ಏಳೆನ್ನ ಮನದನ್ನೆ, ಏಳು ಮುದ್ದಿನ ಕನ್ನೆ ಏಳು ಮಂಗಳದಾಯಿ ಉಷೆಯ ಗೆಳತಿ- ಏಳು ಮುತ್ತಿನ ಚೆಂಡೆ, ಏಳು ಮಲ್ಲಿಗೆ ದಂಡೆ ಏಳು ಬಣ್ಣದ ಬಿಲ್ಲೆ ಮಾಟಗಾತಿ! ಏಳೆನ್ನ ಕಲ್ಯಾಣಿ, ಏಳು ಭಾವದ ರಾಣಿ ನೋಡು […]
ಟ್ಯಾಗ್: Chennaveera Kanavi
ಜೀವಜೀವಾಳದಲಿ ಕೂಡಿದವಳು
೧ ಸಣ್ಣ ಮನೆಯನು ತುಂಬಿ ನುಣ್ಣಗಿನ ದನಿಯಲ್ಲಿ ಬಣ್ಣವೇರಿದ ಹೆಣ್ಣು ಹಾಡುತಿಹಳು. ಕೈತುಂಬ ಹಸಿರು ಬಳೆ ಹಣೆಗೆ ಕುಂಕುಮ ಚಂದ್ರ ಜಡೆತುಂಬ ಮಲ್ಲಿಗೆಯ ಮುಡಿದಿರುವಳು. ೨ ಹೆಜ್ಜೆ ಹೆಜ್ಜೆಗಳಲ್ಲಿ ನವಿಲನಾಡಿಸುತಿಹಳು ಮಾತು ಮಾತಿಗೆ ಮುತ್ತು […]
ನಲುಮೆಯ ಕರೆ
ಅಲ್ಲೆ ಇರು, ಇಲ್ಲೆ ಇರು, ಎಲ್ಲೊ ಎಂತಾದರಿರು ನನ್ನ ನಲುಮೆಯ ಕರೆಗೆ ಓಗೊಡುತಿರು; ಒಮ್ಮೆ ಉದ್ವೇಗದಲಿ, ಒಮ್ಮೆ ಸಂತೃಪ್ತಿಯಲಿ ‘ಓ’ ಎಂಬ ಸವಿದನಿಯ ಸೋಂಕಿಸುತಿರು. ದೂರದಿಂ ತೇನೆಯುಲಿ ಸಾರುವಂತೆ ಮರಳಿ ಬೆಳುದಿಂಗಳಲಿ ಕರಗುವಂತೆ! ಆವ […]
ನನ್ನ ಹೊಂದಾವರೆ
ನನ್ನ ಕನಸಿನ ಹೊನ್ನ ತಾವರೆಯ ಹೂವರಳಿ ಎನ್ನ ಬೊಗಸೆಯೊಳಿಂದು ಕಂಗೊಳಿಸಿದೆ; ಎನ್ನಿನಿಯ ಭಾವಗಳ ಮಧುರ ಮಕರಂದವೂ ಮೃದುಲ ದಲದಲಗಳಲಿ ಪರಿಮಳಿಸಿದೆ! ಮಾನಸ ಸರೋವರದ ಶಾಂತಿಸೌಖ್ಯಾಭೋಗ ಸಕಲ ಸೌಂದರ್ಯದೀ ಮೊಗ್ಗೆಯಾಗಿ ನೇಹ ನೇಸರನೊಂದು ಮೀಸಲದ ಕಿರಣದೆಡೆ […]
ಸ್ವರ್ಣಪಕ್ಷಿ
ಬ್ರಹ್ಮಾಂಡದ ಬಿರುಮೊಟ್ಟೆಯನೊಡೆದು ಪಿಂಡಾಂಡದ ತನಿಗೆಂಡವ ಪಡೆದು ಇರುಳಿನ ಕಬ್ಬಿಣ ಪಂಜರ ಮುರಿದು ಹಾರಿತು ಸ್ವರ್ಣಾರುಣ ಪಕ್ಷಿ! ಮೂಡಣ ಬಾನಿನ ಉಷೆ ಸಾಕ್ಷಿ! ಮೇಘಮಂಡಲದ ಬಾಗಿಲ ತೆರೆದು ಜಗದಗಲವ ಮುಗಿಲಗಲವನಳೆದು ತಾರಾಲೋಕದ ಕಣ್ಣನು ಸೆಳೆದು ಸಾರಿತು […]
ಮತ್ತೊಂದು ಪುಟ್ಟ ಹಕ್ಕಿಗೆ
ಎಲ್ಲಿಂದ ಬಂದೆ ನೀ ನನ್ನ ಮುದ್ದಿನ ಹಕ್ಕಿ? ಹದುಳವೆನ್ನುವ ಮೊದಲೆ ಹಾರಬೇಡ; ಒಂದು ಚಣವಾದರೂ ನನ್ನ ಬಳಿಯಲಿ ಕುಳಿತು ಕುಶಲ ವಾರ್ತೆಯ ನಾಲ್ಕು ಮಾತನಾಡ. ಎಂದಾದರೊಂದು ದಿನ ಅಂದಚೆಂದಕ್ಕೆ ಬರುವೆ ನೋಡನೋಡುತ ಪಕ್ಕ ಬೀಸಿ […]
ಒಂದು ಪುಟ್ಟ ಹಕ್ಕಿಗೆ
೧ ಚಿಟ್ಟ, ಗುಬ್ಬಿ ಪುಟ್ಟಗುಬ್ಬಿ ಮುಳ್ಳು ಬೇಲಿಯನ್ನು ತಬ್ಬಿ ಚೀರಿ ಚೀರಿ ಗಂಟಲುಬ್ಬಿ – ಒಡೆಯುವಂತೆ ಹಾಡಿತು; ಕೇಳಲಿಲ್ಲ ಜಗದ ಕಿವಿ ನೋಡಲಿಲ್ಲ ಬಾನ ರವಿ ನೀನಾದರು ಬಾರೊ ಕವಿ ಎಂದು ಅಂಗಲಾಚಿತು; ಹಗಲು […]
