ನೆರಳು-ಬೆಳಕು

ನಿನ್ನ ದೀಪವ ಬಾನಿನಲ್ಲಿ ನೀ ಹಿಡಿದಾಗ
ಬೆಳಕು ಬೀಳುವುದೆನ್ನ ಮೊಗದ ಮೇಲೆ
ಅದರ ನೆರಳಾಡುವದು ನಿನ್ನ ಮೇಲೆ.

ನಿನ್ನ ಹೃದಯದಿ ನಾನು ಪ್ರೇಮ ದೀಪವ ಹಿಡಿಯೆ
ಅದರ ಬೆಳಕಾಗುವದು ನಿನ್ನ ಮೇಲೆ
ನಾನು ನಿಂತೆನು ಹಿಂದೆ ನೆರಳಿನಲ್ಲಿ.
*****
ರವೀಂದ್ರರ ‘Fruit-Gathering’: LXX