ಯಾರವನು ಒಬ್ಬೊಂಟಿ ಎಚ್ಚರಿರುವವನು
ಮಲಗಿ ನಿದ್ರಿಸುತಿರುವ ಈ ಪೃಥ್ವಿಯಲ್ಲಿ?
ನಿಶ್ಯಬ್ದ ಎಲೆಗಳಲಿ ತೂಕಡಿಪ ಗಾಳಿಯಲ್ಲಿ?
ಮೌನ ಮಲಗಿದೆ ಹಕ್ಕಿಗೂಡಿನಲಿ
ಹೂವು ಮೊಗ್ಗುಗಳೆದೆಯ ಗುಪ್ತಕೇಂದ್ರದಲಿ?
ಯಾರವನು ಏಕಾಕಿ ಎಚ್ಚರಿರುವವನು?
ಇರುಳಿನೆದೆಯನು ತುಡಿಯುತಿರುವ ತಾರಾಗಣದಿ
ನನ್ನ ಇರವಿನ ನೋವಿನಾಳದಲ್ಲಿ
ಯಾರವನು ಒಬ್ಬೊಂಟಿ ಎಚ್ಚರಿರುವವನು?”
*****
ರವೀಂದ್ರರ `Crossing’: 15
