ಎಂದಿನಿಂದಲೋ ಬಾನಬಟ್ಟೆಯಲ್ಲಿ ಮೋಡ ಓಡುತಿಹವು! ನೋಡ ನೋಡುತಿರೆ ಕಾಡುಮೇಡುಗಳ ದಾಟಿ ಸಾಗುತಿಹವು; ಗಾಳಿ-ಗೆಳೆಯನೊಡನಾಟವಾಡಿ ಬೇಸರವ ನೀಗುತಿಹವು ಹಸುಳರಂತೆ ನಸುನಕ್ಕು ಅಂಬೆಗಾಲಿಕ್ಕಿ ನಡೆಯುತಿಹವು. ಹಂಸ ಕುರಿಯಮರಿ ಆನೆ ಒಂಟಿ ಹಸು ಪ್ರಾಣಿರೂಪ ತಳೆದು ತಾಗಿ ತುರುಗಿ […]
ಟ್ಯಾಗ್: Chennaveera Kanavi
ಗೆಲುವೆನೆಂಬುವ ಭಾಷೆ
ಸಂಸಾರ ದಂದುಗದ ಹುರಿಹಂಚಿನಲಿ ಬೆಂದು ಹುರುಪಳಿಸಿ ತಡಬಡಿಸಿ ನಾಣುಗೆಟ್ಟೋಡುತಿಹ ಅಳಿಮನದಿ ತಲ್ಲಣಿಸಿ, ನಂಬದಿಹ ನಚ್ಚದಿಹ ಡಾಂಭಿಕದಲಂಕಾರ ತೊಟ್ಟ ಜೀವವೆ, ಎಂದು ಎಂದು ನಿನ್ನಯ ಬಾಳಿಗೊಂದು ನಿಲುಗಡೆ ಸಂದು ಕಲ್ಯಾಣಮಾದಪುದು, ಶಾಂತಿ ನೆಲೆಗೊಳ್ಳುವುದು? ಭಾವಶುದ್ಧಿಯ ಪಡೆದು […]
ತಂಗಿಯ ಓಲೆಯನ್ನೋದಿ….
“ಒಂದೆ ಮನೆತನದಲ್ಲಿ ಜನಿಸಿದ್ದರೊಳಿತಿತ್ತು” ಎಂಬ ಮುತ್ತಿನ ಸಾಲು ತಂಗಿಯೋಲೆಯೊಳಿತ್ತು. ಓದುತೋದುತಲಿರಲು ಕಣ್ಣು ಹನಿಗೂಡಿತ್ತು; ಕಿವಿಗವಿಗಳಲ್ಲಿ ಆ ನುಡಿಯೆ ಪಡಿ ನುಡಿದಿತ್ತು; ಮೈ ನವಿರೊಳದ್ದಿತ್ತು; ಎದೆಯ ಬಟ್ಟಲಿನಲ್ಲಿ ಧನ್ಯತೆಯ ವಿಮಲಜಲ ತುಂಬಿತುಳಾಕಾಡಿತ್ತು. ಅವಳಂತರಂಗದೆಳವಳ್ಳಿ ದಾಂಗುಡಿಯಿಟ್ಟು ಕೃತಕತೆಯ […]
ಮಾಯಾ ಕೋಲಾಹಲ
ಮಮಕಾರ ಮೋಹಿನಿಯರೊಸೆದಿಟ್ಟ ಮೂರ್ತಿಯೆನೆ ಚೆಲುವು ಮೈವೆತ್ತಂತೆ, ರತಿಯ ಪುತ್ಥಳಿಯಂತೆ ಜನಿಸಿರ್ದ ಮಾಯೆ ಕಳೆಯೇರಿ ಬಗೆಗೊಳ್ಳುತ್ತಿರೆ, ವಿಧ ವಿಧದ ಹಾವಭಾವಂಗಳಲಿ ಭಣಿತೆಯಲಿ ಎಸೆದಿರಲು, ಜ್ಞಾನಿ ನಿರಹಂಕಾರರಮಿತ ತಪ- ಸೂನು ಶಿವರೂಪಾದ ಅಲ್ಲಮಂ ಮಧುಕೇಶ ಗುಡಿಯಲ್ಲಿ ನುಡಿಸುತಿರೆ […]
ನೆನೆವುದೊಂದಗ್ಗಳಿಕೆ
ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ- ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ. ಬಲಿದಾನದಿತಿಹಾಸ ರಕ್ತಸಂಪುಟಮಾಗಿ ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ ಹೊಳೆದಿಹಿರಿ; ಕಲ್ಪಂಗಳುರುಳಿದರು […]