ತಿರುಕನಾಗಿ ತಿರುಕನಾಗಿಅಥವಾ ಮಾತು ಮಾತು ಮಾತುಗಳಶಬ್ದ ಗುಮ್ಮಟವಾದ ಈ ಪ್ರಪಂಚಕವಿಗೆ ತಿಪ್ಪೆಗುಂಡಿಯಂತೆ ಎನ್ನುವುದಾದರೆ ತಲೆಕೆದರಿದ ತಿರುಕಿಯಂತೆ ಕವಿಈ ತಿಪ್ಪೆಯಲ್ಲಿ ಮರೆತು ಬಿಸಾಕಿದಹರಳು, ಗುಲಗಂಜಿ, ಹೇರ್‌ಪಿನ್ನು, ಬ್ಲೇಡುಸರದ ಹುಕ್ಕು, ಅದೃಷ್ಟವಿದ್ದರೆ ನಿರೀಕ್ಷಿಸದೇ ಇದ್ದಮಗುವಿನ ಬೆಳ್ಳಿ ಒಳಲೆ […]
ವರ್ಗ: ಪದ್ಯ
ತಿರುಮಲೇಶ, ರಿಲ್ಕ್, ಪರಮಹಂಸ ಮತ್ತು ಬೆಕ್ಕು
ತಿರುಮಲೇಶಗೆ ಬೆಕ್ಕು ಧುತ್ತೆಂದು ಎದುರಾಗಿಹುರಿನಿಂತ ಛಲದಲ್ಲಿ ದುರುಗುಟ್ಟಿತು,ಕ್ಷಣ ಮಾತ್ರ ಚಂಚಲಿಸಿ ಕವಿಯ ಹಠ ಕೊನೆಯಲ್ಲಿಗೆದ್ದ ಭಮೆ ಕಲಕೊಂಡು ಕವಿಯಾಯ್ತುಅನ್ಯಕೆ ಎಡೆಯಿರುವ ವಿನಯವಾಯ್ತು ಎಲ್ಲ ತಿಳಿದೇ ತೀರಬೇಕೆಂಬ ಫಾಸ್ಟ್ ಛಲದಐರೋಪ್ಯ ರಿಲ್ಕನೂ ಕಂಡದ್ದು ಬೆಕ್ಕೇತನ್ನಷ್ಟೆ ತಾನಾಗಿ […]
ರಿಲ್ಕ್ ಕಂಡ (ಕಾಣದ) ಬೆಕ್ಕು
ಪ್ರೇತ ಅಗೋಚರ, ಅಗಮ್ಯವಲ್ಲಕಲ್ಪನೆಗಾದರೂ ಸಿಗತ್ತೆ ಅದುಆದರೆ ಈ ಕಾಳ ಬೆಕ್ಕಿನ ನುಣುಪಾದ ಮೈಯಲ್ಲಿಎಷ್ಟೇ ನಿಟ್ಟಿಸಿ ನೋಡು, ದೃಷ್ಟಿಕುರುಹಿಲ್ಲದಂತೆ ಕುಸಿದು ಬಿಡುವುದು. ಕತ್ತಲೆಯಲ್ಲಿ ವೃಥಾ ಅಲೆಯುವ ಹುಚ್ಚುತಲೆಹಚ್ಚಿ ಚಚ್ಚಿ ತನ್ನ ರೋಷ ಕಳಕೊಂಡಂತೆಸುಸ್ತಲ್ಲಿ ಸಾಂತ್ವನ, ನಿನಗೆ. […]
ಶಬ್ದದ ಲಜ್ಜೆ ನೋಡಾ
ಹೇಳಿದರ ಕತಿಗಿತಿ ಅಂದೀರಿ ದೇವರೂಶಾಸ್ತ್ರ ಸಂಪದನೀತ, ನಮ್ಮ ನಿಮ್ಮಂಥಪೋಸ್ಟಿನ ವಿಳಾಸವಂತ, ಮತಿವಂತ ಹಾಗಂತಅರಸೀಕನಲ್ಲ, ಕಿಟ್ಟಲ್‌ಕೋಶವಿನಾ ಹಳಗನ್ನಡಪದಾರ್ಥ ಮಾಡಬಲ್ಲ; ಹೊಸೆಯಬಲ್ಲಚುಟುಕಗಿಟಕ ಮುಕ್ತಕ, ಹೇಳಬಲ್ಲ ಸಂಸ್ಕೃತದಲ್ಲಿಮಾರುದ್ದದ ಸಮಸ್ತಪದಗಳ ಪ್ರಾಸಾನುಪ್ರಾಸಗಳಪನ್ನು ಜೋಕುಗಳ ಕಟ್ಟಬಲ್ಲ.ಹೇಳಿದರ ಕತೆಗಿತಿ ಅಂದೀರ ದೇವರೂಕಿವಿಗೊಟ್ಟು ಕೇಳಿರಿ […]
ಮಿಲಾನ್ ಕುಂಡೇರ ಹೇಳಿದ ಕಥೆ
ಸಾವಿರದ ಒಂಬೈನೂರ ನಲವತ್ತೆಂಟನೇ ಇಸವಿಯಲ್ಲಿ ಫೆಬ್ರುವರು ತಿಂಗಳಲ್ಲಿ, ಚಳಿಗಾಲದಲ್ಲಿ ಯೂರೋಪ್ ಖಂಡದಲ್ಲಿ, ಇದು ನಡೆದ ಸ್ಥಳ: ಪ್ರಾಗ್, ಚೆಕೋಸ್ಲವೇಕಿಯಾದ ರಾಜಧಾನಿ ಪ್ರಾಗ್. ಲಕ್ಷಾಂತರ ಜನ ನೆರೆದಿದಾರೆ, ನೆರದ ಜನರ ಎದುರು ನಿಂತಿದಾನೆ ಗಾಟ್‌ವಾಲ್ದ್ ಶೂರ […]
ಸೋವಿಯತ್ ರಷ್ಯಾ
ಕೊಳೆಯಬೇಕಾದ ಲೆನಿನ್ ಹೆಣವನ್ನುಕೊಳೆಯದಂತೆ ಕಾದರು,ಮಾರ್ಕ್ಸ್ ಎನ್ನುವಂತೆ ಸ್ಟೇಟೆ ಉವಿದರ್ಸ್ ಅವೆ ಎಂದರು ೨ಸೈಂಟಿಫಿಕ್ಕಾಗಿ ಅರಳಿದ ಗುಪ್ತ ಪೋಲೀಸ್ ದಳಗಳುಇನ್ನೇನು ಉದುರಿಇನ್ನೆನು ಬಿಡಲಿರುವ ಫಲವನ್ನುಸ್ವತಂತ್ರ ಮಾರುಕಟ್ಟೆಯಲ್ಲಿಟ್ಟು ಇನ್ನು ಮಾರಲಿದ್ದಾರೆ-ಅಮೇರಿಕಾದಲ್ಲಿ, ಯೂರೋಪಲ್ಲಿ, ಮೂರನೇ ಜಗತ್ತಲ್ಲೂಎಂಬ ಸುದ್ದಿಯನ್ನು ಮಾಸ್ಕೋದಲ್ಲಿ […]
ಕೇರಳದ ರಾಜಕೀಯ
ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧
ಜಿಪ್ಸಿ ಮತ್ತು ಮರ
ಗೋರ್ಬಿ ಪೂರ್ವ ಏಕಾಧಿಪತ್ಯದ ಕಮ್ಯುನಿಸ್ಟ್ ದೇಶಗಳಲ್ಲಿಮಹಾಪ್ರಭುಗಳ ಪ್ರಚಾರದಿಂದ ಅಬಾಧಿತವೆಂದೂಮಾನವ ನಿರ್ಮಿತ ಚರಿತ್ರೆಗೆ ಅತೀತವೆಂದೂನನಗೆ ಕಂಡವು; ಬಿದ್ದಲ್ಲೆ ಬೆಳೆವೆ ಸ್ಥಾಯಿ ಮರಗಳು, ಮತ್ತುಇದ್ದಲ್ಲೇ ಇರದ ಸಂಚಾರಿ ಜಿಪ್ಸಿಗಳು. ೨೬-೧೨-೯೧
ಚಕೋರಿ – ೪
ಕೇಳಕೇಳುತ್ತ ಮೈಮರೆತಿದ್ದ ನಮ್ಮಿರವುಹಗುರವಾಗಿ ನಿಧಾನವಾಗಿಲೋಕಾಂತರಕೆ ಸಂಯಮಿಸಿದಂತಾಗಿಪರಿಚಯವಿಲ್ಲದ ಹೊಸಲೋಕದ ಹವಾಮಾನದಲ್ಲಿತೇಲುತ್ತಿರುವಂತೆ,-ಹಾಡಿನಿಂದಿಡೀ ಬಯಲು ಭರಿತವಾಗಿಭರಿತವಾದದ್ದು ಬಿರಿತುತೂಬು ತೆಗೆದ ಕೆರೆಯಂತೆಹಾಡಿನ ಮಹಾಪೂರ ನುಗ್ಗಿತು ನೋಡುಆಹಾಹಾ ಮುಳುಗಿದೆವೆಂದು ನೋಡಿದರೆ ತೇಲುತ್ತಿದ್ದೇವೆ! ಅರೆಅರೇತೇಲುವವರು ನಾವಲ್ಲಚಕೋರಿ ಎಂಬ ಯಕ್ಷಿ!ಬಿಳಿಯ ಮೋಡದ ಹಾಗೆ ಹಗುರಾಗಿಕಣ್ಣೆದುರು […]
