ಜೀವನದ ಯಾತ್ರೆಯಲಿ ಕಣ್ಣೀರ ತೀರ್‍ಥವ
ಕುಡಿದು, ನೋವುಗಳ ತಗ್ಗಿನಲಿ ನುಗ್ಗುನುರಿಯಾಗಿ
ಮುಗ್ಗರಿಸದೆಯೆ ಮುಂದಕಡಿಯಿಟ್ಟು, ಮುಡಿ ಬಾಗಿ
ಹಿಗ್ಗು-ದಿಣ್ಣೆಯನೇರಿ ನಿಂತ ರಸಿಕ! ಭೈರವ
ರೂಪದೆದುರು ಸೌಮ್ಮ ನಂದಾದೀಪ. ಮಲ್ಲಿಗೆ,
ಬಕುಲ, ಸಂಪಿಗೆಯ ತಂಪನು ಜೀವಕೋಲಯಿಸಿ
ಸಖ್ಯದ ಕಂಪನುಂಡು, ತಂಬೂರಿ ನಾದದಲಿ
ತುಂಬಿ ಕರುಣೆಯ, ಪಡೆದೆ ರಸಸರಸ್ವತಿ ಹರಕೆ.
ನಾಡಗಡಿಯಲಿ ಒಲವು-ಗುಡಿ ಕಟ್ಟಿ, ಚೆಲುವಿಗೆದೆ
ತೆರೆದು, ಸಜ್ಜನಿಕೆಯಲಿ ಹಾಲು-ಜೇನನು ಕರೆದು
ಹಲವು ಪಣತಿಗೆ ಎಣ್ಣೆಯೆರೆದು, ಮಕ್ಕನು ತೆಗೆದು
ದೀಪಾವಳಿಯ ಗೈದೆ: ಮುಳ್ಳಿನಲು ಮುಗುಳೊಡೆದೆ.
ನಂದನದ ಮಂದಾರ ಒಂದಾರ ಕೊಳ್ಳೋಣ-
ಲೋಕದೀ ಹೂವದಕೆ ಬಾಸಿಂಗ, ಬಾಗಿನ.
*****
