೧ ದಿನದಿನವು ಮೂಡಣದ ಬಾನ ಕರೆಯಂಚಿನಲಿ ಚೆಂಬೆಳಕು ಉಬ್ಬರಂಬರಿಯುತಿಹುದು; ನೂರು ಕಾರಂಜಿಗಳು ತೆಕ್ಕನೆಯೆ ಪುಟಿದಂತೆ ಲೋಕಲೋಕಂಗಳನು ತೊಳೆಯುತಿಹುದು. ೨ ಬೊಗಸಗಂಗಳ ತೆರೆದು ಮೊಗೆಮೊಗೆದು ಕುಡಿದರೂ ಈ ಪುರಾತನ ದಾಹ ತೀರದಲ್ಲಾ! ಏನೊ ಅಸಮಾಧಾನ ಹೃದಯಾಂತರಾಳದಲಿ […]
ವರ್ಗ: ಕವನ
ನಲ್ಮೆಯ ಕೃಷ್ಣನಿಗೆ
ಪೋಗದಿರೆಲೊ ರಂಗಾ ಬಾಗಿಲಿಂದಾಚೆಗೆ….. ಥುತ್ ನಿನ್ಮನೆ ಹಾಳಾಗಾ ಮುಚ್ಕೊಳೋ ಮೊದಲು ಎಸೆಯೋ ಕೊಳಲು ಕಿತ್ತೆಸೆ ಹರಿ ಆ ನವಿಲುಗರಿ ಹೋಗು ಹಾಳಾಗೇ ಹೋಗು (ಉದ್ವೇಗಕ್ಕೆ ಕ್ಷಮೆಯಿರಲಿ ಕೃಷ್ಣಾ) ಯಾಕೆ ಗೊತ್ತಾ? ನಾನು ಕೇವಲ ನರಕುನ್ನಿ […]
ನಿಯಮೋಲ್ಲಂಘನ
೧ ‘ಸುಯ್’ ಎಂದು ನಿಡುಸುಯ್ದು ಹುಯ್ಯಲಿಡುತ್ತಿದೆ ಗಾಳಿ ಜಗದ ಆರ್‍ದ್ರತೆಯನ್ನ ಹೀರಿ ಹೀರಿ! ಮೂಡಗಾಳಿಗೆ ಬಾನ ಮೊಗ ಒಡೆದು ಬಿಳಿ ಬೂದಿ ಬಳಿದಂತೆ ತೋರುತ್ತಿದ ಮೇರೆ ಮೀರಿ. ೨ ತರು ಲತಾದಿಗಳಲ್ಲಿ ಚಿಗುರಿಲ್ಲ ಹೊಗರಿಲ್ಲ […]
ಶ್ರಾವಣದ ಲಾವಣ್ಯ
೧ ಬಾನ ಸಾಣಿಗೆ ಹಿಟ್ಟು ಸಣ್ಣಿಸಿ- ದಂತೆ ಜಿನುಗಿದೆ ಸೋನೆಯು; ಬಿಳಿಯ ತೆಳು ಜವನಿಕೆಯನೆಳೆದಿಹ ಇಳೆಯು ಸುಂದರ ಮೇಣೆಯು! ಹುಲ್ಲು ಹಾಸಿದೆ, ಹೂವು ಸೂಸಿದೆ ಗಾಳಿ ಮೂಸಿದೆ ಕಂಪನು ಶ್ರಾವಣದ ಲಾವಣ್ಯ ಕುಣಿದಿದೆ ಮಳೆಯು […]
ಸೃಷ್ಟಿ ನೋಂತು ನಿಂತಿದೆ!
೧ ಗಿಡದ ರೆಂಬೆ ಕೊಂಬೆಗಳಲಿ ಚಿಗುರು ಕಣ್ಣ ತೆರೆದಿದೆ ಎಲ್ಲಿ ನೋಡಿದಲ್ಲಿ ಚೆಲುವು ಗೆಲ್ಲುಗಂಬ ನಿಲಿಸಿದೆ! ಹೊಸತು ಆಸೆ ಮೂಡಿದೆ ಹರುಷ ಲಾಸ್ಯವಾಡಿದೆ ಓ! ವಸಂತ ನಿನಗನಂತ ಆಲಿಂಗನ ಸಂದಿದೆ ಸೃಷ್ಟಿ ನೋಂತು ನಿಂದಿದೆ! […]
ಬಂತು ಭಾರತ ಹುಣ್ಣಿವೆ!
ಬಂತು ಭಾರತ ಹುಣ್ಣಿವೆ! ತೆರೆದು ಲೋಕದ ಕಣ್ಣೆವೆ!! ಕನಸು ಮನಸೂ ಹೊಂದಿವೆ ಜೇನು ಬಟ್ಟಲು ತಂದಿವೆ ಇಂಥ ಸಮಯದಿ ಬಂಧವೆ? ಏನು ಗೈದರು ಚೆಂದವೆ! ಬಾನಿನುದ್ದಕು ಭೂಮಿಯಗಲಕು ಎಲ್ಲಿಯೂ ಸ್ವಚ್ಛಂದವೆ! …..ಬಂತು! ಗಾಳಿ ತಣ್ಣನೆ […]
