ಅರ್ಥ

ನಿನ್ನ ಮೈ ತುಂಬ ಶಬ್ದಾಕ್ಷರ ಚಿನ್ಹ ಪ್ರಶ್ನಾರ್ಥಕ ಗಳ ಮುಳ್ಳು ಚುಚ್ಚಿ ಅರ್ಥಕ್ಕಾಗಿ ಕಾದು ಕೂತೆ ಏನೂ ಹೊರಡಲಿಲ್ಲ ತಾಳ್ಮೆಗೆಟ್ಟು ಎಲ್ಲ ಕಿತ್ತೊಗೆದು ನಿನ್ನ ಬೋಳು ಮೈ ತೊಳೆದು ಚೊಕ್ಕ ಒರೆಸಿ ಹಗುರಾಗಿ ಮೀಟಿದೆ […]

ಕನಸಿನಲ್ಲಿ

ಕರ ಕರ ಕರ ಕೊರೆವ ಚಳಿ ಕೋಳೀಮರಿ ಕುಯ್ದ ಹಾಗೆ; ಮರ ಮರ ಮರ ಮರವಟ್ಟಿತು ಥರ ಥರ ಥರ ಧರೆ ನಡುಗಿತು ಇರುಳು ಕೆರಳಿ ಹೊಡಮರಳಿತು! ತಾರೆಯೊಂದು ತಿರೆಗುರುಳಿತು. ಏನಾಯಿತು! ಏಕಾಯಿತು? ಎನುತಿರ […]

………. – ೧೩

ಹೀಗೆ, ಹಾಳೆಯ ಮೇಲೆ ‘ಹಾಡು’ ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ….. ಹಾಡು! ಈಗ ಹಾಳೆಯ ಮೇಲೆ ಹಾಡು […]

ಕ್ಷಣಬಂಧುರ

‘ಸೋ’ ಎಂದು ಸುರಿವ ಮಳೆ ಉನ್ಮಾದಗೊಂಡ ಇಳೆ! ಸೀಯೆನೆ ಸೊದೆಯನೀಂಟಿ ಓಲಾಡುತಿರುವ ಬೆಳೆ ತೋರ ಮುತ್ತಿನ ಹನಿಯ ಝಲ್ಲರಿಯ ಮಾಲೆ. ತರುಮರಾದಿಗಳಲ್ಲಿ ಗಾಳಿ ನಿಶ್ಯಬ್ದ, ಮನೆಮಾರು ಗಿರಿದರಿಗಳಲ್ಲಲ್ಲೆ ಸ್ತಬ್ಧ, ಎಲ್ಲವೂ ಬಿರುಮಳೆಯ ಮಂತ್ರದಲ್ಲಿ ಮುಗ್ಧ. […]

………. – ೧೨

ಖಾಲಿ ಹಾಳೆಯ ಮೇಲೆ ಹರಿದಿತ್ತು ನದಿ ‘ತಿಳಿ’ ನೀರು ತಳ ಕಾಣುವ ಹಾಗೆ ‘ಝುಳು-ಝುಳು’ ಅದರ ಸದ್ದು, ‘ಚಿಮ್ಮುವ’ ಅಲೆ, ‘ತಣ್ಣಗೆ’ ಗಾಳಿ. ನದಿಗೆ ನೆರಳು ದಡದ ಮರ, ನೀರ ಜೊತೆ ನಿಂತಲ್ಲೇ ಹರಿವ […]

ಪ್ರಜಾಪ್ರಭುತ್ವ

ಮುಳುಗುತಿಹ ನೇಸರನು ಮುದಿಸಿಂಹನಂತಾಗಿ ಪಶ್ಚಿಮಾದ್ರಿಯ ಗವಿಯ ಸೇರುತಿಹನು; ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ ಲೋಗರೆಡೆ ಕೆಕ್ಕರಿಸಿ ನೋಡುತಿಹನು! ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ ಕಪ್ಪು ಬಾವುಟವತ್ತಿ ತೋರಿಸಿಹುದು- ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ ಹಾಡಿ ಜಯಜಯಕಾರ […]

ಹೊಳೆ ಬಾಗಿಲಲ್ಲಿ ಒಂದು ಹುಣ್ಣಿಮೆಯ ರಾತ್ರಿ

ಕಣ್ಣಂತೆ, ಅಲ್ಲೊಂದು ಹರಿಯೊ ನದಿಯಂತೆ ಬಣ್ಣ ಬಣ್ಣದ ಕನಸು ಮೀನಂತೆ ಕಪ್ಪು ನದಿಯ ಎದೆಯಲ್ಲಿ ಫಳ ಫಳ ನಕ್ಷತ್ರ ಜಾತ್ರೆ ತಾರೆ ಸಹಿತ ಧುಮುಕಿ ನದಿ ಸೇರಿದ್ದಾನೆ ಚಂದ್ರ ಆಕಾಶಕ್ಕೇ ಹುಟ್ಟು ಕೊಟ್ಟು ಚಂದ್ರನ […]

ಕ್ರಾಂತಿಕಲಿ

ಮುಗಿಲ ಮರೆಗಿರುವ ಮಿಂಚಿನಬಳ್ಳಿ, ಗಗನದಂ- ಚಿಗೆ ತನ್ನ ಕುಡಿನಾಲಗೆಯ ಚಾಚಿ ಕತ್ತಲೆಯ ತುತ್ತುವೊಲು, ಸಾಮಾನ್ಯದಲ್ಲು ಅಸಮಾನತೆಯ ಕಿಡಿಯೊಂದು ಅರಿಯದೊಲು ಅಡಗಿಹುದು ಕೃತುಬಲಂ! ಜನಜೀವನದ ಉಗ್ರ ಜಾಗ್ರತಿಯ ಬಿರುಗಾಳಿ ಬೀಸಲದೆ ಪ್ರಜ್ವಲಿಸಿ, ಕ್ರಾಂತಿಕಲಿಗಳ ಕೈಯ ಪಂಜಿನೊಲು […]

ಅಪಮೌಲ್ಯೀಕರಣ

ಜಗಜ್ಯೋತಿ ಎನ್ನಿಸಿದ ಮಹಾ ಜಾತ್ಯತೀತ ಚೇತನವನ್ನು ಅನುಯಾಯಿಗಳು ‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು ಬಸವ ಳಿದುಹೋದ; ತನ್ನ ದಿವ್ಯ ಸಂದೇಶಗಳ ಪಾಲಿಗೆ ಬಸವ ಅಳಿದು ಹೋದ. *****

ನೀನಾಗಲು

ಕವಿತೆ ಬರೆಯುತ್ತೇನೆಯೆ ನಾನು? ಇಲ್ಲ ಬಿಡು ನಿನಗಾಗಿ ನಾನು ಸತ್ತುಕೊಳ್ಳುವದಿಲ್ಲ ಇಲ್ಲದವುಗಳ ಬಿಚ್ಚಿ ತೆತ್ತುಕೊಳ್ಳುವದಿಲ್ಲ ಮೊಲೆಯಿರದ ಮೊಳಕೆಗಳ ಬಿತ್ತುಕೊಳ್ಳುವುದಿಲ್ಲ ನೀನೇನೋ ಅಂದುಕೊಂಡಿದ್ದೀಯ ಎಂದು ಅವರಂತಾಗಲು ವ್ಯಕ್ತಿತ್ವ ಸ್ಖಲಿಸಿಕೊಂಡು ಆಕಾಶದಲ್ಲಿಯೇ ಮನೆ ಕಟ್ಟಿಕೊಳ್ಳುವುದಿಲ್ಲ. ತಪ್ಪಿಸಿಕೊಳ್ಳುತ್ತ ಹಗುರು […]