ಡಿಸೆಂಬರ್ ತಿಂಗಳು ಕಳೆಯಿತು
ಜನವರಿಯೂ ಸರಿದಾಯಿತು
ಇಗೋ ಫೆಬ್ರವರಿಯಲ್ಲಿ ವಸಂತದ ಹುಟ್ಟು
ಎಲ್ಲೆಡೆ ಹಸಿರಿನಗಾನ, ಫಲವತ್ತಾದ ಧರಿತ್ರಿ
ತೂರಾಡಿದ ಗಿಡಮರದ ಸುರಾಪಾನದ ದೃಶ್ಯ
ನಂದಿಬಟ್ಟಲ ಹೂಗಳ ನರ್ತನದ ಲಾಸ್ಯ
ಆತ್ಮದ ಹಕ್ಕಿಯ ‘ಯಾಹೂ’ ಎಂಬ ಸಂಭ್ರಮದ ಕೂಗು
‘ಎಲ್ಲಿ ಎಲ್ಲಿ’ ಎಂಬ ಪಾರಿವಾಳದ ದನಿಬೇಟ
ಪ್ರೀತಿಯಲ್ಲಿ ಕಲ್ಲ ಸುರಿಮಳೆಯೂ ಬೇಟಕ್ಕೆ ಕರೆ
ಪ್ರೀತಿಯಲ್ಲಿ ಪರಸ್ಪರ ಹಿಂಸೆಯೂ ಸಂಗಮದ ಮೊರೆ
ಜುಲೇಖಾ ಜೋಸೆಫ್‌ನ ಕೊರಳ ಪಟ್ಟಿ ಹಿಡಿದಳು, ಬಟ್ಟೆ ಹರಿದಳು
ಆಕೆಗೆ ಅದು ಪ್ರೇಮದಾಟ, ಅವನ ಗುಟ್ಟು ಬಿಚ್ಚುವ ನೋಟ
ಹೋ ಮುತ್ತು ಕೊಟ್ಟಾಯ್ತು, ಆಗಿ ಹೋಯ್ತು ಮಿಲನ
ನಿನ್ನ ಹೃದಯ ಬಚ್ಚಿಡು, ಮೊಲೆಯೊಳಗೆ ಸದಾ ಅದೇ ಧ್ಯಾನ
*****
