“ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” -ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. […]
ಟ್ಯಾಗ್: ಮಿಂಚಿಕೆಗಳು
ನುಡಿಯ ಏಳಿಗೆ
ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ; ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ ಸರಕಾರದ ಸಿರಿಗನ್ನಡದುದ್ಧಾರ. *****
ಅಕಾಲಿಕ ನೆರವು
ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. *****
ಒಂದೇ ಆದರೂ…
ಎರಡೂ ಬಲೆಯೇ: ಹೀಗಿದ್ದರೂ ಜೇಡನ ಬಲೆಯಿಂದ ಮೀನು ಹಿಡಿಯಲಾಗದು; ಮೀನಿನ ಬಲೆಯಿಂದ ನೊಣ ದಕ್ಕಲಾರದು. *****
ಅಚ್ಚರಿಯ ಪರಿ
ಬಾಂಬಿನ ಗೋತ್ರ ದ ಆನೆ ವಿಶೇಷಣದ ಚೋಟುದ್ದದ ಸೊರಗು ದೇಹ- ನಾನೂ ಕಿರಿ ಮಗನ ಕಣ್ಣುಗಳ ಬೆರಗೂ ಏಕಾಗ್ರ ವೀಕ್ಷಿಸಿ ಕಾದಿರಲು ಊದು ಬತ್ತಿಯ ತುದಿ ತಾಕಿದ್ದೇ ತಡ ಫರ್ಲಾಂಗು ಗಾತ್ರ ಶಬ್ದ ಹೊಮ್ಮಿ, […]
