ನುಗ್ಗಿ ಬಂದಿತು ಎಲ್ಲ ಲೋಕದಾನಂದವದು

ನುಗ್ಗಿ ಬಂದಿತು ಎಲ್ಲ ಲೋಕದಾನಂದವದು ನನ್ನ ದೇಹದ ಗೇಹ ರಚನೆಗೆಂದು, ಮುದ್ದನಿಟ್ಟವು ಬಾನ ಬೆಳಕು ಬಿಟ್ಟೂ ಬಿಡದೆ ಅವಳು ಎಚ್ಚರಗೊಂಡು ಏಳುವರೆಗು. ತ್ವರೆಯಿಂದ ಬಂದ ಬೇಸಗೆ ತಂದ ಹೂವುಗಳು ಅವಳ ಉಸಿರಾಟದಲಿ ಉಸಿರಿಟ್ಟವು. ಹರಿವ […]

ಅವಳು ನನ್ನವಳಾಗಿ

ಆಕಾಶ-ಅಲ್ಲಿರುವ ಎಲ್ಲ ನಕ್ಷತ್ರಗಳು ಜಗವು-ಮುಗಿಯದ ಅದರ ಎಲ್ಲ ಸಂಪದವು ನನ್ನ ವಶವಾದರೂ ನಾನು ಇನ್ನಿಷ್ಟು ಬಯಸಬಹುದು; ಆದರೆ ನಾನು ಸಂತೃಪ್ತ, ನೆಲದ ಮೇಲಿನ ಸಣ್ಣ ಮೂಲೆ ಸಾಕು- ಅವಳು ನನ್ನವಳಾಗಿ ಮಾತ್ರ ದೊರೆಯಬೇಕು. (Lover’s […]

ಕವಿತೆಗೆ

ಕವಿತೆ! ಸುಲಲಿತ ಭಾವಸಂಪ್ರೀತೆ, ನನ್ನೆದೆಯಸುಪ್ತಸುಖದುಃಖ ವೀಣಾಕ್ವಣಿತ ಸಂಗೀತೆಚೈತ್ರಮುಖಿ ಕಣ್ಣನರಳಿಸು ವಿಮಲವಿಖ್ಯಾತೆ!ಏನಿದ್ದರೇನು ವಿಶ್ವಂಭರಿತೆ ನಿನ್ನುದಯಚಿರನೂತನೋತ್ಸಾಹ ಚೇತನಂ ಪಡೆವನಕಕವಿಮನವು ಬರಿಯುದಾಸೀನ ರಸಹೀನತೆಯದೀನತೆಯ ತವರು; ಅದೂ ವಿಶ್ವಮೋಹಿನಿ ಉಷೆಯಚುಂಬನುತ್ಕರ್ಷತೆಗೆ ಭೂಮಿಗಿಳಿದಿದೆ ನಾಕ!ಅವುದೋ ಮೂಲೆಯಲಿ ಕುಳಿತು ಭೂರಂಗದಲಿನಡೆವ ಅಕಟೋವಿಕಟ ನಾಟಕದ […]

ಹಾಡಿನೊಡತಿ

೧ ಸವಿಹಾಡ ರಸವತಿಯೆ ಎದೆಯನ್ನೆ ಕನ್ನೆ, ನಿನ್ನೆದೆಯ ಬೀಣೆಯನು ನುಡಿಸು ಚೆನ್ನೆ! ನುಡಿದು ಪಡಿನುಡಿದು ಎದೆವನೆದೆರೆದು ನುಡಿಯೆ. ೨ ಜೀವಸಂಜೀವಿನಿಯೆ ಕಲ್ಪನಾಮೋದೆ, ಹೋಗಾಡಲೀರೋತೆ ಹಾಡು ಪ್ರಮದೆ ಅಂಬರವ ತುಂಬಿ ತುಳುಕಿಸಿ ಗಾನ ಸುರಿಯೆ! ೩ […]

ಮುದ್ದಣ-ಮನೋರಮೆ

ಮುದ್ದಣ ಮನೋರಮೆಯರಿನಿವಾತನಾಲಿಸಲು ಕನ್ನಡದ ಬೆಳ್ನುಡಿಯ ಹೊಂಬೆಳಗಿನುನ್ನತಿಯ ಕಾಣಲೆಂದಾಸೆಯಿರೆ ಜೇನುಂಡ ಆರಡಿಯ ಝೇಂಕೃತಿಗೆ ಕಿವಿದೆರೆದು ಕೇಳು ಎದೆತಣಿಯುವೊಲು. ತನಿವಣ್ಣ ತಿನಲಿತ್ತು ಕೆನೆವಾಲನೀಯುವರು. ಏನು ಜೊತೆ! ಎಂಥ ಕಥೆ! ನಾಲ್ಮೊಗನ ಅಗ್ಗಿಟ್ಟಿ- ಯೊಗೆದ ಮುತ್ತಿನ ಚೆಂಡು! ಮಾತೊಂದು […]

ಆನಿ ಬಂತವ್ವಾಽಽನಿ

ಆನಿ ಬಂತವ್ವ ಆಽನಿ ಇದು ಎಲ್ಲಿತ್ತವ್ವ ಮರಿಯಾನಿ|| ಕಳ್ಳಿ ಸಾಲಾಗ ಮುಳ್ಳ ಬೇಲ್ಯಾಗ ಓಡಿಯಾಡತಿತ್ತಾಽನಿ, ಕಾಲ ಮ್ಯಾಲ ಅಂಗಾತ ಮಲಗಿ ತೂರನ್ನತೈತಿ ಈ ಆಽನಿ! ಎಂಥ ಚಿಟ್ಟಾನಿ ನನ್ನ ಕಟ್ಟಾಣಿ ಇದಕ ಯಾರಿಲ್ಲ ಹವಽಣಿ […]

ತುಂಬುದಿಂಗಳು

ಮೊನ್ನೆ ದೀಪಾವಳಿಗೆ ಒಂದು ತಿಂಗಳು ದಣೇ ತುಂಬಿಹುದು; ಆಗಲೇ ಸುಳುವು ಹಿಡಿಯುವ ಮೋಡಿ! ತೆರೆದು ಬಟ್ಟಲಗಣ್ಣ ಬಿಟ್ಟೂ ಬಿಡದೆ ನೋಡಿ ಮಿಟ್ಟು ಮಿಸುಕದೆ ಇರುವ (ನಾನು ಅಪರಿಚಿತನೇ?) ಎತ್ತಿಕೊಂಡರೆ ತುಸುವ ಅತ್ತಂತೆ ಮಾಡಿ, ಮರು- […]

ಮಗುವಿಗೆ

ನಮ್ಮ ಬಾಳಬಳ್ಳಿಗೊಗೆದ ಹೊಚ್ಚಹೊಸತು ಮಲ್ಲಿಗೆ! ನೆಲಮುಗಿಲಿನ ಒಲವು ಗೆಲವು ಪಡೆದು ಬಂದಿತಿಲ್ಲಿಗೆ! ಪರಿಮಳಿಸಿತು ತುಂಬಿ-ತೋಟ ನಿನ್ನ ಒಂದೆ ಸೊಲ್ಲಿಗೆ (ಪುಟ್ಟ ಎಸಳುಗೈಗಳನ್ನು ಮುಟ್ಟಲೇನು ಮೆಲ್ಲಗೆ?) ನಿದ್ದೆಯಲ್ಲು ನಗುವೆ ನೀನು ನಮ್ಮ ಬುದ್ಧಿಯಾಚೆಗೆ ತೇಲುತಿರುವ ಮುದ್ದು […]

ವಿರಹ ಕೂಜನ

೧ ಮನೆಯೊಳಗೆ ಅತ್ತಿತ್ತ ಕಾಲು ಸುಳಿದಾಡುತ್ತಿವೆ ಕಂಡು ಕಂಡೂ ಕಣ್ಣು ಹುಡುಕುತಿಹವು; ಸುಮ್ಮ ಸುಮ್ಮನೆ ಕಿವಿಗಳೇನೊ ಆಲಿಸಿದಂತೆ- ತಮ್ಮ ರೂಢಿಗೆ ತಾವೆ ನಾಚುತಿಹವು. ಅಡುಗೆ ಮನೆಯೊಳು ಬರಿಯ ಹೊಗೆಯಾಡಿದಂತಿಹುದು ದಿನದ ಗುಂಜಾರವದ ನಿನದವಿಲ್ಲ; ನಡುಮನೆಗು […]

ಪಯಣ

ಬಂತು!….. ಬಂದನಿತರಲೆ ಹೊರಟು ನಿಂತಿತು ರೈಲು! ‘ಹೋಗಿ ಬರುವಿರ?’ ಎಂಬ ಧ್ವನಿಯು ಎದೆ ಕಲಕಿರಲು ಹರುಷ ದುಃಖಗಳೆರಡು ಮೌನದಲ್ಲಿ ಮೊಳಗಿರಲು ರೈಲು ಸಾಗಿತು ಮುಂದೆ ಮೈಲು ಮೃಲು! ಕಿಟಕಿಯಲಿ ಕರವಸ್ತ್ರ ಒಲುಮೆ ಬಾವುಟದಂತೆ ಎದೆಯ […]