‘ಮಸ್ನವಿ’ ರಚನೆ ಮುಗಿಯಲು ಒಂದು ಋತುವಿನಷ್ಟು ತಡವಾಯಿತು
ರಕ್ತ ಹಾಲಾಗುವುದಕ್ಕೂ ಕಾಲ ಬೇಕು
ನಿನ್ನ ಕೃಪೆ ಆಗ ತಾನೆ ಹುಟ್ಟಿದ ಕೂಸಿನ ಹಾಗೆ
ಬರುವತನಕ ರಕ್ತ ಹಾಲಾಗದೆ ಕಾಯಬೇಕು
ವಸಂತ ಬರದೆ ಮೊಗ್ಗುಗಳು ಅರಳುವುದಿಲ್ಲ
ಕಡಲ ಮಧ್ಯದಿಂದ ಅವನು ತೀರಕ್ಕೆ ಬಂದ, ಈ ಕಾವ್ಯ ಚಿಮ್ಮಿತು
ಈ ಮಸ್ನವಿ ಚೈತನ್ಯಗಳ ಒರೆಗಲ್ಲು
ಮಹಾ ಪ್ರಸ್ಥಾನದಂದು ಮತ್ತೆ ಆರಂಭವಾಯಿತು
ಈ ದಿನದಂದೇ ಬುಲ್ ಬುಲ್ ಹಕ್ಕಿ ಗರುಡ ಪಕ್ಷಿಯಾಗಿ ಬೆಳೆಯಿತು
ನಿಗೂಢಗಳ ಬೆನ್ನಟ್ಟುವ ಹದ್ದಾಗಿ ಹಾರಿತು
‘ದೊರೆಯ ಮಣಿಕಟ್ಟೆ ಈ ಗಿಡುಗದ ವಾಸ ಸ್ಥಾನ
ಸಕಲರಿಗೂ ಇರಲಿ ಈ ಬಾಗಿಲಲ್ಲಿ ಶಾಶ್ವತ ಆಹ್ವಾನ
*****
