ನೂರಾರು ವರುಷಗಳ ಭೀರುನೊಗವನ್ನಿಳುಹಿ, ‘ಬಿಳಿಯರಾಳಿಕೆಗಿಂದು ಕೊನೆಗಾಲ ತಂದಪೆವು ಸಾಕು ಸಾಕೀಗೋಳು ದಾಸ್ಯ ಹಾಸ್ಯದ ಬಾಳು’- ಎಂಬ ನುಡಿ ಕಿಡಿಗೊಂಡು ಬತ್ತಿದೆದೆಯಲಿ ಹೊತ್ತಿ ಹಳ್ಳಿದಿಳ್ಳಿಗು ಮುತ್ತಿ ನಾಡ ಗಡಿಯಂ ಸುತ್ತಿ ಪಂಜಾಯ್ತು! ಪರರಡಿಯಲುರುಳುತಿಹ ನರಳುತಿಹ ಭಾರತದ […]
ವರ್ಗ: ಕವನ
ಸಿಂಬಲಿಸ್ಟ್ ಕಾವ್ಯ
-ವೆರ್ಲೆನ್ ಮುಖ್ಯವಾದ್ದು ನಾದ ನಯವಾಗದಂತೆ ವಕ್ರ ಬಳಕುವ ಲಯ ಗಾಳಿಯಂತೆ ನಿರಾಧಾರ, ದ್ರವ್ಯವಲ್ಲ ದ್ರಾವಣ ಘನವಾಗದ ಚಂಚಲ ಬಣ್ಣ ಖಂಡಿತ ಅಲ್ಲ, ಅದರ ನೆರಳು ಮಾತ್ರ ಇಂಗಿತದ ಸೂಕ್ಷ್ಮ, ಮಾತಿಗೆ ದಕ್ಕದಂತೆ ಮಿಗುವ ಮೌನ […]
ಚುಕ್ಕಿ ಎಂಬ ಚಂದ್ರನಿಗೊಂದು ಕಿವಿಮಾತು
ನನ್ನ ಚಂದ್ರನ ಕಣ್ಣಲ್ಲಿ ಹೊಳೆವ ನಕ್ಷತ್ರಗಳು ತುಟಿಯ ತುಂಬಾ ತೊದಲು, ಆಳಬೇಡ ಕಂದ, ಅತ್ತರೆ ಸುರಿವ ಮುತ್ತಿನ ಜೊತೆ ಜಾರೀತು ತಾರೆಗಳು ಕೇಳು ರಾಜಕುಮಾರ, ಏಳು ಸಮುದ್ರಗಳನೀಸಿ ಏಳು ಪರ್ವತಗಳ ದಾಟಿ ತಂದುಕೊಡಲಾರೆ ಮಲ್ಲಿಗೆ […]
ಬಿಡುಗಣ್ಣ ಬಾಲೆ
ಬಿಡುಗಣ್ಣ ಬಾಲೆ ನೀನಾವ ಬೆಳುದಿಂಗಳನು ಬಂಧಿಸಿಹೆ ಕಣ್ಣ ನುಣ್ಪೊಗರಿನಲ್ಲಿ? ಹೂಬಟ್ಟಲಿಂದ ಹಿಂದಿರುಗುತಿಹ, ಝೇಂಕಾರ ಗೈಯುತಿಹ ಭೃಂಗ ಕಣ್ಣಾಲಿಯಲ್ಲಿ. ಅಮಿತ ಸುಖ ಸೂಸುತಿದೆ ನವನವೋನ್ಮೇಷದಲಿ ನೋಟ ನಿಬ್ಬೆರಗಿನಲಿ, ನೀರವದಲಿ; ದಿವ್ಯ ಬಯಕೆಯ ಹಣ್ಣು ಹಾಲಾಗಿ ಜೇನಾಗಿ […]
ಬಗಾರ ಬೈಂಗನ್ ಮತ್ತು ಬೆಳದಿಂಗಳೂಟ
ಒಂದು ಕೆಜಿ ಹೊಳೆವ ಗುಂಡು ಬದನೇಕಾಯಿ ತೊಳೆದು ಅಂದವಾಗಿ ಕತ್ತರಿಸಬೇಕು, ತಲೆಕೆಳಗು ತೊಟ್ಟು ಹಿಡಿದರೆ ಕಮಲದ ಹೂ ಅರಳಿದಂತಿರಬೇಕು ಉಪ್ಪು + ಹುಳಿ+ ಖಾರ….. ನಾಲಿಗೆ ರುಚಿಗೆ ತಕ್ಕಂತೆ. ಹುರಿದು ಕಡಲೇಕಾಯಿ, ಮೇಲೊಂದಷ್ಟು ಎಳ್ಳಿನ […]
