ನನ್ನ ಜೀವನದಿಂದ…..

ಜನಕೆ ಪೂಜಿಸಲೆಂದು ನಿನ್ನ ಪ್ರತಿಮೆಯನೊಂದು
ನನ್ನ ಜೀವನದಿಂದ ರೂಪುಗೊಳಿಸೆ,
ನನ್ನ ಮಣ್ಣನು, ಮನೋರಥಗಳನ್ನು ಮತ್ತೆಲ್ಲ
ಬಣ್ಣಗನಸನು ಭ್ರಾಂತಿಗಳನು ತಂದೆ.

ನನ್ನ ಜೀವನದಿಂದ ನಿನ್ನೆದೆಯ ಮೂರ್‍ತಿಯನು
ನಿನ್ನ ಪ್ರೀತಿಗೆ ರೂಪುಗೊಳಿಸೆನ್ನಲು,
ಸಿದ್ಧಗೊಳಿಸಿದೆ ನಿನ್ನ ಅಗ್ನಿ, ಸತ್ಯತೆ, ಶಕ್ತಿ
ಸೌಂದರ್‍ಯ, ಶಾಂತಿಗಳ ಪರಿಕರವನು.
*****
ರವೀಂದ್ರರ ‘Fruit-Gathering’: XXXIII