ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****
ಟ್ಯಾಗ್: K S Nisar Ahmed
ಸ್ವಯಂಸೇವೆಯ ಗಿಳಿಗಳು
– ೧ – ಕಲಾಕ್ಷೇತ್ರದ ಕೌಂಟರು, ಗೇಟಿನಲ್ಲಿ ಪ್ರೇಕ್ಷಕರ ತಕ್ಕ ಸೀಟಿನಲ್ಲಿ ಪ್ರತಿಷ್ಠಾಪಿಸುವ ಲಗುಬಗೆಯಲ್ಲಿ ಬೆಂಗಳೂರನ್ನೇ ಹೊತ್ತ ಸೋಗಿನಿಂದ, ಕಾಲ್ಗೆಟಿಸಿದ ನಗೆಯಿಂದ, ಆತ್ಮೀಯರಾಗುತ್ತಾರೆ – ಸ್ವಯಂಸೇವಕ ಸಂವೇದಕ ಗಿಳಿಗಳು; ಸ್ವದೇಶಿ ನಾಲಗೆಯ ವಿದೇಶಿ ಉಚ್ಚಾರಣೆಯ […]
ಸವತಿ ಮಕ್ಕಳ ಹಾಗೆ
ಸವತಿ ಮಕ್ಕಳ ಹಾಗೆ ಕಾಣಬೇಡವ್ವ ಸವತಿ ಮಕ್ಕಳ ಹಾಗೆ ಕಾಣಬೇಡ. – ೧ – ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ ಮರುಧರೆಯ ಮರುಳರ ಕಡು ನೆಂಟರೆಂಬೆ ಪಕ್ಕದ […]
ಸಮೂಹ ಮಾಧ್ಯಮಗಳು
– ೧ – ಸುದ್ದಿ ಮಾಧ್ಯಮಗಳ ಹಣೆಬರಹವೇ ಅಷ್ಟು: ಬೆಟ್ಟ ಮಾಡಿ ರವೆಯಷ್ಟನ್ನು ಎತ್ತಿ ಮೆರೆಸುತ್ತವೆ ಬರೀ ಗಷ್ಟನ್ನು. ಅವುಗಳಿಗೆ ಅತಿ ಮುಖ್ಯ ಮಿಂಚು, ಮಳೆಬಿಲ್ಲು, ಸಂಜೆ ಮುಗಿಲಿನ ಸಖ್ಯ. ಶಾಶ್ವತದ ಹೂರಣಕ್ಕೆ ಮಾಡಿ […]
ರಂಗೋಲಿ ಮತ್ತು ಮಗ
– ೧ – ನಮ್ಮದೊಂದು ಮನೆ ವಿನಾ ಮಿಕ್ಕೆಲ್ಲ ಮನೆಯೆದುರು ಪರಿಶುಭ್ರ ಹಲ್ಲಂತೆ ಮುಂಜಾನೆ ರಂಗವಲ್ಲಿ; ಕಿಲಿಕಿಲಿಸಿದಂತೆ ಇಡಿ ಗಲ್ಲಿ. ಹಾಲಿಗೆ ಹೊರಟಾಗ ಹೊತ್ತಾರೆ ಚಿತ್ತಾಪಹಾರಿ ಚಿತ್ತಾರ ಖಾಲಿ ಮನಸಿನ ಖೋಲಿ ಖೋಲಿಗಳ ಬೀಗ […]
