ಕಾಜಿನ್‌ನ ಜನಕ್ಕೆ ಹಚ್ಚೆ ಹಾಕಿಸಿಕೊಳ್ಳುವ ಹುಚ್ಚು
ಅದಕ್ಕಾಗಿ ಅನೇಕ ಹತ್ಯಾರಗಳು
ಒಬ್ಬ ಹೇಡಿ ಹಚ್ಚೆ ಹಾಕಿಸಿಕೊಳ್ಳಲು ಕಲಾವಿದನ ಬಳಿ ಹೋದ
ತನ್ನ ಬೆನ್ನ ಮೇಲೆ ಸಿಂಹದ ಚಿತ್ರ ಬಿಡಿಸು ಎಂದ
ಬೆನ್ನ ಮೇಲೆ ಹಚ್ಚೆ ಸೂಜಿ ಬಿದ್ದಾಗ ಹೋ ಎಂದು ಬೊಬ್ಬೆ ಹೊಡೆದ
ನೋವಿನಿಂದ ಒದ್ದಾಡಿ ಕಲಾವಿದನಿಗೆ ಮೊರೆಯಿಟ್ಟ
ಕಲಾವಿದನಿಗೆ ಕೇಳಿದ
“ಸಿಂಹದ ಯಾವ ಭಾಗ ನೀನು ಬಿಡಿಸುತ್ತಿದ್ದಿ?”
ಕಲಾವಿದ ಹೇಳಿದ- “ಸಿಂಹದ ಬಾಲ”
ಇವನು ಮತ್ತೆ ಕಿರುಚಿ ಮೊರೆಯಿಟ್ಟ
“ಬಾಲ ಬೇಡ ಬಿಡು, ಬೇರೆ ಭಾಗ ಚಿತ್ರಿಸು”
ಹಚ್ಚೆಗಾರ ಇನ್ನೊಂದು ಭಾಗ ಚಿತ್ರಿಸಲು ಸೂಜಿ ಚುಚ್ಚಿದ
ಈತ ಮತ್ತೆ ಕಿರುಚಿ, ಈ ಭಾಗ ಬೇಡ, ಬೇರೆ ಭಾಗ ಎಂದ
ಕಲಾವಿದ ಸೂಜಿ ಹಾಕುತ್ತಲೇ ಹೋದ
ಈತ ಬೊಬ್ಬೆ ಹೊಡೆಯುತ್ತಲೇ ಹೋದ
ಕಡೆಗೆ ಕಲಾವಿದ ಸೂಜಿ, ಬಣ್ಣ ಎಲ್ಲ
ಬಿಸಾಡಿ
ಹೊರಟೇ ಹೋದ
*****
