ರಾಗ — ಕಾಂಬೋದಿ ತಾಳ — ಝಂಪೆ ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ | ಅಜಸುರೇಂದ್ರಾದಿಗಳು ಆದಿವಂದಿತಪಾದ ||ಪ|| ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ | ಕಾಕುಶಕಟನ ತುಳಿದು ಕೊಂದ ಪಾದ || […]
ತಿಂಗಳು: ಮೇ 2001
ಭಕ್ತಿಯಿಲ್ಲದ ನರಗೆ ಮುಕ್ತಿಯಹುದೆ?
ರಾಗ — ಕಾಂಬೋದಿ ತಾಳ — ಝಂಪೆ ಬಾಯಿ ನಾರಿದ ಮೇಲೆ ಏಕಾಂತವೆ | ತಾಯಿ ತೀರಿದ ಮೇಲೆ ತವರಾಸೆಯೆ? ||ಪ|| ಕಣ್ಣು ಕೆಟ್ಟಮೇಲೆ ಕಡುರೂಪ ಚೆಲ್ವಿಕೆಯೆ | ಬಣ್ಣಗುಂದಿದ ಮೇಲೆ ಬಹುಮಾನವೆ || […]
ಬಂದೆವಯ್ಯ ಗೋವಿಂದಶೆಟ್ಟಿ
ರಾಗ — ಪೂರ್ವಿತಾಳ — ಅಟ್ಟ ಬಂದೆವಯ್ಯ ಗೋವಿಂದಶೆಟ್ಟಿ ||ಪ||ಇಂದು ನಿಮ್ಮ ಹರಿವಾಣ ಪ್ರಸಾದವುಂಟೆನಲಾಗಿ ||ಅ.ಪ|| ಆಪ್ಪಾಲು ಅತಿರಸ ತುಪ್ಪ ಕಜ್ಜಾಯವು |ಒಪ್ಪುವ ಯಾಲಕ್ಕಿ ಶುಂಠಿ ಮೆಣಸು ||ಅಪ್ಪರೂಪವಾದ ಕಜ್ಜಾಯರಾಶಿಗಳ |ಛಪ್ಪನ್ನದೇಶಕೆ ಮಾರುವ ಶೆಟ್ಟಿ […]
ನೀ ಮಾಯೆಯೊಳಗೊ
ರಾಗ — ಕಾಂಬೋದಿ ತಾಳ — ಝಂಪೆ ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ |ನೀ ದೇಹದೊಳಗೊ ನಿನ್ನೊಳು ದೇಹವೊ ||ಪ|| ಬಯಲು ಆಲಯದೊಳಗೊ ಆಲಯದೊಳಗೆ ಬಯಲೊ |ಬಯಲು ಆಲಯವೆರಡು ನಯನದೊಳಗೊ ||ನಯನ ಬುದ್ಧಿಯ ಒಳಗೊ […]
ನಾನು ನೀನು ಎನ್ನದಿರೋ
ರಾಗ — ಭೈರವಿ ತಾಳ — ರೂಪಕ ನಾನು ನೀನು ಎನ್ನದಿರೋ ಹೀನಮಾನವ |ಜ್ಞಾನದಿಂದ ನಿನ್ನ ನೀನೆ ತಿಳಿದುನೋಡೆಲೊ – ಪ್ರಾಣಿ ||ಪ|| ಹೆಣ್ಣು – ಹೊನ್ನು – ಮಣ್ಣು ಮೂರು ನಿನ್ನವೇನೆಲೊ |ಅನ್ನದಿಂದ […]
ದಾಸನಾಗಬೇಕು
ರಾಗ — ಕಲ್ಯಾಣಿ ತಾಳ — ಅಟ್ಟ ದಾಸನಾಗಬೇಕು – ಸಾದಾಶಿವನ |ದಾಸನಾಗಬೇಕು ||ಪ|| ದಾಸನಾಗಬೇಕು ಕ್ಲೇಶಪಂಚಕವಳಿದು |ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ.ಪ.|| ಮನದ ಕಲ್ಮಷ ಕಳೆದು ಶ್ರೀಮಹೇ – |ಶನ ಮಹಿಮೆಯ […]
ತೊರೆದು ಜೀವಿಸಬಹುದೆ ಹರಿ
ರಾಗ — ಕೇದಾರಗೌಳ ತಾಳ — ಝಂಪೆ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ | ಮರೆಯ ಮಾತೇಕಿನ್ನು ಅರಿತು ಪೇಳುವೆನು ||ಪ|| ತಾಯಿ – ತಂದೆಯ ಬಿಟ್ಟು ತಪವ ಮಾಡಲುಬಹುದು | ದಾಯಾದಿ […]
ತಲ್ಲಣಿಸದಿರು ಕಂಡೆಯಾ ತಾಳು ಮನವೆ
ರಾಗ — ಕಾಂಬೋದಿ ತಾಳ — ಝಂಪೆ ತಲ್ಲಣಿಸದಿರು ಕಂಡೆಯಾ ತಾಳು ಮನವೆ – ಸ್ವಾಮಿ | ನಿಲ್ಲದಲೆ ರಕ್ಷಿಸುವ ಸಂದೇಹ ಬೇಡ ||ಪ|| ಬೆಟದಾ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ | ಕಟ್ಟೆಕಟ್ಟುತ ನೀರ […]
ಕುಲದ ನೆಲೆಯನೇನಾದರೂ ಬಲ್ಲಿರಾ?
ರಾಗ — ಪಂತುವರಾಳಿ ತಾಳ — ಅಟ್ಟ ಕುಲ ಕುಲ ಕುಲವೆಂದು ಹೋರಾಡದಿರಿ ನಿಮ್ಮ |ಕುಲದ ನೆಲೆಯನೇನಾದರೂ ಬಲ್ಲಿರಾ? ||ಪ|| ಹುಟ್ಟದಾ ಯೋನಿಗಳಿಲ್ಲ ಮೆಟ್ಟದಾ ಭೂಮಿಗಳಿಲ್ಲ |ಅಟ್ಟು ಉಣ್ಣದ ವಸ್ತುಗಳಿಲ್ಲವೊ ||ಗುಟ್ಟು ಕಾಣಿಸಿಬಂತು ಹಿರಿದೇನು […]
ಕುಲ ಕುಲ ಕುಲವೆನ್ನುತಿಹರೊ
ರಾಗ — ರೇಗುಪ್ತಿ ತಾಳ — ಅಟ್ಟ ಕುಲ ಕುಲ ಕುಲವೆನ್ನುತಿಹರೊ |ಕುಲವಾವುದು ಸತ್ಯ ಸುಜನರಿಗೆ ||ಪ|| ಕೆಸರೊಳು ತಾವರೆ ಪುಟ್ಟಲು ಅದ ತಂದು |ಕುಸುಮನಾಭನಿಗೆ ಅರ್ಪಿಸರೇನಯ್ಯ? ||ಪಶುವಿನ ಮಾಂಸದೊಳುತ್ಪತ್ತಿ ಕ್ಷೀರವ |ವಸುಧೆಯೊಳಗೆ ಭೂಸುರರುಣ್ಣರೇನಯ್ಯ […]