ಸಂಧ್ಯಾ ರಾಗ – ೨೫

ತಂಜಾವೂರು ಕೃಷ್ಣಯ್ಯರು ದಕ್ಷಿಣಾದಿ ಸಂಗೀತದಲ್ಲಿ ಪ್ರಸಿದ್ಧ ವಿದ್ವಾಂಸರಾಗಿದ್ದರು. ಶಾಸ್ತ ಮತ್ತು ಕಲೆ ಎರಡರಲ್ಲಿಯೂ ಅಯ್ಯgರವರದು ನುರಿತ, ಅರಿತ ವಿದ್ಯೆಯಾಗಿತ್ತು. ಅವರ ಗುರು ಪರಂಪರೆಯೂ ಇದಕ್ಕೆ ತುಂಬ ಸಹಾಯ ಮಾಡಿತ್ತು. ಎಟ್ಯಾಪುರಂ ರಾಮಚಂದ್ರ ಭಾಗವತರಲ್ಲಿ ಸಂಗೀತ ವಿದ್ಯೆಯನ್ನು ನಾಯನಾಪಿಳ್ಳೆ, ಪುಷ್ಪವನಂ ಅವರೊಂದಿಗೆ ಅಭ್ಯಾಸಿಸುವ ಸೌಭಾಗ್ಯ ಅಯ್ಯgರವರದಾಗಿತ್ತು. ಪುಷ್ಪವನಂ ಮತ್ತು ನಾಯನಾಪಿಳ್ಳೆಯವರಂತೆ ಅಪೂರ್ವ ರಾಗಗಳ ಹಾಡಿಕೆಯಲ್ಲಿಯೂ, ಲಯಕಾಲ ವಿನ್ಯಾಸದಲ್ಲಿಯೂ ಕೃಷ್ಣಯ್ಯgರವರ ಹಾಡಿಕೆ ಹೆಸರಾಗಿತ್ತು ಅಯ್ಯgರವರ ಗುರುಗಳು ತ್ಯಾಗರಾಜ ಸಮಕಾಲೀನರೂ, ಮಿತ್ರರೂ ಆಗಿದ್ದುದರಿಂದ ಅವರ ಶಿಷ್ಯರಿಗೂ ಸಂಗೀತ ಪ್ರಪಂಚದಲ್ಲಿ ವಿಶೇಷ ಮರ್ಯಾದೆ ಸಲ್ಲುತ್ತಿತ್ತು. ಅವರ ಸಂಗೀತ ಪಂಡಿತರಿಗೂ ಪ್ರಿಯವಾಗಿದ್ದುದರಿಂದ ವಿದ್ವನ್ಮಂಡಳಿಯವರು ಅಯ್ಯgರವರನ್ನು ‘ಮಹಾಭಾಗವತರು’ ಎಂದು ಸಂಭೋಧಿಸುತ್ತಿದ್ದರು.
ಲಕ್ಷ್ಮಣ ಮಹಾಭಾಗವತರ ಮನೆ ತಲುಪಿದಾಗ ಅವರು ಆಗ ತಾನೆ ಊಟ ಮುಗಿಸಿ ತಾಂಬೂಲ ಚರ್ವಣಕ್ಕೆ ಕುಳಿತಿದ್ದರು. ಲಕ್ಷ್ಮಣ ಹೊರಬಾಗಿಲಿನಲ್ಲಿ ನಿಂತು ಕೂಗಿದ
“ಸ್ವಾಮೀ!”
“ಯಾರಪ್ಪಾ ಅದು?”
ಒಳಬಾಗಿಲಿಗೆ ಬಂದು
“ಮಹಾಭಾಗವತರ ಮನೆ ಇದೇನೇ ಸ್ವಾಮಿ?”
“ಹೌದು, ಏನಾಗಬೇಕಿತ್ತು ಅವರಿಂದ?”
“ಸ್ವಲ್ಪ ನೋಡಬೇಕಾಗಿತ್ತು ಅವರಿಗೆ ಮದರಾಸಿನ ಅರುಣಾಚಲ ಮೊದಲಿಯಾರರು ಒಂದು ಕಾಗದ ಕೊಟ್ಟಿದ್ದಾರೆ”
“ನಾನೇ ಭಾಗವತ. ಎಲ್ಲಿ ಕಾಗದ ಕೊಡು.”
“ಒಂದು ಗಳಿಗೆ ಭಾಗವತರನ್ನು ದಿಟ್ಟಿಸಿ ನೋಡಿದ. ಮೊದಲು ದೀರ್ಘದಂಡ ನಮಸ್ಕಾರವನ್ನು ಹಾಕಿ ಕಾಗದವನ್ನು ಕೆಗೆ ಕೊಟ್ಟನು. ಭಾಗವತರು ಕಾಗದವನ್ನೊಮ್ಮೆ ಓದಿಕೊಂಡು ಹೆಂಡತಿಯನ್ನು ಕರೆದು ಅವರೆದುರಿಗೊಮ್ಮೆ ಓದಿದರು. ಗುರುಗಳನ್ನು ಕಣ್ತುಂಬ ನೋಡಿದ ಕುಳ್ಳನೆಯ ಎತ್ತರ. ಸ್ವಲ್ಪ ತುಂಬಿದ ಮೆಕಟ್ಟು. ಪ್ರಧಾನವಾಗಿ ಕಾಣುತ್ತಿದ್ದ ಹೊಟ್ಟೆ. ಕುಂಕುಮ ಗಂಧಗಳಿಂದಲಂಕೃತವಾದ ಬಟ್ಟಮುಖ ಭಾಗವತರ ಕಿವಿಯಲ್ಲಿ ವಜ್ರದ ಹತ್ತಕಡಕೂ, ಕೊರಳಲ್ಲಿ ಚಿನ್ನದ ಕಟ್ಟು ಹಾಕಿದ್ದ ಒಂದು ರುದ್ರಾಕ್ಷಿ ಸರವೂ, ಕೆಯಲ್ಲಿ ಎರಡು ವಜ್ರದುಂಗುರಗಳೂ ಇದ್ದವು.
ಭಾಗವತರು ಲಕ್ಷ್ಮಣನನ್ನು ಒಳಕ್ಕೆ ಕರೆದು
“ಬಟ್ಟೆ ತೆಗೆದು ಸ್ನಾನ ಮಾಡಪ್ಪಾ. ಈಕೆ ನನ್ನ ಹೆಂಡತಿ. ಈ ಹುಡುಗ ನನ್ನ ಮಗ ಸುಬ್ರಹ್ಮಣ್ಯ”
ಎಂದು, ಹೆಂಡತಿ ಮಗನ ಪರಿಚಯ ಮಾಡಿಕೊಟ್ಟರು. ಲಕ್ಷ್ಮಣ ಗುರುಪತ್ನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ
“ಅಮ್ಮ, ನಿಮ್ಮ ಮಗನೆಂದು ಭಾವಿಸಿ ಕಾಪಾಡಬೇಕು. ಗುರುಗಳಿಂದ ವಿದ್ಯಾದಾನ ಮಾಡಿಸಬೇಕು ತಾಯೀ”
ಎಂದು ಹೇಳಿದನು. ಭಾಗವತರ ಹೆಂಡತಿಯವರ ಕಣ್ಣಲ್ಲಿ ನೀರೂರಿತು. ಅದನ್ನು ಭಾಗವತರು ಕಂಡುಕೊಂಡು
“ಊಟವಾಗಲಪ್ಪಾ. ಮಾತಾಡೋಣ, ಮೊದಲು ಸ್ನಾನ ಮಾಡು”
ಎಂದು ಸುಬ್ರಹ್ಮಣ್ಯನ ಜತೆ ಮಾಡಿ ಕಳುಹಿಸಿಕೊಟ್ಟರು. ಲಕ್ಷ್ಮಣ ಊಟ ಮುಗಿಸಿ ಬಂದು ಭಾಗವತರ ಮುಂದೆ ಕುಳಿತ.
“ಹಿಂದೆ ಪಾಠವಾಗಿತ್ತೇನಪ್ಪಾ?”
“ಆಗಿತ್ತು.”
“ಯಾರಲ್ಲಿ?”
“ಅನಂತಾಚಾರ್ಯರಲ್ಲಿ.”
“ಓ! ಅವರಲ್ಲೇ. ಅವರು ನಮಗೆ ಗೊತ್ತು. ನೀನು ಬಹಳ ಚೆನ್ನಾಗಿ ಹಾಡುತ್ತೀ ಎಂದು ನಮ್ಮ ಮೊದಲಿಯಾರರು ಬರೆದಿದ್ದಾರೆ.”
“ಅವರ ವಿಶ್ವಾಸ ಗುರುಗಳೇ, ನಿಜವಾಗಿಯೂ ನಾನು ಪಾಮರ. ತಮ್ಮ ದಯೆಯಿಂದ ನಾನೂ ಒಬ್ಬ ಮನುಷ್ಯನಾಗಬೇಕು.”
“ನೀನು ರಾತ್ರೀಗೆ ಹಾಡುವೆಯಂತೆ. ನಾವು ಕೇಳಿ ಮುಂದೆ ಪಾಠ ಆರಂಭಿಸುತ್ತೇವೆ. ಸ್ವಲ್ಪ ವಿಶ್ರಾಂತಿ ತೆಗೆದುಕೋ. ಸಂಜೆ ಸುಬ್ರಹ್ಮಣ್ಯನ ಜತೆ ಹೋಗಿ ಊರು, ದೇವಸ್ಥಾನ ಎಲ್ಲಾ ನೋಡಿ ಬಾ.”
“ಅಪ್ಪಣೆ.”
ಊರು, ದೇವಸ್ಥಾನ ನೋಡುವುದನ್ನು ಮುಗಿಸಿಕೊಂಡು ಬರುವಷ್ಟರಲ್ಲಿ ಲಕ್ಷ್ಮಣ, ಸುಬ್ರಹ್ಮಣ್ಯರಲ್ಲಿ ಗಾಢ ಸ್ನೇಹವು ಬೆಳೆದುಬಿಟ್ಟಿತು. ಸುಬ್ರಹ್ಮಣ್ಯ ಸರಳ ಜೀವಿ, ಲಕ್ಷ್ಮಣನ ವೃತ್ತಾಂತ ಅವನ ಕರುಳನ್ನು ಕರಗಿಸಿಬಿಟ್ಟಿತ್ತು. ಮಾತಿನ ಭರದಲ್ಲಿ ಒಮ್ಮೊಮ್ಮೆ ಲಕ್ಷ್ಮಣ ಸ್ವಲ್ಪ ಹಾಡಿದ್ದ. ಅದನ್ನು ಕೇಳಿ ಇವನ ಭಾಸಖ್ಯವಾದದ್ದು ತನ್ನ ಬಾಗ್ಯ ಎಂದು ಭಾವಿಸಿದನು.
ಅಂದು ರಾತ್ರಿ ಗುರುಗಳಿಗೆ ತಾನು ಕಲಿತಿದ್ದ ವಿದ್ಯೆಯನ್ನು ನಿವೇದಿಸಿದ. ಮೊದಮೊದಲು ಲಕ್ಷ್ಮಣನ ಹಾಡಿಕೆಗೆ ತಾಳ ಹಾಕುತ್ತಿದ್ದವರು ಕೇಳುತ್ತ ಸುಮ್ಮನೆ ಕುಳಿತುಬಿಟ್ಟರು. ಗಂಟೆ ಹನ್ನೊಂದಾಯಿತು. ಗುರುಗಳ ಹೆಂಡತಿ ಹೊತ್ತಾಯಿತೆಂದು ಸೂಚಿಸಿದರು. ಗುರುಗಳು
“ಮಂಗಳ ಹಾಡಪ್ಪಾ”
ಎಂದರು. ಮುಗಿಯಿತು. ಸ್ವಲ್ಪಕಾಲ ಗುರುಗಳು ಮಾತನಾಡದೆ ಗಂಭೀರವಾಗಿ ಕುಳಿತರು. ಅವರು ಏನು ಹೇಳುವರೋ ಎಂದು ಲಕ್ಷ್ಮಣನ ಹೃದಯ ತವಕ ಪಡುತ್ತಿತ್ತು.
“ಲಕ್ಷ್ಮಣಾ ನೀನು ನನ್ನ ಶಿಷ್ಯನಾಗಿ ಬಂದದ್ದು ನನ್ನ ಭಾಗ್ಯಾಪ್ಪಾ. ನಿನ್ನ ವಿದ್ಯೆ ದೆವಿಕವಾದದ್ದು ಸಂಗೀತಶಾಸ್ತ ವಿದ್ಯೆಯನ್ನು ಹೇಳಿಕೊಡುತ್ತೆ. ಅದು ನಿಜವಾದ ವಿದ್ಯೆಯಲ್ಲ. ವಿದ್ಯೆ ಹೃದಯದಿಂದ ಬರಬೇಕು – ಹೃದಯಕ್ಕೆ ಸೇರಬೇಕು. ನಿನ್ನಲ್ಲಿದೆ ಅದು. ನಿನ್ನಂತಹವನಿಗೆ ವಿದ್ಯಾದಾನ ಮಾಡಿದರೆ ನನ್ನ ಜನ್ಮ ಸಾರ್ಥಕವಾಗುತ್ತದೆ” ಎಂದು ಹೇಳಿದರು. ಲಕ್ಷ್ಮಣನ ಬಾಯಲ್ಲಿ ಮಾತು ಹೊರಡದಾಯಿತು. ಕೃತಜ್ಞತೆಯಿಂದ ಗುರುಗಳನ್ನೂ ಗುರುಪತ್ನಿಯನ್ನೂ ವಂದಿಸಿದನು.
ಅಂದಿನಿಂದ ಲಕ್ಷ್ಮಣ ಭಾಗವತರ ಸಂಸಾರಕ್ಕೆ ಸೇರಿದವನಾಗಿ ಬಿಟ್ಟ. ಮನೆಯ ಕಷ್ಟ ಸುಖದಲ್ಲಿಯೆಲ್ಲಾ ಅವನಿಗೆ ಪಾಲು ಸಿಕ್ಕುತ್ತಿತ್ತು. ನಿರ್ವಂಚನೆಯಿಂದ ಗುರುಗಳ ಮತ್ತು ಗುರುಪತ್ನಿಯ ಸೇವೆಯನ್ನು ಮಾಡತೊಡಗಿದನು. ಮನೆಯ ಕೆಲಸವನ್ನು ಕಲಿಯತೊಡಗಿದನು. ಅಲಮೇಲಮ್ಮನವರ ಕೆಲಸದ ಹೊರೆಯನ್ನು ಆದಷ್ಟು ಕಡಿಮೆ ಮಾಡತೊಡಗಿದನು. ಅಡಿಗೆಯ ಮೇಲುಕೆಲಸಗಳನ್ನೆಲ್ಲಾ ದಿನವೂ ಮಾಡಿಕೊಡುತ್ತಿದ್ದನು. ಗುರುಗಳ ಬಟ್ಟೆಯೊಗೆಯುವ ಕೆಲಸವನ್ನೂ ತಾನೇ ವಹಿಸಿಕೊಂಡನು. ತಿಂಗಳಿಗೆ ಮೂರು ದಿವಸದ ಅಡಿಗೆಯ ಸರದಿಯನ್ನೂ ತಾನೇ ಸಂತೋಷದಿಂದ ನಿರ್ವಹಿಸುತ್ತಿದ್ದನು. ಅಲಮೇಲಮ್ಮನವರು ಲಕ್ಷ್ಮಣನನ್ನು ತಮ್ಮ ಮಗನಂತೆ ಕಾಣುತ್ತಿದ್ದರು. ಅವನ ಮನಸ್ಸು ಸ್ವಲ್ಪ ಖಿನ್ನವಾದರೆ ಸಾಕು ಮಾಡುತ್ತಿದ್ದ ಕೆಲಸವನ್ನೂ ಬಿಟ್ಟು ಬಂದು ಅವನನ್ನು ಸಂತೆಸುತ್ತಿದ್ದರು. ಗುರುಗಳನ್ನೂ ಗುರುಪತ್ನಿಯನ್ನೂ ಕಂಡರೆ ಸ್ವಂತ ತಾಯಿತಂದೆಗಳನ್ನು ಕಂಡಂತೆ ಆಗುತ್ತಿತ್ತು.
ಮಹಾಭಾಗವತರು ನಿತ್ಯವೂ ಶಿಷ್ಯನಿಗೋಸ್ಕರ ಹಾಡುತ್ತಿದ್ದರು. ಜತೆಗೂ ಲಕ್ಷ್ಮಣನನ್ನೂ ಹಾಡಿಸುತ್ತಿದ್ದರು. ತಾವು ಬಿಟ್ಟಲ್ಲಿ ಅವನು ಸ್ವರ ಹಾಕಬೇಕು, ಅವನು ಬಿಟ್ಟಲ್ಲಿ ತಾವು ಮುಂದಕ್ಕೊಯ್ಯಬೇಕು. ಇಡೀ ರಾತ್ರಿಯನ್ನೆಲ್ಲ ಗುರುಶಿಷ್ಯರು ರಾಗಾಲಾಪನೆಯಲ್ಲಿಯೋ ಸ್ವರ ಪ್ರಸ್ತಾರದಲ್ಲಿಯೋ ಕಳೆಯುತ್ತಿದ್ದರು.
ತಮ್ಮ ಕಲೆಯ ಸಾರ ಸರ್ವಸ್ವದಂತಿದ್ದ ಅಪರೂಪ ಪಲ್ಲವಿಗಳನ್ನು ಶಿಷ್ಯನಿಗೆ ಅರೆದು ಕುಡಿಸಿಬಿಟ್ಟರು. ಅವುಗಳನ್ನು ಶಿಷ್ಯ ಹಾಡುತ್ತಿದ್ದರೆ ತಾವೇ ಕೇಳುತ್ತ ‘ಭಲೆ ಭಲೆ’ ಎನ್ನುವರು. ತಾವು ಮೆಮರೆತು ಹಾಡಿದ ವೇಳೆಗಳಲ್ಲೆಲ್ಲಾ ಅನುಸರಿಸಿದ ಗತಿಗಳನ್ನು ಶಿಷ್ಯ ಸಂಗ್ರಹಿಸುತ್ತಿದ್ದುದನ್ನು ನೋಡಿ ಬೆರಗಾಗುತ್ತಿದ್ದರು.

ತಾವು ಕಛೇರಿಗೆ ಎಲ್ಲಿ ಹೋಗಲಿ ಜತೆಯಲ್ಲಿ ಲಕ್ಷ್ಮಣ, ಸುಬ್ರಹ್ಮಣ್ಯ ಇಬ್ಬರನ್ನೂ ಕರೆದುಕೊಂಡು ಹೋಗುತ್ತಿದ್ದರು. ಭಾಗವತರು ಹಾಡುತ್ತ ಮುಂದೆ ಕುಳಿತುಕೊಂಡರೆ ಅವರೇ ಇಬ್ಬರು ಹಿಂದೆ ತಂಬೂರಿ ಹಿಡಿಯಬೇಕು. ಒಂದೊಂದು ಆವರ್ತವನ್ನು ಶಿಷ್ಯನಿಗೂ ಬಿಟ್ಟು ‘ಭಲೆ ಭಲೆ’ ಅನ್ನುತ್ತಿದ್ದರು. ಭಾಗವತರ ಜತೆಯಲ್ಲಿಯೇ ಲಕ್ಷ್ಮಣನ ಕೀರ್ತಿಯೂ ಹಬ್ಬತೊಡಗಿತು. ಒಂದೊಂದು ಸಲ ತಮಗೆ ಆಹ್ವಾನ ಬಂದರೆ
“ನೀನು ಹೋಗಿಬಂದುಬಿಡು ಲಕ್ಷ್ಮಣ”
ಎಂದು ಅವನನ್ನೇ ಕಳುಹಿಸಿಬಿಡುತ್ತಿದ್ದರು. ದಕ್ಷಿಣ ದೇಶದಲ್ಲೆಲ್ಲಾ ಲಕ್ಷ್ಮಣನ ಹೆಸರು ಮನೆಯ ಮಾತಾಗಿಬಿಟ್ಟಿತು. ತಾನು ಎಲ್ಲಿ ಹೋಗಿ ಏನು ಸಂಪಾದಿಸಿ ತಂದರೂ ಗುರುಗಳ ಪಾದತಲದಲ್ಲಿಟ್ಟು ನಮಸ್ಕರಿಸುತ್ತಿದ್ದನು.
“ಇದು ನಿನ್ನದಪ್ಪಾ – ತೆಗೆದುಕೋ”
ಎಂದು ಭಾಗವತರು ಹೇಳಿದರೆ
“ತಮ್ಮ ಅನುಗ್ರಹವೊಂದೇ ನನ್ನದು. ಬೇರೆ ಯಾವದೂ ಅಲ್ಲ ಗುರುಗಳೇ” ಎಂದು ಸಮಾಧಾನ ಹೇಳುತ್ತಿದ್ದನು.
ಮಹಾಭಾಗವತರನ್ನು ‘ಪೂರ್ವಿಕೃಷ್ಣ‌ಅಯ್ಯg’ ಎಂದು ಕರೆಯುವ ವಾಡಿಕೆಯೂ ಇತ್ತು. ಪೂರ್ವಿ ರಾಗವನ್ನು ಅವರ ಹಾಗೆ ಯಾರೂ ಹಾಡುತ್ತಿರಲಿಲ್ಲ. ರಾಗಾಭಿಮಾನಿದೇವತೆಯು ಅಯ್ಯರವರಿಗೆ ಒಲಿದಿದ್ದಳು ಎಂದು ಜನರು ಆಡಿಕೊಳ್ಳುತ್ತಿದ್ದರು. ಪೂರ್ವಿಯು ಭಾಗವತರ ಬಹಳ ಪ್ರಿಯವಾದ ರಾಗವಾಗಿದ್ದರೂ ಅದನ್ನು ಅವರು ಅಪರೂಪವಾಗಿ ಹಾಡುತ್ತಿದ್ದರು. ಭಾಗವತರ ಮನೆಗೆ ಬಂದು ವರ್ಷಗಳಾಗಿದ್ದರೂ ಪೂರ್ವಿಯನ್ನು ಲಕ್ಷ್ಮಣ ಅವರ ಬಾಯಲ್ಲಿ ಕೇಳಿರಲಿಲ್ಲ ಒಂದು ದಿನ ಸೂಕ್ಷ್ಮವಾಗಿ ತನ್ನ ಆಸೆಯನ್ನು ಸೂಚಿಸಿದನು.
“ಪೂರ್ವಿಯನ್ನು ಹಾಡಿತೋರಿಸಬೇಕು.”
“ಅದು ಬೇಡಪ್ಪ. ಅವೊಂದು ರಾಗ ಬೇಡ”
ಎಂದು ಗುರುಗಳು ಮಾತನ್ನು ಮುಂದೆ ತಳ್ಳಿಬಿಡುತ್ತಿದ್ದರು. ಒಂದು ದಿನ ಅಲಮೇಲಮ್ಮನವರು ಶಿಷ್ಯನ ವಕೀಲಿ ವಹಿಸಿ.
“ಅಷ್ಟು ದಿನದಿಂದ ಪೂರ್ವಿ ಕೇಳಬೇಕು ಎಂದು ಲಕ್ಷ್ಮಣ ಹಂಬಲಿಸುತ್ತಿದ್ದಾನೆ. ಹಾಡಬಾರದೇ? ಇವತ್ತು ಹೇಗೂ ಶುಕ್ರವಾರ. ಸಂಜೆ ಹಾಡಿ.”
“ಆಗಲಿ ಹಾಡುತ್ತೇನೆ.”
ಎಂದು ಒಪ್ಪಿಕೊಂಡರು.
ಸಂಜೆ ಭಾಗವತರ ಕಛೇರಿಗೆ ಹೆಂಡತಿ, ಮಗ, ಶಿಷ್ಯ ಇಷ್ಟೇ ಜನ ಶ್ರಾವಕರು. ಮೊದಲು ಕೆಲವು ಕೀರ್ತನೆಗಳನ್ನು ಹಾಡಿ ಪೂರ್ವಿ ಹಾಡಲು ಮೊದಲುಮಾಡಿದರು. ಅಮೋಘವಾದ ರಾಗವಿಸ್ತಾರ, ಅಪೂರ್ವವಾದ ಸಂಚಾರ. ಸಂಧ್ಯಾರಾಗದ ಗಹನ ಗಂಭೀರತೆಯ ಹಾಡಿಕೆಯಲ್ಲಿ ಎದ್ದು ಕಾಣುತ್ತಿತ್ತು. ಪೂರ್ವಿ ರಾಗವನ್ನು ಮುಗಿಸಿ
“ಲಕ್ಷ್ಮಣಾ, ಇದು ಪೂರ್ವಿ – ಆದರೆ ಸಂಧ್ಯಾರಾಗ ಪೂರ್ವಿಯಲ್ಲ. ನನಗೆ ನಿಜವಾಗಿಯೂ ಈ ರಾಗವನ್ನು ಹಾಡುವುದಕ್ಕೆ ಬರುವುದಿಲ್ಲ. ಭೂಮಿಯನ್ನು ಭೇದಿಸಿಕೊಂಡು ಬುಗ್ಗೆ ಹೊರಡುವಂತೆ ಹೃದಯವನ್ನು ಭೇದಿಸಿಕೊಂಡು ರಾಗ ಬರಬೇಕು. ನನ್ನ ಪೂರ್ವಿ ಹೃದಯದಿಂದ ಬರುವುದಿಲ್ಲ – ತಲೆಯಿಂದ ಬರುತ್ತದೆ. ನಿನಗೆ ಪೂರ್ವಿಯ ದತ್ತು ಕೊಟ್ಟಿದ್ದೇನೆ. ನಾನು ಆಸೆಪಟ್ಟುಕೊಂಡಿದ್ದ ಹಾಗೆ ಎಂದಾದರೂ ನೀನು ಹಾಡಿಬಿಡು. ಅಂದು ನಾನು ಪಾವನನಾಗುತ್ತೇನೆ. ಅಂದು ನಾನು ಋಣ ವಿಮುಕ್ತನಾಗುತ್ತೇನೆ. ನಿನ್ನಿಂದ ನಾನು ನಿರೀಕ್ಷಿಸುವ ಗುರುದಕ್ಷಿಣೆ ಅದೇ ಕಣಪ್ಪಾ”
ಎಂದರು. “ಅಪ್ಪಣೆಯಾದಂತಾಗಲಿ” ಎಂದು ಲಕ್ಷ್ಮಣ ತಲೆ ಬಾಗಿಸಿದ.
ಗುರುಕುಲವಾಸವು ಮುಗಿಯಿತು.
“ಇನ್ನು ನೀನು ಸ್ವತಂತ್ರ. ನಾನು ಹೇಳಿಕೊಡುವುದು ಮುಗಿಯಿತು.”
ಎಂದು ಗುರುಗಳು ಅಪ್ಪಣೆಯಿತ್ತರು. ಲಕ್ಷ್ಮಣನ ಮನಸ್ಸು ಖಿನ್ನವಾಯಿತು. ಹೃದಯ ಭಾರವಾಯಿತು. ‘ಇಂತಹ ಜನವನ್ನು ಬಿಟ್ಟು ಎಲ್ಲಿಗೆ ಹೋಗುವುದು” ಎಂದುಕೊಂಡನು.
ಗುರುಗಳೇ ಹೇಳಿದರು.
“ನಿನ್ನ ವಿದ್ಯೆ ದೆವಿಕವಾದದ್ದು. ಅದನ್ನು ಸತ್ಪಾತ್ರದಲ್ಲಿ ಧಾರೆಯೆರೆ. ನಿನ್ನ ಬೆಳಕಿನಿಂದ ಹಲವು ಹೃದಯಗಳು ಬೆಳಗುತ್ತವೆ. ಬೆಳಗಿಸು. ಲೋಕವನ್ನೇ ಅಂಧಕಾರಕೂಪದಿಂದ ನಿವೃತ್ತಿಮಾಡು.”
“ದೊಡ್ಡ ಮಾತಾಯಿತು. ತಮ್ಮ ದೀವಟಿ ಹೊರುವ ದೀವಟಿಗ ನಾನು ಅಷ್ಟೇ”
ಎಂದು ಹೇಳಿದನು.
“ಲಕ್ಷ್ಮಣ ಹೊರಟು ನಿಂತ. ಅಲಮೇಲಮ್ಮನವರು ತಿಂಡಿಯ ಗಂಟನ್ನು ತಂದು ಕೆಗಿತ್ತರು. ಸುಬ್ರಹ್ಮಣ್ಯ ಒಂದೇ ಸಮನೆ ಕಣ್ಣೀರ್ಗರೆಯುತ್ತಿದ್ದ. ಗುರುಗಳು ಉಕ್ಕಿಬರುತ್ತಿದ್ದ ದುಃಖವನ್ನು ತಡೆದುಕೊಂಡು ಧೆರ್ಯವನ್ನು ಪ್ರಕಟಿಸುತ್ತಿದ್ದರು. ಬಸ್ಸಿನವನು ಗಲಭೆಮಾಡತೊಡಗಿದ. ಲಕ್ಷ್ಮಣ ಗುರುಗಳಿಗೂ ಗುರುಪತ್ನಿಗೂ ಕಾಲಿಗೆರಗಿದನು. ಅಲಮೇಲಮ್ಮನವರು ತಾವೇ ಕಂಬನಿ ಸುರಿಸುತ್ತ ಲಕ್ಷ್ಮಣನ ಕಣ್ಣುಗಳನ್ನು ಸೆರಗಿನ ಕೊನೆಯಿಂದ ಒರಸುತ್ತಾ
“ದುಃಖಿಸಬೇಡ ಕಂದಾ, ಹೋಗಿ ಬಾ. ನೀನೆಲ್ಲಿದ್ದರೂ ನಿನ್ನ ಬೆನ್ನು ಕಾವಲಿಗೆ ಯಜಮಾನರು ಇರುತ್ತಾರೆ”
ಎಂದು ಧೆರ್ಯ ಕೊಟ್ಟರು. ಸುಬ್ರಹ್ಮಣ್ಯ ಬಂದು ಲಕ್ಷ್ಮಣನನ್ನು ಅಪ್ಪಿಬಿಟ್ಟ. ಲಕ್ಷ್ಮಣ ಅವನ ಬಂಧನದಿಂದ ಮೆಲ್ಲನೆ ಬಿಡಿಸಿಕೊಂಡು ಬಸ್ಸಿನಲ್ಲಿ ಬಂದು ಕುಳಿತ.
ರಾತ್ರಿ ಡಾಕ್ಟರು ಮನೆಗೆ ಬಂದ ತಮ್ಮ ಅತಿಥಿಯನ್ನು ನೋಡಿ ಆನಂದ ಆಶ್ಚರ್ಯಗಳನ್ನು ಒಮ್ಮೆಲೇ ಸೂಚಿಸಿದರು.
“ಇಂತಹ ದಿವಸ ಬರುತ್ತೇನೆಂದು ಒಂದು ಕಾಗದ ಬರೆಯಬಾರದಾಗಿತ್ತೇ ಲಕ್ಷ್ಮಣರಾ?”
“ಏತಕ್ಕೆ ಸುಮ್ಮನೆ ನಿಮಗೆ ತೊಂದರೆ. ನನ್ನ ಮನೆಗೆ ನಾನು ಬರುವುದಕ್ಕೆ ಕಾಗದ ಏತಕ್ಕೆ ಬರೆಯಬೇಕು ಎಂದು ಬರೆಯಲಿಲ್ಲ.”
ಡಾಕ್ಟರರಿಗೂ ಅವರ ಹೆಂಡತಿಗೂ ಹಿಡಿಸಲಾರದಷ್ಟು ಆನಂದವಾಯಿತು. ಊಟಕ್ಕೆ ಕುಳಿತಿದ್ದಾಗ ಲಕ್ಷ್ಮಣನೇ ಡಾಕ್ಟರ ಹೆಂಡತಿಗೆ “ಅಮ್ಮ ಮುಕ್ತಹಸ್ತದಿಂದ ಅನ್ನಹಾಕಿ ಗುರುಗಳಲ್ಲಿ ಕಳುಹಿಸಿಕೊಟ್ಟಿರಿ. ವಿದ್ಯಾಭ್ಯಾಸ ಮುಗಿಸಿಕೊಂಡು ಬಂದಿದ್ದೇನೆ ತಾಯೀ. ತಮ್ಮ ಪಾದತಲದಲ್ಲಿ ಅದನ್ನು ಅರ್ಪಿಸಿಕೊಳ್ಳಬೇಕು”
ಎಂದು ಹೇಳಿದನು.
“ನೀವು ನಮ್ಮಲ್ಲಿ ಬಂದದ್ದೇ ನಮಗೆ ತುಂಬ ಗೌರವ. ನೀವು ದೊಡ್ಡವರಪ್ಪಾ. ಗುಣಕ್ಕೆ ತಕ್ಕ ಮಾತನಾಡಿದಿರಿ. ಆ ಯೋಗ್ಯತೆ ನಮಗೆ ಎಲ್ಲಿಂದ ಬರಬೇಕು?”
“ಇಲ್ಲ ತಾಯಿ. ಉಪಚಾರದ ಮಾತಲ್ಲ, ನೀವು ನಿಮ್ಮ ಯಜಮಾನರೂ ನನ್ನ ದೇಹ ಆತ್ಮ ಎರಡನ್ನೂ ಕಾಪಾಡಿದಿರಿ”
ಎಂದು ಹೇಳಿದನು.
ಡಾಕ್ಟರವರ ಪ್ರಭಾವದಿಂದ ಮದರಾಸಿನ ಗಾಯನ ಸಮಾಜಗಳು ಲಕ್ಷ್ಮಣನ ಕಛೇರಿಯನ್ನಿಡಿಸುವುದಕ್ಕೆ ಹಾತೊರೆಯತೊಡಗಿದವು; ಅನೇಕ ಕಛೇರಿಗಳಾದವು. ದೊಡ್ಡ ದೊಡ್ಡ ಕಲಾಭಿಮಾನಿಗಳ ಮನೆಗಳಲ್ಲಿ ಕಛೇರಿಗಳಾದವು. ಯಾವ ಪತ್ರಿಕೆಯಲ್ಲಿ ನೋಡಲಿ ಲಕ್ಷ್ಮಣನ ಪ್ರಶಂಸೆ, ಅವನ ಹಾಡಿಕೆಯ ಮೇಲೆ ಸ್ತುತಿಪರವಾದ ಲೇಖನಗಳು ಪ್ರಕಟವಾಗುತ್ತಿದ್ದವು.
ಲಕ್ಷ್ಮಣನಿಗೆ ಮದರಾಸು ಬೇಸರವನ್ನುಂಟು ಮಾಡುತ್ತ ಬಂದಿತು. ಸಮಾಜ, ಕಛೇರಿ, ಸ್ತುತಿ, ಗಲಭೆಗಳು ಅವನ ತಪಸ್ಸಿಗೆ ಭಂಗ ತಂದಿದ್ದವು. ಮದರಾಸಿನಲ್ಲಿ ಅವನು ಎಲ್ಲಿ ಹೋದರೂ ಜನರು ಅವನನ್ನು ಗುರುತಿಸುತ್ತಿದ್ದರು. ಸಮುದ್ರದ ದಂಡೆಯ ಮೇಲೆ ಕುಳಿತು ಅಲೆಗಳ ಹೊಯ್ದಾಟವನ್ನು ನೋಡುತ್ತಾ ಒಂದು ದಿವಸ ಮೆಮರೆತಿದ್ದನು. ಯಾರೋ ಗುರುತಿಸಿಬಿಟ್ಟರು. ಒಂದು ಗುಂಪು ಸೇರಿಬಿಟ್ಟಿತು. ಅವರಿಂದ ತಪ್ಪಿಸಿಕೊಂಡು ಮನೆ ಸೇರಬೇಕಾದರೆ ಸಾಕುಸಾಕಾಗಿಬಿಟ್ಟಿತು. ಡಾಕ್ಟರವರಿಗೆ ತಿಳಿಸಿದ “ಅಪ್ಪಣೆಯಾದರೆ ಊರಿಗೆ ಹೋಗುತ್ತೇನೆ.”
“ಏನು ಅವಸರ ಲಕ್ಷ್ಮuರಾ, ಮುಂದಿನ ತಿಂಗಳು ಅಕೆಡಮಿಯವರು ‘ಸಂಗೀತವಾರ’ವನ್ನು ಏರ್ಪಡಿಸುತ್ತಾರೆ. ಮುಗಿಸಿಕೊಂಡು ಹೋಗುವುದು ತಾನೆ?”
“ಇಲ್ಲ. ಮತ್ತೆ ಬೇಕಾದರೆ ಬರುತ್ತೇನೆ. ಈಗ ದಯೆಯಿಟ್ಟು ಅಪ್ಪಣೆಯನ್ನು ಕೊಡಬೇಕು”
ಎಂದು ಅಂಗಲಾಚಿದನು.
ಡಾಕ್ಟರೂ ಅವರ ಹೆಂಡತಿಯೂ ನಿರ್ವಾಹವಿಲ್ಲದೆ ಒಪ್ಪಬೇಕಾಯಿತು. ಪಾಯಿಸದ ಅಡಿಗೆ ಮಾಡಿ ಲಕ್ಷ್ಮಣರಾಯನಿಗೆ ಔತಣವನ್ನೇರ್ಪಡಿಸಿದರು. ಡಾಕ್ಟರು ಕಛೇರಿಗಳಲ್ಲಿ ಲಕ್ಷ್ಮಣ ಸಂಪಾದಿಸಿದ್ದ ಹಣವನ್ನು ಕೊಡಹೋದರು.
“ಎಷ್ಟಿದೆ?”
“ಒಂದು ಸಾವಿರದ ಆರು ನೂರೆವತ್ತು.”
“ಅಷ್ಟಾಗಿದೆಯೇ?”
“ನೀವು ಮನಸ್ಸು ಮಾಡಿದ್ದರೆ ಅದರ ನಾಲ್ಕರಷ್ಟಾಗುತ್ತಿತ್ತು.”
“ನನಗೆ ಐವತ್ತು ರೂಪಾಯಿ ಸಾಕು.”
“ಮಿಕ್ಕದ್ದನ್ನು ಏನು ಮಾಡಲಿ?”
“ತಂಜಾವೂರಿಗೆ ನಮ್ಮ ಗುರುಗಳಿಗೆ ತಲುಪಿಸಿಬಿಡಿ.”
“ಹಾಗೇ ಆಗಲಿ”
ಎಂದು ಡಾಕ್ಟರು ಒಪ್ಪಿದರು. ಡಾಕ್ಟರು ಮತ್ತು ಅವರ ಹೆಂಡತಿಯ ಅಪ್ಪಣೆ ಪಡೆದು ಬೆಂಗಳೂರು ಗಾಡಿ ಹತ್ತಿದನು.
“ಎಲ್ಲಿಗೆ ಹೋಗುವುದು?”
“ಬೆಂಗಳೂರಿಗೆ.”
“ಅಲ್ಲಿ ಹೋಗಿ ಏನು ಮಾಡುವುದು?”
“ಏನು ಮಾಡುವುದು???”
ಅದೇ ಪ್ರಶ್ನೆ ಮತ್ತೆ ಮತ್ತೆ ಲಕ್ಷ್ಮಣನ ಮನಸ್ಸಿನಲ್ಲಿ ಏಳುತ್ತಿತ್ತು. ಬೆಂಗಳೂರು ಎಂದೊಡನೆಯೇ ಹಳೆಯ ನೆನೆಪೆಲ್ಲಾ ಮತ್ತೆ ಬಂದು ಕಾಣಲಾರಂಭಿಸಿದವು. ‘ತಂದೆ – ತಾಯಿ – ಜಯಾ; ಇವರಿಲ್ಲದ ಬೆಂಗಳೂರನ್ನು ಕಟ್ಟಿಕೊಂಡು ಏನು ಮಾಡಲಿ;’ ಎಂದುಕೊಂಡನು. ಕೂಡಲೆ ವೆಂಕಟೇಶ ಶಾಂತರ ಜ್ಞಾಪಕ ಬಂದಿತು. ಅವರನ್ನು ನೋಡಬೇಕೆಂದು ಮನಸ್ಸು ಹಾತೊರೆಯತೊಡಗಿತು.
ಕೂಡಲೆ ಅಣ್ಣ, ಅತ್ತಿಗೆಯ ಜ್ಞಾಪಕ ಬಂದಿತು. ಅವರಾಡುತ್ತಿದ್ದ ಮಾತುಗಳು ಸಿಡಿಲಿನ ಹೊಡೆತದಂತೆ ಒಂದೊಂದು ಸ್ಮೃತಿಪಥಕ್ಕೆ ಬರತೊಡಗಿದವು. ಜಯಾ ಪಟ್ಟ ಪಾಡೆಲ್ಲಾ ಅಂದೇ ಆದಂತೆ ಭಾಸವಾಗತೊಡಗಿತು. ಉದ್ವೇಗದಿಂದ ಲಕ್ಷ್ಮಣನ ದೇಹವು ಕಂಪಿಸತೊಡಗಿತು.
‘ಇಲ್ಲ – ಇಲ್ಲ. ಅವರ ಮುಖವನ್ನು ಮತ್ತೆ ನೋಡುವುದಿಲ್ಲ. ಬೆಂಗಳೂರು – ಬೆಂಗಳೂರು ಬೇಡ. ಗಾಡಿ ಬೆಂಗಳೂರಿನಲ್ಲಿ ನಿಂತೊಡನೆಯೇ ಮೆಸೂರಿಗೆ ಹೋಗುವುದು” ಎಂದು ನಿಶ್ಚಯಿಸಿಕೊಂಡನು.
*****
ಮುಂದುವರೆಯುವುದು