ಜಾಮೀನು ಸಾಹೇಬ

-೧- ದಯಾನಂದ ಮೊದಲನೇ ಸಲ ಜಾಮೀನು ನಿಂತದ್ದು ತನ್ನ ಅಪ್ಪನಿಗೆ. ಆಗ ಅವನಿಗೆ ಇಪ್ಪತ್ತೆರಡು ವರ್ಷ. ಬಿ. ಎ. ಕೊನೆಯ ವರ್ಷದ ಪರೀಕ್ಷೆಯನ್ನು ಎರಡು ಸಲ ಪ್ರಯತ್ನಿಸಿದರೂ ದಾಟಲಾಗದೇ ಹೆಣಗಾಡುತ್ತಿದ್ದ. ಅವನ ವಾರಿಗೆಯ ಹಲವರು […]

ಅಂತರಾಳದ ಬದುಕು

“ಆಗ ಹೋಗದ್ದೆಲ್ಲ ವರದಿ ಮಾಡುತ್ತೀ, ನನ್ನದೊಂದು ಸುದ್ದಿ ವರದಿ ಮಾಡು ನೋಡುವ.” ಎಂಬುದು ಚಿಕ್ಕಮ್ಮ ಯಾವತ್ತೂ ಮಾಡುವ ಒಂದು ಕುಶಾಲು. “ನೀನು ಮಾಡುವ ವರದಿ ವರದಿಯೇ ಅಲ್ಲ, ದಂಡ” ಎನ್ನುವಳು. “ಸುದ್ದಿ ಮಾಡು. ವರದಿ […]

ಪ್ರಶ್ನೆ

ಚಂದ್ರಶೇಖರ ಮನೆಬಿಟ್ಟು ಬಂದಿದ್ದ. ಹೆಂಡತಿಯ ಹತ್ತಿರ ಮಾತಿಗೆ ಮಾತು ಬೆಳೆದು ಜಗಳವಾಗಿ ‘ಮನೆಬಿಟ್ಟು ಹೋಗುತ್ತೇನೆ’ ಎಂದು ಹೊರಟಿದ್ದ. ‘ಹೋಗಿ’ ಎಂದಿದ್ದಳು ಹೆಂಡತಿ. ಹೊರಟೇ ಬಿಟ್ಟ. ಆ ಮೇಲೆ ಹೆಂಡತಿ ಕೂಗಿ ಕರೆದಳು. ಮಗಳನ್ನು ಕಳಿಸಿದಳು. […]

ಭಾಗೀರಥಿ ಮೇಡಂ

ಪರಮೇಶಿ ಅವತ್ತು ಎಲ್ಲಿ ಮಲಕ್ಕೊಂಡಿದ್ದನೋ ಏನೋ ಮೇಲಿಂದ ಮೇಲೆ ಆಕಳಿಸಿದ.  ರಾತ್ರಿ ಸರಿಯಾಗಿ ನಿದ್ದೆ ಮಾಡಲಾಗಿರಲಿಲ್ಲ.  ಯಾರಾದರೂ ಹೆಂಗಸರು ಕರೆದಾರೆಂಬ ಭಯಕ್ಕೆ ಎಲ್ಲೋ ಒಂದು ಕಡೆ ಮಲಗಿದ್ದು ಎದ್ದಿದ್ದ.  ಆ ಊರಿಗೆ ಅವನು ಯಾರೋ […]

ಆಕ್ರಮಣ

ತಿಳಿಯಲಾಗಲೆಂದು ನಾನು ಮನಸ್ಸನ್ನು ಹರಿಯಲು ಬಿಟ್ಟು ಬಾರಿನ ಸ್ಟೂಲಿನ ಮೇಲೆ ಕೂತಿದ್ದೆ ಅಪೇಕ್ಷೆಯಿಲ್ಲದೆ ಒಳಗೆ ಹೊರಗೆ ಹರಿಯುತ್ತಿದ್ದ ನನ್ನ ಮನಸ್ಸನ್ನು ಅವನು ಅಷ್ಟೊಂದು ಜನರ ಮಧ್ಯ ಯಾಕೆ ಆರಿಸಿಕೊಂಡನೋ? ಕೈ ನೀಡಿಯೇಬಿಟ್ಟ. ಪರಸ್ಪರ ಪರಿಚಯ […]

ಗಂಡ ಹೆಂಡ್ತಿ

ಒಬ್ಬನೇ ಕೂತು ಎಣ್ಣೆ ಹಾಕುವಾಗ ಹೊಳೆದ ಕಥೆ.. ಅವನಿಗೆ ಮೂವತ್ತ್ನಾಲ್ಕು ವರ್ಷ. ಮದುವೆಯಾಗಿ ಎಂಟು ವರ್ಷ ಆಗಿದೆ. ಒಂದು ಮಗುವೂ ಇದೆ. ದೊಡ್ಡ ಕೆಲಸ.. ಅವನ ಡ್ರೈವರ್‌ಗೇ ತಿಂಗಳಿಗೆ ಏಳು ಸಾವಿರ ಸಂಬಳ ಅಂದ್ರೆ […]

ತಿಮ್ಮಜ್ಜಿಯ ಮ್ಯಾಗ್ಲುಂಡಿ – ಕಾದಂಬರಿಯ ಆಯ್ದ ಭಾಗಗಳು

ಐದು ಪುಟ್ರಾಜ ಇಸುಲ್‌ಗ್ ಸೇರುದ್‌ಮಲೈ ಇನು ಚುರ್ಕಾಗೋದ. ಮಗ್ಲುಂಡೀಲಿದ್ದದು ಒಂದೇ ಇಸುಲ್ ಮನೈ. ಒಂದ್ನೇ ಕಳಾಸ್ನಿಂದ ನಾಕ್ನೇ ಕಳಾಸ್ಗಂಟ ಅದೇ ರುಂಲೇ ಕಚ್ಚ ಮೇಸ್ಟ್ರು ಪಾಟ ಮಡವ್ರು. ಇಂವ ಒಂದ್ನೇ ಕಳಸ್ಲೆ ಇದ್ಕಂಡು ಯಲ್ಲಾ […]

ಕುದುರಿ ಬದುಕು

ಕಥಿ ಹೇಳಬೇಕ೦ತೇನೂ ಹೊ೦ಟಿಲ್ಲ. ಮನಸಿಗೆ ಅನಸಿದ್ದನ್ನ ಹೇಳಲಿಕ್ಕೆ ಸುರು ಮಾಡೇನಿ. ಎಲ್ಲಿಗೆ ಹೋಗ್ತದೋ ಗೊತ್ತಿಲ್ಲ. ಸ೦ಜೀ ಹೊತ್ತಿನ ಹರಟೀ ಹ೦ಗ. ಬೆ೦ಗಳೂರಿನವರಿಗೆಲ್ಲಾ ರೇಸ್ ಕೋರ್ಸ್ ಗೊತ್ತು. ಉಳದವ್ರು ಪೇಪರಿನಾಗೋ, ಕಾದ೦ಬರಿನಾಗೋ, ಯಾರೋ ದಿವಾಳಿ ತಗದದ್ದೋ, […]

ಪ್ರಶಸ್ತಿ

ಪ್ರಶಸ್ತಿ ಪ್ರದಾನ ಸಮಾರಂಭದ ಎಷ್ಟೋ ದಿನಗಳ ಮೊದಲು… “ಬದುಕು ಅಂದ್ರೆ ಬಣ್ಣದ ಸಂತೆ ಅಂತ ತಿಳಕೊಂಡವರೇ ಹೆಚ್ಚು, ತಮಗೆ ಬೇಕಾದ, ತಮ್ಮ ಮನಸ್ಸಿಗೆ ತಕ್ಕ ವ್ಯಾಪಾರ ಮಾಡಬಹುದು, ಬಣ್ಣ ಬಳಿದುಕೊಳ್ಳ ಬಹುದು ಅನ್ನೋ ಕಲ್ಪನೆ, […]

ಒಂಟಿ ಗೆಜ್ಜೆ

ಮಿನು ಎದ್ದು ಹೊರ ಬಂದರೆ ಹಾಲ್‌ನಲ್ಲಿ ಅಮ್ಮ ಹನಿ ತುಂಬಿದ ಕಣ್ಣುಗಳಿಂದ ಕಿಟಕಿಯಾಚೆ ನೋಡುತ್ತ ಕಳಾಹೀನಳಾಗಿ ಕುಳಿತದ್ದು ಕಾಣಿಸಿತು. ಬೆಳಿಗ್ಗೆ ಬೆಳಿಗ್ಗೆ ಇಂಥ ದೃಶ್ಯ ನೋಡುವುದೆಂದರೆ ಮಿನುಗೆ ಅಸಹನೆ. ನೋಡಿದರೂ ನೋಡದಂತೆ ಮುಖ ತೊಳೆಯಲು […]