ಕ್ರಾಂತಿಕಲಿ

ಮುಗಿಲ ಮರೆಗಿರುವ ಮಿಂಚಿನಬಳ್ಳಿ, ಗಗನದಂ- ಚಿಗೆ ತನ್ನ ಕುಡಿನಾಲಗೆಯ ಚಾಚಿ ಕತ್ತಲೆಯ ತುತ್ತುವೊಲು, ಸಾಮಾನ್ಯದಲ್ಲು ಅಸಮಾನತೆಯ ಕಿಡಿಯೊಂದು ಅರಿಯದೊಲು ಅಡಗಿಹುದು ಕೃತುಬಲಂ! ಜನಜೀವನದ ಉಗ್ರ ಜಾಗ್ರತಿಯ ಬಿರುಗಾಳಿ ಬೀಸಲದೆ ಪ್ರಜ್ವಲಿಸಿ, ಕ್ರಾಂತಿಕಲಿಗಳ ಕೈಯ ಪಂಜಿನೊಲು […]

ಕಿತ್ತೂರಿನ ಕಿಡಿಗಳು

ಗುಣದಲ್ಲಿ ಗೌರಿ, ಕೆಚ್ಚೆದೆಯಲ್ಲಿ ಚಾಮುಂಡಿ, ಕ್ರೂರ ದಬ್ಬಾಳಿಕೆಗೆ ಬಿಚ್ಚುಗತ್ತಿಯ ಹಿಡಿದು ಕಿತ್ತೂರ ರಾಣಿ, ಬಜ್ಜರದ ಕಿಡಿ! ಮಾರ್ಪೊಳೆದು ಭೀರು ಭೀರುಗಳೆದೆಗೆ ಬೀರ ಚೇತನೆಯೂಡಿ ಉಬ್ಬರಂಬರಿದು ಬಡಿದೆಬ್ಬಿಸಿದ ಕಾವಿನಲಿ ಮೈದುಂಬಿ ಮೇಲೆದ್ದ ಯೋಧಪಡೆ, – ಸಂಗೊಳ್ಳಿ […]

ಕಿತ್ತೂರ ಕೋಟೆಯನ್ನು ಕಂಡು

ಭೂತಕಾಲದ ಗರ್ಭದಲ್ಲಡಗಿ, ಮೈಯುಡುಗಿ, ಗಹಗಹಿಸಿ ನಗುವ ಕಾಲನತ್ಯದ್ಭುತ ದವಡೆ- ಯೊಲು ತೋರುತಿದೆ ಕಿತ್ತೂರ ಬಲ್‌ಕೋಟೆ ಗೋಡೆ! ಅಲ್ಲಲ್ಲಿ ಬೆಳಕಳಿದ ಬೆಳಕಿಂಡಿಯಲಿ ನುಗ್ಗಿ, ಗೋಳಿಡುವ ಅಪಸ್ವರದಂತೆ ಬಿಸುಸುಯ್ಯುತಿದೆ ಗಾಳಿ, ವೈತಾಳಿ! ಗಿಡಗಂಟಿ ಕೊನ್ನಾರದಲಿ ಗೂಡು ಕಟ್ಟಿಹ […]

ಶ್ವೇತಪುತ್ರಿ

ಗಾಳಿಯ ಬೆರಳಿಗೆ ಬೆಳ್ಳಿಯ ಉಂಗುರ ತೊಡಿಸುತ ಬರುತಿಹ ಒಯ್ಯಾರಿ! ಹೊಗೆಯ ಸುರುಳಿಗಳ ಅರಳಿನ ಮಾಲೆಯ ಕೊರಳಿಗೆ ಸೂಡುವ ಸುಕುಮಾರಿ! ಬಿಳಿಯ ಪತ್ತಲದ ತೆಳ್ಳನೆಯುಡುಗೊರೆ ಕೆಂಗಿಡಿ ಕೆಂಬರಳಿನ ನತ್ತು, ನಿರಾಭರಣ ಸುಂದರಿ ಸುವಿಲಾಸಿನಿ ಕಲಿಸಿದರಾರೀ ಹೊಸ […]

ಅಂಚೆಯಾಳು

೧ ಅಂಚೆಯಾಳು ಬಂದನೇನು? ತಂದನೇನು ಓಲೆಯ? ಮನವ ಕೊಂಡು ಕೊನೆವ ಒಲವು ಸಮೆದ ನುಡಿಯ ಮಾಲೆಯ? ಕಳುಹಲಿಲ್ಲವೇನು ಗಾಳಿಯೊಡನೆ ಬಯಲಿನಾಲಯ? ಅವನ ಬರವ ಹಾರೈಸುತ ಯೋಚನೆಯೊಡನೋಲವಿಸುತ ಬಂಧು ಬಳಗವೆಲ್ಲವಿಲ್ಲೆ ಎದೆಗೆ ಬಿಜಯಗೈಸುತ ದೂರ ಸಾರಿ […]

ರೈಲು ಬಂಟ

“ಹಿಂದಿನಳಲ ಮರೆತುಬಿಡು ಇಂದು ಅಡಿಯ ಮುಂದಕಿಡು ಇಡು, ಇಡು ಇಟ್ಟು ಬಿಡೂ” ಎನುತ ಗಾಡಿ ಓಡುತಿಹುದು ಓಡುತಿಹುದು ಮುಂದಕ ಮುಂದಕಿಟ್ಟ ಹೆಜ್ಜೆಯಿನಿತು ಸರಿಸದಂತೆ ಹಿಂದಕೆ! ತಂತಿ ಕಂಬ ಗಿಡದ ಸಾಲು ದಾಟಿ ನುಗ್ಗುತಿಹುದು ರೈಲು […]

ಕೊನೆಯ ಎಚ್ಚರಿಕೆ !

೧ ಏಸುಕ್ರಿಸ್ತ ಏಸು ಬುದ್ಧ ಏಸು ಬಸವ ಬಂದರೂ, ತಮ್ಮ ಅಂತರಂಗವನ್ನೆ ಲೋಕದೆದುರು ತೆರೆದರೂ ನಶ್ವರದಲಿ ಈಶ್ವರನನು ಕಂಡು ಜಗದ ಕಲ್ಯಾಣಕೆ ಎದೆಯ ಪ್ರಣತಿ ಜ್ಯೋತಿಯಲ್ಲಿ ದಯೆಯ ತೈಲವೆರೆದರೂ, ಪುಣ್ಯ ಪುರುಷ ಗಾಂಧಿ ತಂದೆ […]

ಸಾವುದೆಲ್ಲಾ ಸತ್ತು…..!

“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!” ಭೂಭಾರಮಾದ ಕೊಳೆಬೆಳೆಯೆಲ್ಲ ಮಾಣ್ಗೆ! ಒಳಿತಿದನು ಅರಿತು ಆಚರಿಪಂಗೆ ದಿಟವೆಂದು ನಂಬುವಗೆ, ಹಂಬಲಿಸಿ ಹರಿದೋಡುವಂಗೆ, ಶೋಕಕೆದೆಗೊಟ್ಟವಗೆ, ಲೋಕಹಿತಗೈವಂಗೆ ಜಗಕೆ ಹೊಸ ಬಗೆಯ ನಲ್ ಕಾಣಿಕೆಯನೀವಂಗೆ! ಹಿರಿಯಾಸೆ ಹೊದ್ದವಗೆ ಬಿದ್ದು ಎದ್ದವಗೆ, […]

ಹೊಸ ಬಾಳು ನಮ್ಮದಿದೆ

ಹೊಸ ಜಗವು ರೂಪುಗೊಂಡಿಹುದೀಗ; ಹೊಸ ಬಾಳು ನಮ್ಮದಿದೆ, ಹೊಸತೆಲ್ಲ ನಮ್ಮದಿನ್ನು! ಹಳೆಯ ಕಾಲದ ರೂಢಿ-ಜಡಮತೀಯರನೆಲ್ಲ ಬಿಟ್ಟು ಬಿಡಿ ಅವರವರ ಪಾಡಿಗಿನ್ನು – ಯುವ ಜನಾಂಗವೆ ಬನ್ನಿ ನವರಂಗಕೆ ಹೊಸ ಪಾತ್ರಧಾರಿಗಳ ಹೊಸ ಕುಣಿತಕೆ; ಮೂಲೆಯಲ್ಲವಿತವಗೆ […]

ಆಕಾಶಬುಟ್ಟಿ

೧ ಹೊಗೆ ತುಂಬಿ ನಗೆ ತುಂಬಿ ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ ಜೀವ ತುಂಬಿ, ದೂರ ಹಾರುವದೆಂಬ ಭರವಸೆಯ ನಂಬಿ, ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು ಉತ್ಸಾಹ ಸಾಹಸಕೆ ರೂಪುಗೊಟ್ಟು ಮೇಲುನಾಡಿಗೆ ತೇಲಬಿಟ್ಟೆವಿದೊ […]