ರಸ‌ಋಷಿ

೧ ಆಹ! ಮಧುಮಾಸವೈತಂದಿಹುದು. ಬನಕೆಲ್ಲ ಚಿಗುರು ಹೂಗಳ ಹುಚ್ಚು ಹಿಡಿದಿಹುದು. ಜೀವನದ ರಸಿಕತೆಯ ಮೂರ್‍ತಿಮತ್ತಾಯಿತೆನೆ ಆ ಮರದ ತಳಿರ ತಣ್ಣೆಳಲಲ್ಲಿ ಮುಪ್ಪಾದ- ಅಲ್ಲಲ್ಲ- ಹರೆಯ ಒಪ್ಪಂಬೂಸಿ ಕಪ್ಪು ಕಾಣಿಕೆಯಿತ್ತ ಉಮರ ಖಯ್ಯಾಮನದೊ ನಲ್ಗಬ್ಬಮಂ ಪಿಡಿದು […]

ಸ್ವರ್‍ಣಪಕ್ಷಿ

ಬ್ರಹ್ಮಾಂಡದ ಬಿರುಮೊಟ್ಟೆಯನೊಡೆದು ಪಿಂಡಾಂಡದ ತನಿಗೆಂಡವ ಪಡೆದು ಇರುಳಿನ ಕಬ್ಬಿಣ ಪಂಜರ ಮುರಿದು ಹಾರಿತು ಸ್ವರ್‍ಣಾರುಣ ಪಕ್ಷಿ! ಮೂಡಣ ಬಾನಿನ ಉಷೆ ಸಾಕ್ಷಿ! ಮೇಘಮಂಡಲದ ಬಾಗಿಲ ತೆರೆದು ಜಗದಗಲವ ಮುಗಿಲಗಲವನಳೆದು ತಾರಾಲೋಕದ ಕಣ್ಣನು ಸೆಳೆದು ಸಾರಿತು […]

ಮತ್ತೊಂದು ಪುಟ್ಟ ಹಕ್ಕಿಗೆ

ಎಲ್ಲಿಂದ ಬಂದೆ ನೀ ನನ್ನ ಮುದ್ದಿನ ಹಕ್ಕಿ? ಹದುಳವೆನ್ನುವ ಮೊದಲೆ ಹಾರಬೇಡ; ಒಂದು ಚಣವಾದರೂ ನನ್ನ ಬಳಿಯಲಿ ಕುಳಿತು ಕುಶಲ ವಾರ್‍ತೆಯ ನಾಲ್ಕು ಮಾತನಾಡ. ಎಂದಾದರೊಂದು ದಿನ ಅಂದಚೆಂದಕ್ಕೆ ಬರುವೆ ನೋಡನೋಡುತ ಪಕ್ಕ ಬೀಸಿ […]

ಒಂದು ಪುಟ್ಟ ಹಕ್ಕಿಗೆ

೧ ಚಿಟ್ಟ, ಗುಬ್ಬಿ ಪುಟ್ಟಗುಬ್ಬಿ ಮುಳ್ಳು ಬೇಲಿಯನ್ನು ತಬ್ಬಿ ಚೀರಿ ಚೀರಿ ಗಂಟಲುಬ್ಬಿ – ಒಡೆಯುವಂತೆ ಹಾಡಿತು; ಕೇಳಲಿಲ್ಲ ಜಗದ ಕಿವಿ ನೋಡಲಿಲ್ಲ ಬಾನ ರವಿ ನೀನಾದರು ಬಾರೊ ಕವಿ ಎಂದು ಅಂಗಲಾಚಿತು; ಹಗಲು […]

ನವೋದಯ

ಮೂಡಣದ ಕೋಡಿಯೊಡೆಯಿತು, ಬೆಳಕು ಹರಿಯಿತಿಗೊ ದೈವ ತೆರೆಯಿತು ಜಗದ ಜನದ ಮನದ! ಉಷೆಯು ತಲೆಬಾಚಿ ನಸುನಾಚಿ ಕಂಪೇರಿಹಳು ಬಣ್ಣನೆಗೆ ಬಾರದಿದೆ ಮೊಗದ ಬಿನದ ವಿಶ್ವವೀಣಾವಾಣಿ ಹಕ್ಕಿ ನಿನದ! ಅದುದಾಯಿತು ಹಿಂದು, ಶುಭ ನವೋದಯವಿಂದು ಕಾರಿರುಳ […]

ನಲ್ಮೆ

“ನಿನ್ನೆದೆಯೆ ಜೇನ ನೀಡುವ ನಲ್ಮೆಯಿಂದೆನ್ನ ಒಲಿಸಿ ಮೀಸಲು ನಗೆಯ ಸೂಸಿ ಕರೆದೆ. ಇಂದೇಕೆ ಮೊಗಬಾಡಿ ವಿಹ್ವಲ ವಿಕಾರದಲಿ ನಿಂದಿರುವೆ ಚಂದುಳ್ಳ ಮಧುರ ಹೂವೆ?” “ಬೇರೊಂದು ದುರುದುಂಬಿ ಕೆಟ್ಟಗಾಳಿಯ ಸುಳಿಗೆ ಬಂದೆನ್ನ ಬಲುಮೆಯಲಿ ಬಲಿಗೊಂಡಿತು; ಅಯ್ಯೊ […]

ಮಿಲನ

ಎರಡೆದೆಗಳು ತುಡಿಯುತ್ತಿವೆ ಪ್ರೇಮಾಂಬುಧಿಗೆಳಸಿ ಆ ಗಂಗಾ ಯಮುನೆಯರೂಲು ಚಿರ ಸಂಗಮ ಬಯಸಿ. ನಡುದಾರಿಗೆ ಅಡ್ಡೈಸಿವೆ ಗುಡುಗಾಡಿವೆ ಮುಗಿಲು ಹೆಡೆಯೆತ್ತುತ ಪೂತ್ಕರಿಸಿದ ಬಿರುಗಾಳಿಯ ಹುಯಿಲು. ನಿಡು ಬಯಕೆಯ ಹಿಂದೂಡಿರೆ ಹರಿಗಡಿಸಿರೆ ಸೋಲು ಗಿರಿದರಿಗಳು ಅವ್ವಳಿಸಿರೆ ತಿರುಗಣಿಯೊಲು […]

ನೆನಹು-ನಲ್ಗನಸು

ಏಕೊ ಏಕಾಂತದಲಿ ಏಕಾಕಿಯಾಗಿರಲು ಮೂಕ ಶೋಕದ ಚಿತ್ರ ಕಣ್ಣ ತಾಗಿ, ಮನದ ನೀರವ ಬಾನ ನಡುವೆ ಬಣ್ಣದ ಮೋಡ ಸುಳಿದು ನುಸುಳುವದಯ್ಯ ದೀನವಾಗಿ. ನೆಲದ ಸುಂಟರಗಾಳಿ ತುಂಟತನದಲಿ ದಾಳಿ- ಯಿಡಲು ಚದುರಿದ ಮೋಡ ದಿಕ್ಕುಪಾಲು! […]

ಅಶ್ರುತಗಾನ

ಎಂದೊ ಗುಡುಗಿದ ಧ್ವನಿಯನಿಂದಿಗೂ ಹಿಡಿದಿಟ್ಟು ಅಂಬರ ಮೃದಂಗವನು ನುಡಿಸಲೊಡರಿಸಿದಂತೆ ಧಿಮಿಧಿಮಿಕು ಧುಮುಕು ತತ್ಹೊಂಗ ದುಂಧುಮ್ಮೆಂದು ಬಾನತುಂಬೆಲ್ಲ ನಿಶ್ಯಬ್ದ ಶಬ್ದಾಂಬೋಧಿ; ಥಳಥಳಿಪ ಸೂರ್‍ಯಚಂದ್ರರು ತಾಳದೋಪಾದಿ! ಗೆಜ್ಜೆಗೊಂಚಲು ಜಲಕ್ಕನೆ ಜಗುಳಿ ಸೂರೆಯಾ- ದೊಲು ಪಳಚ್ಚನೆ ಮಿಂಚಿ ಚಿಕ್ಕ […]

ಗಿರಿಗಿರಿ ಗಿಂಡಿ

೧ ಗಿರಿಗಿರಿ ಗಿಂಡಿ ಇಬತ್ತಿ ಉಂಡಿ ಸಂಜೆಯ ಗಾಳಿ ತಂಪೊಳು ತೇಲಿ ಗರಿಗರಿ ಮೋಡ ಬಾನಿನ ಕೂಡ ಮೈಮರೆತೋಟ ಚಕ್ಕಂದಾಟ; ಬಣ್ಣದ ಹಕ್ಕಿ ಕೊರಳಲ್ಲು ಕ್ಕಿ ಸುವ್ವೀ ಚವ್ವಿ, ಹಾಡಿದೆ ‘ಟುವ್ವಿ’, ಬನ ಬನದಲ್ಲಿ […]