ಒಂದು ಕಥೆ

ಪುಟ್ಟ ಮಗ ಓಡಿ ಬಂದು ಕೊರಳ ಸುತ್ತ ಬಳಸಿ ಪೀಡಿಸುತ್ತಾನೆ; “ಅಮ್ಮ ನನಗೊಂದು ಕಥೆ ಹೇಳು – ನಿನ್ನೂರ ಕಥೆ; ಕಾಡು, ನದಿ, ಮಳೆಯ ಕಥೆ!” ‘ಅದು ಒಂದಾನೊಂದು ಕಾಲದ ಒಂದಾನೊಂದು ಊರು. ನನ್ನೂರು […]

ಹೇಮ-ಕೂಟ

ಕಲ್ಲು ಕೂತ ಮಂಪಗಳ ಮೇಲೆ ಚಿತ್ತಾರಗಳ ಎಣಿಸುತ್ತ ಕನಸ ಚಿಲಿಪಿಲಿ ಗುಟ್ಟುವ ಗಿಳಿಗಳಾಡುವ ಮಾತು- ‘ನಾವು ರಾಯನ ಅರಸಿಯರು ಅರಸುತ್ತಿದ್ದೇವೆ ಅರಸೊತ್ತಿಗೆಯ ವೈಭವ, ಕಳೆದುಹೋದ ಪೀತಾಂಬರ ಮಕರಿಕಾ ಪತ್ರದ ಮೇಲೆ ರಾಯ ತಾನೇ ಬರೆದ […]

ಮಗ್ಗುಲಾದರೆ ರಾತ್ರಿ

ಹಗಲೆಂದರೆ ಇವಳು ಕಾಣುವ ಕನಸು ಹೊತ್ತು ತರಬೇಕು ಇವಳಿದ್ದಲ್ಲಿ, ನಿದ್ದೆ-ಮಂಪರು-ಕನಸು-ಕಂಪನ; ಕದಡಿ ಹಾಕುತ್ತಾಳೆ ಕತ್ತಲ ಪೀಪಾಸೆಯಲ್ಲಿ ರಾತ್ರಿ ಚಾದರದಡಿಗೆ ದಂಡು ದಂಡು ಮಂದಿ ಬಂದು ಬೀಳುತ್ತಾರೆ ಉಂಡಷ್ಟೂ (ಸಹ) ಭೋಗ ಕೊಂಡಷ್ಟೂ (ಸ)ರಾಗವೆಂದು. ಸಾವಿರ […]

ರಾಗ

ಸಮುದ್ರ ಸೀಳಿ ಲಾಗ ಹೊಡೆಯುವತಿಮಿಂಗಲಆಕಾಶವನ್ನೇ ಹರಿದು ಸುರಿಯುವಮಳೆಚಂದ್ರ ತಾರೆಗಳನ್ನೆ ನುಂಗಿಬಿಡುವಮೋಡಭೂಮಿಯೊಳಗಿಂದ ಹಟಾತ್ತನೆ ಸಿಡಿದುನಡುಗಿಸುವ ಕಂಪನ; ನುಡಿಸಿದರೆ ರಾಗ,ಹೀಗಿರಬೇಕು! ರೋಮ ರೋಮಕ್ಕೂ ಲಗ್ಗೆ ಇಟ್ಟುಕೊಲ್ಲುವ ಹಾಗೆ! ಕೀಲಿಕರಣ: ಕಿಶೋರ್‍ ಚಂದ್ರ

ಮಳೆ

ನಾನು, ಅವನು, ಮಳೆಯಲ್ಲಿ ನಿಂತಿದ್ದೇವೆ ಮೈಗೆ ಮೈ ಬೆಸೆದ ಅಂತರದಲ್ಲಿ ನೆನೆಯುತ್ತಾ ಅವನ ದೇಶದ ಕಾಡುಗಳನ್ನ. ಆಳೆತ್ತರ ಮರಗಳು ಅಲ್ಲಿ ಟೊಂಗೆ ಟೊಂಗೆಗಳಲ್ಲಿ ಗೂಡು ಕಟ್ಟಿದೆ ಪ್ರೀತಿ. ಮೆಲ್ಲಗೆ ನುಡಿಯುತ್ತಾನೆ, ‘ಅಲ್ಲೂ ಹೀಗೇ ಮಳೆ’. […]

ಕಾಯುವುದು

ಯಾಕೆ ಸುಮ್ಮನೆ ನಾವು ಹಾದಿ ಕಾಯುತ್ತೇವೋ ಬಂದರೂ ಬಾರದ ಹಾಗೇ ಇರುವಂಥವರ! ಒಳಗಿನ ಬೆಂಕಿ ನಾಲಿಗೆಯ ಮೇಲಾಡಿ ಕಣ್ಣ ಕೊನೆಯಿಂದ ಕಿಡಿ ಕಾರಿ ಚಟ ಪಟ ಸಿಡಿದು ಹೊರಟು ಹೋದವರ ಕಾಯುತ್ತೇವೆ ಯಾಕೆ? – […]

ಧರ್ಮಾಧರ್ಮದ ಮಾತು

ಹರ ಹರ ಮಹಾದೇವ! ಒಡಲ ಹರಿದು ಛಿದ್ರಗೊಳಿಸಿದ ವಿಷ ಕಂಠ. ಕಂಠದ ವಿಷ ನರ ನಾಡಿಗಳಲ್ಲಿ- ಕಹಿ ಮನಸ್ಸಿನ ಮೈಯೆಲ್ಲ ನೀಲಿ; ಆಕಾಶದುದ್ದಗಲಕ್ಕೂ ಹರಡಿ ನೀಲಿ ಸಮುದ್ರದಾಳದ ಹವಳ ಮುತ್ತುಗಳೆಲ್ಲ ನೀಲಿ ನೀಲಿ. ಸಾವ […]

ಕ್ಲಾಸ್ಟ್ರೋಫೋಬಿಕ್

ಚೌಕಟ್ಟು ಅಡಿಗೆ ಮನೆ, ಹಾಲು, ಮಲಗುವ ಕೋಣೆ ನೀಟು ಚೌಕಟ್ಟು ಮಂಚ…ಹಾಸಿಗೆ…ಹೊದಿಕೆ. ಚಚ್ಚೌಕ ಓದುವ ಪುಸ್ತಕ ಮೇಜು ಕುರ್ಚಿ ….ಆಲೋಚನೆಯಧಾಟಿ! ಎಲ್ಲಕ್ಕೂ ಒಂದೊಂದು ಚೌಕಟ್ಟು. ಬಾಗಿಲು, ಸೂರು, ಗೋಡೆ…. ನೆಲಕ್ಕೆ ಚಾಚಿಕೊಂಡ ಬಿಳಿ ಟೈಲುಗಳು […]

ಬರಬಾರದು ಹೀಗೆ ನೀವು

ಬರಬಾರದು ಹೀಗೆ ನೀವು ನಮ್ಮೊಳಗೆ, ನವಿಲ ಗರಿಯೊಳಗೆ ಬಂದ ನೀಲಿ ಕಣ್ಣಂತೆ. ಮಾತನಾಡಲಿಲ್ಲ ನಾವು ಎಂದೂ ಹತ್ತಿರ ಕೂತು ಹೊತ್ತು ಕಳೆದಿಲ್ಲ ಆದರೂ ಕೇಳುತ್ತದೆ ಎದೆಬಡಿತ ಮಳೆಗೆ ಮುಂಚೆ ಸಿಡಿಲು ಹೊಡೆದಂತೆ. ಮೋಹಕ್ಕೆ ಸಾವಿರ […]

ಅಂಥವರಲ್ಲ ಇಂಥವರು

ಅವರು ಹೀಗಿರುವುದು ನಮ್ಮ ಅದೃಷ್ಟ, ಹೀಗಿರದೇ ಹಾಗೆ – ’ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !! ಬೇಕಾದ್ದು ಮಾಡಬಹುದು ಎಂದೂ ಏನೂ ಅಂದಿಲ್ಲ. ಅದನ್ನೆಲ್ಲ ತಿಳಿಯವ ಆಸಕ್ತಿಯೂ ಅವರಿಗಿಲ್ಲ, ಪುರಸೊತ್ತ೦ತು ಮೊದಲೇ ಇಲ್ಲ. […]