ಉಷಾ

ಜಗದ ನಿದ್ರಾಲೋಲ ಮೊಗದ ಮೇಲುದವೆತ್ತಿ ಇರುಳ ಸವಿಗನಸಿನಾಮೋದದಲಿ ಮೈಮರೆದು ಮೆಲ್ಲಮೆಲ್ಲನೆ ಲಲ್ಲೆಗೈದು ಕಣ್ಣೆವೆದರೆದು ಹೂ ತುಟಿಗೆ ಮುತ್ತಿಟ್ಟು, ಹಕ್ಕಿಗಳನೆದೆಗೊತ್ತಿ ಮೈದಡವಿ, ಮಂಗಳದ ಗೀತಗಳನ್ನುಕ್ಕಿಸುತ ತಂಬೆಲರಿನುಸಿರ ನರುದಂಬುಲವ ಸ್ವೀಕರಿಸಿ ತುಂಬಿಗಳ ಜುಮ್ಮೆನಿಪ ಗುಂಗಿನಲಿ ಸಂಗಳಿಸಿ, ಚಿಗುರು […]

ಹಗಲುಗನಸು

ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ. ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು; ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು; ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ ಏಕಾಂಗಿ ಚಿಟ್ಟೆ; ಅಲುಗುತ್ತಿವ […]

ಬಿಡುಗಣ್ಣ ಬಾಲೆ

ಬಿಡುಗಣ್ಣ ಬಾಲೆ ನೀನಾವ ಬೆಳುದಿಂಗಳನು ಬಂಧಿಸಿಹೆ ಕಣ್ಣ ನುಣ್ಪೊಗರಿನಲ್ಲಿ? ಹೂಬಟ್ಟಲಿಂದ ಹಿಂದಿರುಗುತಿಹ, ಝೇಂಕಾರ ಗೈಯುತಿಹ ಭೃಂಗ ಕಣ್ಣಾಲಿಯಲ್ಲಿ. ಅಮಿತ ಸುಖ ಸೂಸುತಿದೆ ನವನವೋನ್ಮೇಷದಲಿ ನೋಟ ನಿಬ್ಬೆರಗಿನಲಿ, ನೀರವದಲಿ; ದಿವ್ಯ ಬಯಕೆಯ ಹಣ್ಣು ಹಾಲಾಗಿ ಜೇನಾಗಿ […]

ಎತ್ತು ಮೇಲಕೆನ್ನನು

೧ ಕಾಸಾರದ ಕೆಸರಿನಿಂದ ಪಾಚಿ ಜೊಂಡು ನೀರಿನಿಂದ ವಿಮಲ ಕಮಲ ಮೇಲಕ್ಕೆದ್ದು ಕೊಳದ ಎದೆಯನಮರಿ ಗೆದ್ದು ದಲ ದಲ ದಲವರಳುವಂತೆ ಥಳ ಥಳ ಥಳ ತೊಳಗುವಂತೆ ಎತ್ತು ಮೇಲಕನ್ನನು ಜೀವಪಥದಿ ಪತಿತನು. ೨ ಮುಳ್ಳು […]

ಈ ಘಟಪ್ರವಾಹ

ಬೆಟ್ಟದುದರದಿ ಹುಟ್ಟಿ ದರಿಕಂದರವ ಮೆಟ್ಟಿ ಮುಳ್ಳುಕೊಂಪೆಗಳಲ್ಲಿ ಬಂಡೆಗಲ್ಲುಗಳಲ್ಲಿ ಹರಿಹರಿದು ಸುರಿಸುರಿದು ಮೊರೆಮೊರೆದು ಕರೆಕರೆದು ಬಂದುದೀ ತೊರೆಗೆ ತ್ವರಿತದಿಂದೊಡ್ಡನೊಡ್ಡಿ ಜಲಸಂಗ್ರಹಿಪನೆಂಬಿಚ್ಛೆಯಿಂದದರ ಕೊರಲಿ- ಗುರುಲು ಬಿಗಿದಿದ್ದರಾ ಬಯಕೆ ಬರುದೊರೆಯಾಗಿ ಸ್ವಚ್ಛಂದವಹ ಸಲಿಲವಲ್ಲಿಯ ಕಲೆತು ಮಲೆತು ನಿಲುಗಡೆಯ ತಿರುಗಣಿಯಲುರುಳಿ […]

ಬಾಳಿನ ಬೀಳಿದು….

ಬಾಳಿನ ಬೀಳಿದು, ಕೂಳಿನ ಗೋಳಿದು ಸಾವಿನ ಸಂತೆಯು ನೆರೆಯುತಿದೆ; ವೇದ ಪುರಾಣದ ವಾದಕೆ ಸಿಲುಕದ ವೇದನೆಯೊಂದಿದು ಕೊರೆಯುತಿದೆ. ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ ಕಣ್ಣಿಗೆ ಕತ್ತಲೆಗಟ್ಟುತಿದೆ; ಬಡತನ ಶಾಪಕೆ, ಒಡಲುರಿ ತಾಪಕೆ ಮಸ್ತಕ ಚಿಣ್ […]

ನನಸಿನ ಕನಸು

ಹೋದೆ ಹೋದೆನು ದೂರ ನಡೆದೆನು ಕನಸು ಕೈಹಿಡಿದಾಚೆಗೆ, ಊರಿನಾಚೆಗೆ ಗಿರಿಯ ಶೃಂಗಕೆ ಚೆಲುವು ಚಿಮ್ಮುವ ಕಾಡಿಗೆ; ಕಾಡಗಿಡಗಳು ಮುಗಿಲ ಮುತ್ತಿಡೆ ಈರ್ಷೆ ತೋರಿಸುವಲ್ಲಿಗೆ, ಹಚ್ಚ ಹಸುರಿನ ಪಚ್ಚ ಪಯಿರಿನ ನಿಚ್ಚಸುಂದರ ಬೀಡಿಗೆ ಏರಿ ಗಿರಿಯನು, […]

ಚಂದ್ರೋದಯ

ಪೂರ್ವ ದಿಙ್ಮಂಡಲದಿ ಪುಣ್ಯವವತರಿಸುತಿದೆ- ಪೂರ್ಣ ಚಂದ್ರೋದಯದ ರೂಪದಲ್ಲಿ; ಪೂರ್ಣತೆಯು ಸಂಪೂರ್ಣ ಸಾಕಾರಗೊಳ್ಳುತಿದೆ- ಪೌರ್ಣಿಮೆಯ ಪೂರ್ಣೇಂದು ವೇಷದಲ್ಲಿ. ಬೈಗುಗೆಂಪಿನ ಬಣ್ಣ ಕಡಲಾಳ ತಳದಿಂದ ಬುರುಬುರನೆ ಮೇಲೆದ್ದ ಗುಳ್ಳೆಯಂತೆ, ತಂಗದಿರನುದಯಿಸಿದ, ಶಾಂತಿಮತಿ ಬಿಂಬಿಸಿದ ತಪಗೊಂಡ ಮೌನವ್ರತಧಾರಿಯಂತೆ. ಹೊನ್ನ […]

ಕಾಡ ಮಲ್ಲಿಗೆ

ಮಾಮರದ ಆಸರದಿ ಮೇಲೇರಿ ಕುಡಿಚಾಚಿ ಬೆಳ್ಳಿ ಹೂಗಳ ಹರವಿ ಅತ್ತಿತ್ತಲಿಣಿಕಿ, ಮಾಂದಳಿರ ಮುದ್ದಾಡಿ ರಂಬೆಯಲಿ ನೇತಾಡಿ ಸುಳಿಗಾಳಿ ಸುಳುವಿನಲಿ ಜೀಕಿ ಜೀಕಿ- ನೀಲಗಗನದ ಆಚೆ ನೀಲಿಮೆಯ ಬಳಿ ಸಾರಿ ಬೆಣ್ಣೆ-ಬೆಟ್ಟದ ಮೋಡಗರ್ಭಗುಡಿ ಸೀಳಿ, ಗರಿಗೆದರಿ […]

ಬಿನ್ನಹ

ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ; ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ. ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ ಕರ್ತವ್ಯಪಾಲನೆಯ ಬುದ್ಧಿ ಬರಲಿ; ಕಾರ್ಮೋಡ ಬಾನನಂಡಲೆವಂತೆ […]