ಈ ದಿನ ಭಾನುವಾರ- ಹರಿವ ಹೊಳೆ ತಟ್ಟನೆ ನಿಂತು ಮಡುವಾಗಿ ನನ್ನ ದಡದಲ್ಲಿರುವ ಗಿಡಮರ ಬಳ್ಳಿ ಪ್ರತಿಫಲಿಸಿ, ಏನೋ ಸಮಾಧಾನ. ಅಂಥ ಅವಸರವಿಲ್ಲ, ಬೆಳಗಿನ ನಿದ್ದೆಗಿನ್ನೊಂದಿಷ್ಟು ವಿಸ್ತರಣೆ ಕೊಡಬಹುದು. ಬೆಳೆದಿರುವ ಗಡ್ಡ ಇನ್ನೂ ಒಂದೆರಡು […]
ವರ್ಗ: ಪದ್ಯ
ಕಾಡಿನ ಕತ್ತಲಲ್ಲಿ
ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ ಸಂಜೆಯ ಕೆಂಪು ಕರಗುವ ಹೊತ್ತು, ಮರದ ಬೊಡ್ಡೆಗೆ ಆತು ಕೂತಿದ್ದ ಪುಟ್ಟ ಹುಡುಗ. ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ ಸಂಜೆಯಾಕಾಶಕ್ಕೆ […]
ನೆರಳಿನ ಜೋಡಿ
ಅವ ಸತ್ತ ಬಗೆ ಪೋಲೀಸರಿಗೆ, ಅವರ ನಾಯಿಗೆ ಪತ್ರಿಕೆಗೂ ಬಗೆ ಹರಿಯದೆ ಹಾಗೇ ಇದೆ. ಫೈಲುಗಳಲ್ಲಿ ಸಿಳ್ಳು ಹಾಕುವ ಮಾಮೂಲಿಕೇಸು ಬಲ್ಲವರಿಗೆ ಈ ದಿಗಿಲು ದಕ್ಕುವುದು ಸುಲಭವಲ್ಲ. ಹೇಳಬಾರದ್ದೇನಲ್ಲ- ಈತ ತನ್ನ ನೆರಳಿನ ಜೋಡಿ […]
ಕೆ ವಿ ಸುಬ್ಬಣ್ಣನವರು
ಸುಬ್ಬಣ್ಣ ಎಂಬವರು ಸುಮ್ಮನೇ ಆದವರೇ? ಜನ ಬದುಕಲೆಂದು ತಪ ತಪಿಸಿದವರು. ಭೂಮಿ ಬರಿ ಮಣ್ಣಾಗಿ ನಮಗೆ ತೋರಿದ್ದಾಗ ಹಸಿರಿನ ಪವಾಡಗಳ ತೋರಿದವರು. ಮಣ್ಣಿನಿಂಗಿತ ಅದರ ಎಲೆ ಅಡಿಕೆ ಜೀವರಸ ಮುಕ್ಕುಳಿಸಿ ಅರಳಿದವರು. ಮಲೆನಾಡ ಮರವಾಗಿ […]
ಕಾಡು ಕುದುರೆ
ಕಾಡು ಕುದುರಿ ಓಡಿ ಬಂದಿತ್ತ || ಊರಿನಾಚೆ ದೂರ ದಾರಿ ಸುರುವಾಗೊ ಜಾಗದಲ್ಲಿ | ಮೂಡ ಬೆಟ್ಟ ಸೂರ್ಯ ಹುಟ್ಟಿ ಹಸಿರಿನ ಗುಟ್ಟ ಒಡೆವಲ್ಲಿ ಮುಗಿವೇ ಇಲ್ಲದ | ಮುಗಿಲಿನಿಂದ | ಜಾರಿ ಬಿದ್ದ […]
ಅಶ್ವಿನಿ ತನ್ನ ಕತೆ ಬರೆದರೆ…
(ನಾನೊಂದು), ಅದ್ವೈತದ ಪರಮಾವಸ್ಥೆಯ ಬಿಂದೊಂದರ ಮಹಾಸ್ಫೋಟನೆಯೊಂದು ಬ್ರಹ್ಮಾಂಡವಾಗರಳಿದ ಈ ಮೊದಲಚ್ಚರಿಯ ಯಾವುದೊಂದೋ ಬೆಚ್ಚನೆಯ ಮೂಲೆಯಲಿ ಮುದುಡಿ ಕುಳಿತು ಒಳಗೊಳಗೆ ಕುಸಿವ ಅಪಾರ ಜಲಜನಕಾವೃತ ತಿರುಗುಣಿ. (ನಾ), ಕುಗ್ಗಿದಂತೆಲ್ಲ ಮಿಕ್ಕುವುದು ಒಳಗಿನಣುಗಳ ಹಿಗ್ಗು, ಮಿಲನ, ಕಾಯಕ್ಕೆ […]
ಕಾಡು ಕಾಡೆಂದರೆ
ಕಾಡು ಕಾಡೆಂದರೆ ಕಾಡಿನ ಮರವಲ್ಲ ಕಾಡಿನ ಒಳಗೆರೆ ತಿಳಿಲಾರೆ || ಶಿವನೆ || ಹೊರಗಿನ ಪರಿ ನಂಬಲಾರೆ || ನೋಡೋ ಕಂಗಳ ಸೀಳೊ ಏಳು ಬಣ್ಣಗಳುಂಟು ಹರಿಯೂವ ಹಾವನ್ನ ಕೊರೆಯೂವ ಹಸಿರುಂಟು ಹೂವುಂಟು ಮುಳ್ಳಿನ […]
ನಿತ್ಯೋಲ್ಲಂಘನ
ಇವ ಹುಟ್ಟು ಹಾರಾಟಗಾರ; ಇವನಮ್ಮ, ಇವನಜ್ಜಿ ಅಕ್ಕ-ತಂಗಿಯರ, ಅತ್ತೆಯಂದಿರ ಮುದ್ದು ಹನುಮ. ಚಿಕ್ಕಂದಿನಿಂದ ಹಾರುತ್ತಲೇ ಇದ್ದಾನೆ; ಮನೆಬಾಗಿಲು, ಗೋಡೆ, ಮಹಡಿ ಮೆಟ್ಟಿಲು, ಬಚ್ಚಲು, ತಿಕ್ಕಲು ಹರಿವ ಕೊಚ್ಚೆಯನೆಲ್ಲ ಒಂದೇ ಏಟಿಗೆ ಧಡಂ ಎಂದು ಹಾರುತ್ತಾ […]
