ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****
ಟ್ಯಾಗ್: ಮಿಂಚಿಕೆಗಳು
ಸಹವಾಸ ಮಹಿಮೆ
ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. *****
