ಅಶ್ವತ್ಥಾಮ

ರಾತ್ರಿ ತಾನು ಎಷ್ಟು ಗಂಟೆಯವರೆಗೆ ಬರೆದೆನೆನ್ನುವುದು ರಾಮಚಂದ್ರನಿಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದದ್ದು ಅಡಿಗೆಯ ಹುಡುಗ ದಿನದ ಪದ್ದತಿಯಂತೆ ಚಹದ ಕಪ್ಪನ್ನು ಹಿಡಿದು ಕೋಣೆಯ ಕದ ತಟ್ಟಿದಾಗ. ಕನ್ಣು ತೆರೆದರೆ ಫಕ್ಕನೆ ಎಲ್ಲಿದ್ದೇನೆ ಎನ್ನುವುದೇ ಕೆಲಹೊತ್ತು […]

ಆಟ

ಎಂದಿನಂತೆಯೇ, ದೀಪ ಹಚ್ಚುವ ಹೊತ್ತಿಗೇ ಊಟವನ್ನು ಮುಗಿಸಿ, ಊರ ಇನ್ನೊಂದು ಕೊನೆಯಲ್ಲಿದ್ದ ಮೊಮ್ಮಗಳ ಮನೆಗೆ ಹೊರಟುನಿಂತ ಬುಡಣಸಾಬರು ಒಳಗೆ ಅಡಿಗೆಮನೆಯಲ್ಲೆಲ್ಲೋ ಕೆಲಸದಲ್ಲಿ ತೊಡಗಿದ ಮೊಮ್ಮಗನ ಹೆಂಡತಿಯನ್ನು ಕರೆದು, “ಚಾಂದಬೀಬೀ, ಕದ ಅಡ್ಡ ಮಾಡಿಕೋ, ಫಾತಿಮಾಳ […]

ಅಪರಿಚಿತರು

ಬೆಳಗಿನ ಚಹದ ಆಡಂಬರ ಮುಗಿದು ರಾಮಕೃಷ್ಣ ಹಾಗು ಜಾನಕಿಯರು ತಮ್ಮ ಕೋಣೆಯ ಹೊರಗಿನ ಬಾಲ್ಕನಿಗೆ ಬರುವಾಗ ಅತ್ಯಂತ ಉಲ್ಲಸಿತ ಮನಃಸ್ಥಿತಿಯಲ್ಲಿದ್ದರು. ಇಂದು, ನಾಳೆ ಹಾಗೂ ನಾಡದು ಮೂರು ದಿನ ಒಂದರ ಹಿಂದೊಂದು ರಜೆಗಳು. ಕಳೆದ […]

ಆಬೋಲೀನ

ದಿನವೂ ನಮ್ಮ ಮನೆಗೆ ಹೂವು ತರುವ ಹುಡುಗಿ ಅಂದು ಅಬ್ಬಲಿಗೆ ಹೂವು ತಂದಾಗ ನನಗೇಕೋ ಒಮ್ಮೆಲೇ ಆಬೋಲೀನಳ ನೆನಪು ಬಂತು. ಅಬ್ಬಲಿಗೆ ತನ್ನ ಮೆಚ್ಚುಗೆಯ ಹೂವು: ಕೊಳ್ಳಬೇಕು ಅನ್ನಿಸಿತು. ಆದರೆ ಮರುಗಳಿಗೆ, ಈ ಹೂವು […]

ಹಾವು

ಆಗ ಸಂಜೆ, ತಾನು ಜಗಲಿಯ ಮೇಲೆ ವಿರಾಮ ಕುರ್ಚಿಯಲ್ಲಿ ಒರಗಿದಾಗ, ಅಂಗಳದಲ್ಲಿ ಅಕ್ಕಿ ಆರಿಸುತ್ತಿದ್ದ ದೇವಿ ಚದುರಿ ಬಿದ್ದ ಅಕ್ಕಿಯ ಕಾಳುಗಳನ್ನು ಒಂದುಗೂಡಿಸುವ ನೆವದಲ್ಲಿ ಮೈಯನ್ನು ಬಗ್ಗಿಸಿ ಕೈಗಳನ್ನು ಮುಂದೆ ಚಾಚಿದಾಗ, ಬದಿಗೆ ಸರಿದ […]

ಗುಂಡಾಭಟ್ಟರ ಮಡಿ

ಗುಂಡಾಭಟ್ಟರ ಮಡಿಯೆಂದರೆ ನಮ್ಮ ಹಳ್ಳಿಯಲ್ಲೆಲ್ಲ ಒಂದು ಗಾದೆಯ ಮಾತಾಗಿದೆ. ಅದು ಅವರು ಮಾತ್ರಾರ್ಜಿತವಾಗಿ ಪಡೆದುಕೊಂಡದ್ದು. ಮಡಿ-ಮೈಲಿಗೆಗಳಲ್ಲಿದ್ದ ಅವರ ಶ್ರದ್ಧೆ ಅವರ ತಾಯಿಯವರ ಶ್ರದ್ಧೆಯಷ್ಟು ಉಜ್ವಲವಾಗಿರದಿದ್ದರೂ ಸಾಕಷ್ಟು ಪ್ರಖರವಾಗಿತ್ತು. ಮೈಲಿಗೆ ನಿವಾರಣೆಯ ಮೊದಲನೇ ಹೆಜ್ಜೆಯೆಂದರೆ ಸ್ನಾನ. […]

ಗಾನಪ್ರಿಯ ಶಂಭುಶಾಸ್ತ್ರಿ

ಆ ವರುಷ ಆ ಹಳ್ಳಿಯಲ್ಲಿ-ದಯಮಾಡಿ ಯಾವ ವರುಷ? ಯಾವ ಹಳ್ಳಿ? ಎಂದು ಮಾತ್ರ ಕೇಳಬೇಡಿ. ಇಷ್ಟಕ್ಕೂ ನೀವು ಅದನ್ನೆಲ್ಲ ಊಹಿಸಿಕೊಂಡರೆ ಆ ಊಹೆಗೆ ನಾನು ಹೊಣೆಗಾರನಲ್ಲ. ಜೋಕೆ!-ಅಂತೂ ಅಂದು ಅಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. […]

ಬೊಮ್ಮಿಯ ಹುಲ್ಲು ಹೊರೆ

“ಓ ಹುಲ್ಲು ಚೋಳಿ…ಹುಲ್ಲು ಚೂಳೀ ಕೊಡೋದೇ?”“ಐದಾಣೆಗೆ ಆಗೋದಾದರೆ ತರ್ತೆನೋಡೀ.”“……”“ಓ ನೀನು~ ಸಣ್ತಂಗಿ ಮಗು ಅಲ್ಲವೇನೆ? ಗುರುತೇ ಇಲ್ಲದ ಹಾಗೆ ಹೋಗ್ತೀಯಲ್ಲವೆ…ಯಪ್ಪಾ ಯಪ್ಪಾ ಯಪ್ಪಾ! ಹುಲ್ಲು ಹ್ಯಾಗೆ ತುಂಬೀಯೇ!! ನಿಮಗೆ ದೇವರು ಗನಾಕೆ ಮಾಡೋನಲ್ಲವೆ..? ಅರ್ಧಾ […]

ಕಳ್ಳ ಗಿರಿಯಣ್ಣ

ಐದಾರು ದಿನಗಳ ಹಿಂದಿನ ಮಾತು. ನಮ್ಮ ಊರಿಗೆ ಹೋಗಿದ್ದೆ. ಅನೇಕ ವರುಷಗಳ ನಂತರ. ಆ ಈ ಮಾತುಗಳ ನಂತರ ಹರಟೆ ಗಿರಿಯಣ್ಣನತ್ತ ಹೊರಳಿತು. ‘ಕಳ್ಳ ಗಿರಿಯಣ್ಣ ಸತ್ತ’ ಎಂಬ ಮಾತು ಏಕೋ ನನ್ನನ್ನು ಇಡೀ […]