ಕೊನೆಯ ಬಯಕೆ

“ಏ! ಮುದಿ ಮುಲ್ಲಾ,
ಕೇಳಿಕೋ ಏನುಬೇಕೋ ಎಲ್ಲ,
ಸಂಜೆಗೆ ಏರಬೇಕಿದೆ ಗಲ್ಲು!”
“ಪೀಪಾಯಿಯಷ್ಟು ಕಳ್ಳು
ಒಬ್ಬ ಹೆಣ್ಣು : ನೋಡೋಕೆ ಬ್ಯೂಟಿಫುಲ್ಲು,
ಹಾಗೇ ಕಡಿಯೋಕೆ ಕೊನೇ ಸಲ ಮೂಳೆ
ಕಟ್ಟಿಸಿಕೊಡು ಮುವತ್ತೆರಡು ಹಲ್ಲು!”
*****