ಮಾಮರದ ಆಸರದಿ ಮೇಲೇರಿ ಕುಡಿಚಾಚಿ ಬೆಳ್ಳಿ ಹೂಗಳ ಹರವಿ ಅತ್ತಿತ್ತಲಿಣಿಕಿ, ಮಾಂದಳಿರ ಮುದ್ದಾಡಿ ರಂಬೆಯಲಿ ನೇತಾಡಿ ಸುಳಿಗಾಳಿ ಸುಳುವಿನಲಿ ಜೀಕಿ ಜೀಕಿ- ನೀಲಗಗನದ ಆಚೆ ನೀಲಿಮೆಯ ಬಳಿ ಸಾರಿ ಬೆಣ್ಣೆ-ಬೆಟ್ಟದ ಮೋಡಗರ್ಭಗುಡಿ ಸೀಳಿ, ಗರಿಗೆದರಿ […]
ಪಕ್ಷಿಗಾಗಿ ಕಾದು
ಮೊದಲೊಂದು ಪಂಜರ ಬರಿ ಅದು ಖಾಲಿಯಾಗಿದ್ದು, ತೆರೆದೂ ಇರಬೇಕು-ಹಾಗೆ. ಆಮೇಲೆ ಏನೋ ಸರಳವಾದ, ಬರುವ ಪಕ್ಷಿಗೆ ಅಗತ್ಯವೆನ್ನಿಸುವ ಏನನ್ನೋ ಪಂಜರದಲ್ಲಿ ಬಿಡಿಸು ಆಮೇಲೆ ಈ ನಿನ್ನ ಚಿತ್ರವನ್ನು ನಿನಗೆ ಇಷ್ಟವಾದ ಮರಕ್ಕೆ ಆನಿಸಿ ಇಡು. […]
ಗವೀಮಠದ ಪವಾಡ
(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು […]
ನುಡಿಯ ಏಳಿಗೆ
ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ; ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ ಸರಕಾರದ ಸಿರಿಗನ್ನಡದುದ್ಧಾರ. *****
ಎಲ್ಲ ‘ಯಥಾಪ್ರಕಾರ’ಗಳಿರುವುದು ಸಿನಿಮಾದಲ್ಲೇ
ಮಾನ್ಯ ಎಂಕಣ್ಣನವರೆ, ‘ಈ ಬಾರಿ ಯುಗಾದಿ ವಿಶೇಷಕ್ಕೊಂದು ವಿಡಂಬನಾತ್ಮಕ ಬರಹ ನೀಡಬೇಕೆಂದು ವಿನಂತಿಸುತ್ತಿರುವೆ’ ಎಂದು ಸಂಪಾದಕರಿಂದ ಬಂದ ಪತ್ರ ಓದಿದ ‘ಎಂಕ’ ಯಥಾಪ್ರಕಾರದ ಮಾಮೂಲಿ ಪತ್ರ ಎಂದುಕೊಳ್ಳುತ್ತ ಏನು ಬರೆಯಲೆಂದು ಚಿತ್ರಿಸುತ್ತಿದ್ದಾಗ ಶುಕ್ರವಾರದ ಸಿನಿಮಾ […]
ಅಮರ ತೇಜಃಪುಂಜಿ
ಓ ತಂದೆ! ನಿನಗಿದೋ ಈ ನೆಲದ ಕಣಕಣವು ಕಣ್ಣೀರ ಸುರಿಸುತಿದೆ, ಹಲುಬಿ ಹಂಬಲಿಸುತಿದೆ; ಭಾರತದ ಬೀರಸಿರಿ ನಿನ್ನೊಡನೆ ಸಾಗುತಿದೆ. ಸತ್ಯತೆಯ ಪಂಜಿಗಿದೆ ನಿನ್ನೆದೆಯ ಪೌರುಷವು, ವಿಶ್ವದೆದೆಯಾಳವನೆ ಕಡೆದುಂಡ ಕರುಣಾಳು ಪ್ರೇಮದಮಲಜ್ಯೋತಿ, ಜಗದ ಸುಂದರ ಮೂರ್ತಿ […]
ಇಷ್ಟಾರ್ ಎಂಬ ಬ್ಯಾಬಿಲೋನಿಯನ್ ಮಾತೃದೇವತೆಗೆ ಒಂದು ಹಾಡು
ಡೆನಿಸ್ ಲೆವೆರಟಾವ್ ಚಂದ್ರ ಹಂದಿ,ಅವಳು ಗುಟುರುವುದು ನನ್ನ ಗಂಟಲಿನಿಂದನನ್ನ ಒಳಗೆಲ್ಲ ಬೆಳಗುವ ಹಾಗೆ ಅವಳು ಹೊಳೆಯುತ್ತ ಹೋದಂತೆಅಂತರಾಳದ ನನ್ನ ಕೆಸರು ಸಂಭ್ರಮಿಸಿಕಾಂತಿಯುಕ್ತ ಬೆಳ್ಳಿಗುಳ್ಳೆಗಳಾಗಿ ಹೊಮ್ಮಿ ಚಿಮ್ಮುತ್ತವೆ ನಾನು ಗಂಡು ಹಂದಿಮತ್ತು ಕವಿಅವಳು ತನ್ನ ಧವಳ […]
