ನಮ್ಮ ತೆಂಗಿನ ಮರ ಒಳಿತಿನ ತಾಯಿ ಮೇಲ್ನೋಟಕ್ಕೆ ಬಹಳ ಸಾದಾಸೀದಾ – ಆದರದ ಕಲ್ಪ ವೃಕ್ಷ. ಜಪಾನಿಗಳ ಕುಂಡದ ಬೋನ್ಸಾಯಿ ಎರೆಯುತ್ತದೆ ನಿಜ, ಬೆರಗು ವಿನೋದ- ಆದರದು ಅಲ್ಪ ವೃಕ್ಷ. *****
ಟ್ಯಾಗ್: ಮಿಂಚಿಕೆಗಳು
ಹಿತ್ತಲಿನ ಗಿಡ
ಹಿತ್ತಲಿನ ಹಿಪ್ಪೆ ನೇರಳೆಯ ಗಿಡ ಅದೆಷ್ಟು ಸೌಮ್ಯ? ಸ್ವಂತ ಮಹಿಮೆಯನ್ನರಿಯದ ಮುಗ್ಧ ತಾನು; ತಿಳಿದಿಲ್ಲವದು ತನ್ನ ಎಲೆಯ ಮರೆಯಲ್ಲಿ ಅಡಗಿರುವ ನವಿರು ವಸ್ತ್ರದಸಂಖ್ಯ ಥಾನು ಥಾನು. *****
ಗುಣದ ಗರಿಮೆ
ಹಂಡೆ ಹಾಲಿಗೆ ತೊಟ್ಟು ಹುಳಿ; ಬಂಡೆಗೆ ಉಳಿ; ಭಾರೀ ಬಂಗಲೆಗೆ ಹಿಡಿಯಷ್ಟು ಬೀಗ, ಅಂಕುಶದೆದುರು ಜೀತದಾಳು ಸಲಗ. ಪಟ್ಟಣಗಳನ್ನು ಹುಟ್ಟಳಿಸುವ ತಾಕತ್ತಿದೆ ಪರಮಾಣು ಕಣದಲ್ಲಿ; ಹೆಚ್ಚಳವಿರುವುದು ಆಕಾರ, ಗಾತ್ರದಲ್ಲಿ ಅಲ್ಲ, ಆಂತರಿಕ ಗುಣದಲ್ಲಿ. *****
