ಈ ತಿಂಗಳ ಕೊನೆಯ ದಿನ ಜಲಪ್ರಳಯ.. ಗೊತ್ತಿರ್‍ಲಿ..

ಸುದ್ದಿ ಖಚಿತವಾಗುತ್ತಿದ್ದಂತೆ ಧರೆಯ ಮೇಲೆ ವಾಸಿಸುತ್ತಿರೋ ಎಂಟನ್ಯೂರು ಚಿಲ್ಲರೆ ಕೋಟಿ ಜನಸಮೂಹ ಸ್ಥಂಭೀಭೂತವಾಯಿತು.. ಏನೇನು ಮಾಡಬಹುದು ಈ ದುರಂತದಿಂದ ತಪ್ಪಿಸಿಕೊಳ್ಳಲಿಕ್ಕೆ ಅಂತ ಯೋಚಿಸುವಷ್ಟರಲ್ಲೇ ಶುರುವಾಯಿತು.. ಕುಂಭದ್ರೋಣ ಮಳೆ. ಬಿಟ್ಟೂ ಬಿಡದೆ ಸುರೀತು.. ಸುರೀತು.. ಮಳೆ, […]

ಇಲ್ಲ.. ನಾನು ಮಾತಾಡಲೇ ಬೇಕಿದೆ- ಸತ್ತವಳು.

ಅಂದು ಅಮಾವಾಸ್ಯೆಯ ಅರ್ಧರಾತ್ರಿಯ ಪೂರ್ಣ ಕತ್ತಲು. ಅದು ಆ ಊರಿನ ಶ್ಮಶಾಣ. ನಿಶ್ಯಬ್ದವೇ ವಿಕಾರ ಎನ್ನುವಂತೆ ಶ್ಮಶಾನಮೌನದ ಏಕಾಂಗಿತನದಿಂದ ಬೇಸತ್ತ ಯಾವುದೋ ಅತೃಪ್ತ ಧ್ವನಿಯೊಂದು ಭೀಕರತೆಯಿಂದ ಸಿಡಿದಂತೆ.. ಅಲ್ಲಲ್ಲಿ ಏಳುತ್ತಿರುವ ಸುಳಿಗಾಳಿಯ ಮಧ್ಯೆ ಮೌನವನ್ನು […]

ದೇಶಪ್ರೇಮದ ಹೆಸರಿನಲ್ಲಿ..

ಆಗಷ್ಟೇ ನನ್ನ ’ಮಠ’ ಚಿತ್ರ ರಿಲೀಸ್ ಆಗಿತ್ತು.. ಪತ್ರಿಕೆಗಳು ಚೆನ್ನಾಗಿ ಬರೆದವು.. ಒಂದು ವಿಶೇಷ ಚಿತ್ರವೆಂಬ ಹೊಗಳಿಕೆಗಳೂ ಚಿತ್ರಕ್ಕೆ ಸಿಕ್ತು. ತುಂಬಾ ಕೆಲಸದ ದಿನಗಳವು. ಕನಡದ ಮೂರು ಮುಖ್ಯ ಕಮರ್ಷಿಯಲ್ ಚಿತ್ರ ನಿರ್ಮಾಪಕರುಗಳಿಂದ ಚಿತ್ರ […]

ಅವನ ಪ್ರೇಮದ ರಾಕ್ಷಸ ಪಟ್ಟುಗಳಿದ್ದಾಗ್ಯೂ ನಾನು ಅಂದು ಅರಳಿರಲಿಲ್ಲ..

(ಇಲ್ಲಿಯವರೆಗೆ… ಅವನನ್ನೇ ನಾನು ನನ್ನ ಹುಡುಗನನ್ನಾಗಿ ಆರಿಸಿಕೂಂಡಿದ್ದಕ್ಕೆ ನನ್ನದೇ ಕಾರಣವಿದೆ.. ಎಷ್ಟೆಲ್ಲಾ ಓಡಾಡಿದರೂ, ಪ್ರೇಮದಾಟ ಕಣ್ಣುಗಳಲ್ಲಿ ನಡೆದಿದ್ದರೂ ಒಮ್ಮೆಯೂ ಆತ ನನ್ನನ್ನು ತನ್ನ ರೂಮಿಗೆ ಕರೆದಿರಲ್ಲಿಲ್ಲ.. ಸಿನೆಮಾಗಳಿಗೆ ಹೋದಾಗ ಕತ್ತಲಲ್ಲಿ ಮೈ ತಾಕಿಸಿರಲಿಲ್ಲ..ಇಷ್ಟೋಂದು ಮಾತಾಡುವ […]

ಅವಳಂಥ ಸುಂದರಿ ಪಕ್ಕ ಇದ್ದಾಗ ಅಂಥ ಸೋನೇ ಮಳೆಯಲ್ಲೂ ಬೆವೆತಿದ್ದೆ…

ಊರಿನ ಮುಖ್ಯ ರಸ್ತೆ. ತಾಯಿ ಚಾಮುಂಡೇಶ್ವರಿಯ ಸಾಲಂಕೃತ ವಿಗ್ರಹವನ್ನು ಹೊತ್ತು ಬರುತ್ತಿದೆ ಸಿಂಗರಿಸಿದ ಆನೆ. ಹದಿನಾರು ಬ್ರಾಹ್ಮಣರ ಗಟ್ಟಿ ಕಂಠದ ಲಯಬದ್ಧವಾದ.. ಮಂತ್ರಘೋಷಗಳ ಮೊರೆತ ಕಿವಿ ತುಂಬುತ್ತಿವೆ. ಮನೆಯ ತಾರಸಿಗಳ ಮೇಲೆ. ಅಂಗಡಿ ಸಾಲಿನ […]

ಅಲಬಾಮಾದ ಅಪಾನವಾಯು

….ಫಟ್ಟೆಂದು ಹೊಡೆದಿತ್ತು ವಾಸನೆ! ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಅಲಬಾಮಾ ಎಂದು ಬರೆಸಿಕೊಳ್ಳುವ ಮತ್ತು ಅಲಬ್ಯಾಮಾ ಎಂದು ಓದಿಸಿಕೊಳ್ಳುವ ರಾಜ್ಯದ ಪೂರ್ವಕ್ಕಿರೋ ಬಾರ್ಬೌರ್ ಕೌಂಟಿಯ ಕ್ಲೇಟನ್ ಎಂಬ ಊರಲ್ಲಿರೋ ಆಸ್ಪತ್ರೆಯಲ್ಲಿ. ಅನಿತಾ ಎಂದು ಬರೆಸಿಕೊಳ್ಳುವ ಮತ್ತು […]

ವಿಚ್ಛಿನ್ನ

ತಾನು ಮತ್ತೆ ಒಂಟಿಯಾಗಿರಬಾರದೇಕೆ ಎನ್ನುವ ಯೋಚನೆ ರವಿಗೆ ಬಂದದ್ದು ಇದು ಮೊದಲನೆಯ ಬಾರಿಯೇನಾಗಿರಲಿಲ್ಲ. ಇತ್ತೀಚೆಗೆ ಗೀತ ಹತ್ತಿರವಿಲ್ಲದಿದ್ದಾಗ ಪ್ರತಿಬಾರಿ ಹಾಗೆಯೇ ಆಲೋಚಿಸುವಂತಾಗುತ್ತಿತ್ತು. ಇರಬಹುದು ಎನ್ನುವ ಧೈರ್ಯಕ್ಕಿಂತ ಏಕೆ ಇರಬೇಕು ಎನ್ನುವುದಕ್ಕೆ ತರ್ಕಕ್ಕೆ ನಿಲ್ಲುವ ಕಾರಣಗಳೇನಾದರೂ […]

ಡಾ|| ವಿನಾಯಕ ಜೋಷಿಯ ಮುನ್ನೂರ ಅರವತ್ತೈದನೆ ಒಂದು ವರ್ಷ

ಬಳ್ಳಾರಿ ಅನ್ನೋ ಊರಿನಲ್ಲಿ ಅಂತೂ ಇಂತೂ ಐದು ವರ್ಷ ಮುಗಿಸಿದ್ದ ಡಾ.ವಿನಾಯಕ ಜೋಷಿ, ಎಂ. ಬಿ.ಬಿ.ಎಸ್. ಹೆಸರಿನ ಹಿಂದೆ ಒಂದು,ಮತ್ತು ಮುಂದೆ ನಾಲ್ಕಕ್ಷರ ಹಾಕಿಕೊಳ್ಳಲು ತಲಾ ಒಂಭತ್ತು ತಿಂಗಳು ಬೇಕಾಗಿತ್ತು. ತನ್ನ ಹೆಸರನ್ನು ಒಂದು […]

ಯೋಗಣ್ಣ, ಕಾರ್ಡಿಯಾಲಜಿ, ವಿಷ್ಣುಸಹಸ್ರನಾಮ ಇತ್ಯಾದಿ

ಮೈ ಮೇಲೆ ಸಹಸ್ರ ಟನ್ನಿನ ಟ್ರಕ್ಕು ಹೋದರೂ ಅರಿಯದೆ ಸತ್ತ ಹಾವಿನಂತೆ ಬಿದ್ದಿರುವ ನುಣುಪಾದ ಕಪ್ಪು ರಸ್ತೆ, ಎಪ್ಪತ್ತು ಮೈಲಿ ವೇಗದಲ್ಲಿ ಹೋದರೂ ಮೈ ಅಲುಗದ ಮರ್ಸೀಡಿಸ್, ಅಕ್ಕಪಕ್ಕ ಒಣಗಿದ ಮರಗಿಡಗಳ ಮೇಲೆ ನಿಲ್ಲಲೂ […]