………. – ೧೦

ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ ನವಗ್ರಹಗಳು ನೀರು, ಗಾಳಿ, ಅಗ್ನಿ, ಭೂಮಿ, ಆಕಾಶ, ಮಾರುಕಟ್ಟೆಯ ತುಂಬ ಪಂಚಭೂತಗಳ ಸಂಕ್ಷೇಪ ರೂಪ. *****

………. – ೯

ಸೂರ್‍ಯ ಬಲ್ಬಿನ ಯುಗದಲ್ಲೂ ದೀಪಾವಳಿಗೊಮ್ಮೆ ಮಣ್ಣಿನ ಹಣತೆ ಮನೆಸುತ್ತ; ಬಣ್ಣ ಬಣ್ಣದ ಮೋಂಬತ್ತಿ ಸಾಲು ಹಬ್ಬ ಹಳೆಯದಾದರೂ ಬೆಳಕು ಮಾತ್ರ ವಸಾಹತುಶಾಹಿಗೆ ಬದ್ಧ. *****

………. – ೮

ಹನ್ನೆರಡು ಅಂಕಿಗಳ ಮಂಡಲದಲ್ಲಿ ಹಿಡಿದಿಟ್ಟ ಹಗಲು ರಾತ್ರಿಗಳು ಕತ್ತಲೆ ಬೆಳಕು ನೆನ್ನೆ ನಾಳೆಗಳಿಗೆ ಅವಕಾಶ ಗೋಲಾಕಾರ ಸಮಯ ಕಾಲಾತೀತ. ಡಿಜಿಟಲ್ ಗಡಿಯಾರದಲ್ಲಿ ಕಾಲಕ್ಕೆ ರೂಪವೇ ಬೇರೆ. *****

ಬೋರು ಕಣೆ ಲೀನ

ಲೀನಾ- ಯುಗಾದಿ ಬಂತು ಗೊತ್ತ ಬೋರು ಕಣೆ ಮಾಮೂಲು ಬದಲಾವಣೆ ನಿನ್ನ ಕರಿ ತುರುಬು ಬಿಚ್ಚಿ ಹರಡಿದಂತೆ ಒದ್ದೆಯಾಯಿತು ಸಂಜೆ. ಹೌದೆ ಕತ್ತಲಿಗು ಬತ್ತಲಿಗು ನಂಟೆ ? ಓಹೋ ನಮಗಾಗೂ ಉಂಟಲ್ಲ ಬಯಲು ತಂಟೆ […]