹೊರಟ ಮೇಲೆ ರಘುವೀರನಿಗೆ ರಾಮತೀರ್ಥಕ್ಕೆ ಹೋಗಿ ಧಾರೆಯಾಗಿ ಧುಮುಕುವ ನೀರಿನ ಕೆಳಗೆ ತಲೆಯೊಡ್ಡಿ ನಿಲ್ಲಬೇಕೆನಿಸಿತು. ಬಂದರಿಗೆ ಹೋಗಿ ದೋಣಿಗಳು ಹೊಯ್ದಾಡಿ ದಡ ಸೇರುವುದನ್ನು ನೋಡಬೇಕೆನಿಸಿತು. ಅಣ್ಣನ ಅಂಗಡಿಗೆ […]

ಅಮ್ಮಚ್ಚಿಯೆಂಬ ನೆನಪು

ಹೇಳಲು ಹೋದರೆ ಪುಟಪುಟವಾಗಿ ಎಷ್ಟೂ ಹೇಳಬಹುದು. ಆದರೆ ಅಮ್ಮಚ್ಚಿಯನ್ನು ಹಾಗೆ ವಿವರವಿವರವಾಗಿ ನೆನೆಯುತ್ತ ಹೋದಷ್ಟೂ ಆಯಾಸಗೊಳ್ಳುತ್ತೇನೆ. ಇಂತಹ ಆಯಾಸ ಏನೆಂದು ತಿಳಿದವರಿಗೆ ನಾನು ಹೆಚ್ಚು ವಿವರಿಸಬೇಕಾದ್ದೇ ಇಲ್ಲ ಅಲ್ಲವೆ? ಕೆಲವರನ್ನು ನೆನೆಯುವಾಗ ಮನಸ್ಸು ದಣಿಯುವ […]

ಸಶೇಷ

ಆರ್ಥಿಕ ಉದಾರೀಕರಣದ ಬಗ್ಗೆ ಮಾತು ಬಂದು, ಎಷ್ಟೊಂದು ವಿದೇಶಿ ಕಂಪನಿಗಳು ಇಲ್ಲಿ ವಹಿವಾಟು ಆರಂಭಿಸುತ್ತಿದೆಯೆಂದು ಎಣಿಸುತ್ತ, ಅವರು ಕೊಡುವ ಸಂಬಳ ಸವಲತ್ತುಗಳನ್ನು ಲೆಕ್ಕ ಹಾಕುತ್ತ, ಒಮ್ಮೆಲೆ ತೆರೆದುಕೊಂಡ ಈ ಹೊಸ ಜಗತ್ತಲ್ಲಿ ತಾವೆಲ್ಲಿ ಸಲ್ಲುತ್ತೇವೆ […]

ಮಳೆಯೇ ಬಾ

ಮಳೆ ಬರುತ್ತಿದೆ.ಮಳೆ ಮಳೆ ಮತ್ತು ಮಳೆ. ಪ್ರಾಸ ಬೆಳೆಯಲು ಬೇಕಷ್ಟು ಎಡೆ ಇದ್ದರೂ ಬೇಕೆಂದೇ ಬೆಳೆಯುವುದಿಲ್ಲ. ಕರಗುತ್ತದೆ. ಮಳೆ ಸುರಿಯುತ್ತಲೇ ಇದೆ. ನೀವೆಲ್ಲ ಹೇಳುವುದು ನಿಜ. ಮಳೆಗಿಂತ ಚಂದ ಇನ್ನೊಂದಿಲ್ಲ. ಆದರೆ ಇಂಥ ಮಳೆ […]

ಒಂದು ಹಳೇ ಚಡ್ಡಿ

“ಇಲ್ಲಾ ಅವನು ಚಡ್ಡಿ ಹಾಕಲೇ ಬೇಕು. ತಿಕಾ ಬಿಟ್ಕಂಡು ಮದುವೇ ಮನೇಲಿ ಓಡಾಡಿದರೆ ನೋಡಿದವರು ಏನೆಂದಾರು?” ಒಂದೇ ಸಮನೆ ನಾಗರಾಜ ಅವನ ಮಗನ ಹಠದ ಹಾಗೆಯೆ ಹಠ ಮಾಡ ತೊಡಗಿದ ಮಕ್ಕಳೆಲ್ಲ ಓಡಾಡಿಕೊಂಡು ಖಷಿಯಲ್ಲಿರುವಾಗ […]

ಬತ್ತ

ಮುತ್ತಣ್ಣನ ಪುಟ್ಟ ಕುಲುಮೆ ಮನೆ ರಗರಗ ಹೊಳೆವ ಬೆಂಕಿಯ ನಡುವೆ ಕಾರ್ಖಾನೆಯಂತೆ ಏರ್ಪಟ್ಟು ಅವನ ಸುತ್ತ ಕುಡಲುಗಳು ರಾಶಿಯಾಗಿ ಹಾಸಿಕೊಂಡಿದ್ದವು. ಢಣಾರ್ ಢಣಾರ್ ಎಂಬ ಸುತ್ತಿಗೆ ಲಯವೂ; ಕಾಯ್ದ ಅಲಗು ನೀರಲ್ಲಿಳಿಸಿದಂತೆ ಚೊರ್ರ್ ಎನ್ನುವ […]