ಗೆಳೆಯರು

ಬಹುದೂರದೂರಿನ ಅಪರಿಚಿತ ಜಾತ್ರೆಯ ಪೀಪಿ ಬೊಂಬೈ ಮಿಠಾಯಿ ಮಕ್ಕಳಳು ತೇರು ಪುಗ್ಗೆ ಬ್ಯಾಂಡು ಬಿಸಿಲು ಗಳ ದಪ್ಪ ಉಸಿರಿನ ನಡುವೆ ಥಟ್ಟನೆ ಒಬ್ಬ ಪರಿಚಿತ ಸಿಕ್ಕ ಖುಷಿ-ಗೆಳೆಯರು ಇದ್ದಾಗ ಬೇಡ ಇಲ್ಲದಾಗ ಬೇಕು ಹೊಳಹು […]

ಬೋರು ಕಣೆ ಲೀನ

ಲೀನಾ- ಯುಗಾದಿ ಬಂತು ಗೊತ್ತ ಬೋರು ಕಣೆ ಮಾಮೂಲು ಬದಲಾವಣೆ ನಿನ್ನ ಕರಿ ತುರುಬು ಬಿಚ್ಚಿ ಹರಡಿದಂತೆ ಒದ್ದೆಯಾಯಿತು ಸಂಜೆ. ಹೌದೆ ಕತ್ತಲಿಗು ಬತ್ತಲಿಗು ನಂಟೆ ? ಓಹೋ ನಮಗಾಗೂ ಉಂಟಲ್ಲ ಬಯಲು ತಂಟೆ […]

ಪ್ರಾಯ

ಚಿಗುರು ಚಿವುಟಿದರೆ ಜಿನುಗುವ ಸೊಕ್ಕು ಪ್ರಕೃತಿಗೆ ಹಸಿರುಕ್ಕುವ ಗೀಳು ಖುಷಿ ಕನಸು ಋತು ಮನಸು ಕೆನೆಗಟ್ಟಿ ಮಧುರ ತುಷಾರದ ಗೊಂಬೆ ಕೇಕೆ ತಮಾಷೆ ಕೊನೆಮನೆಯ ಕಾಮಾಕ್ಷಿ ಕಾಮ ಉಲಿಯುವದಿಲ್ಲ ಕೆಟ್ಟ ಹುಡುಗಿಯ ದಿಟ್ಟ ತೊಗಲಿನ […]

ನನ್ನ ಕವಿತೆ

ಅಪರೂಪಕ್ಕೊಮ್ಮೆ ರೆಕ್ಕೆ ಬಿಚ್ಚುವ ಬದುಕು ಹುಚ್ಚೀ ನನ್ನ ಕವಿತೆ ಅದು ಭರ್ಜರಿ ಬಿರಿಯಾನಿ ಗಮ್ಮತ್ತು ಚಿಕನ್ ತಂದೂರಿಗಳ ಗಿಜಿ ಗಿಜಿ ಘಮದಲ್ಲಿ ನೊರೆಯಾರುವ ಮೊದಲೇ ತೇಜಿ ತೇಗಿದ್ದು ಅಕ್ಷರಗಳ ಬಸಿರಿಗೆ ಕಾವಿಕ್ಕಿ ಅಶ್ಲೀಲ ಚಕ್ಷು […]

ಮಳೆಗಾಳಿ

ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ *****

ಆತಂಕ

ಒಮ್ಮೆಗೇ ಆಗಸ ಕಚ್ಚಿದ ಗುಡುಗುಡು ಮುಗಿಲು ಫಳ್ಳನೆ ಮಿಂಚುವ ಮಿಂಚು ಪ್ರಬುದ್ಧ ಮಳೆ ತೊನೆಯುತ್ತ ಇಳೆಗೆ ಇಳಿಯುವ ಕುರುಹು ನೆಲದ ಮೈತುಂಬ ಸಂಭ್ರಮ ಕಾತರ. ಎಂದಿನದೇ ತೊಯ್ಯುವಿಕೆ ಮರಳಿ ಸುರಿಯುವದೆಂದು ಬಿಸಿಲು ಕಾರುವ ಹಸಿರು […]