ಮುಂಜಾವದಲಿ ಹಸಿರು ಹುಲ್ಲ ಮಕಮಲ್ಲಿನಲಿ ಪಾರಿಜಾತವು ಹೂವ ಸುರಿಸಿದಂತೆ, ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ ಸೃಷ್ಟಿ ಸಂಪೂರ್ಣತೆಯ ಬಿಂಬಿಪಂತೆ, ಮಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ ಹೆಣ್ಣ ಕಣ್ಣಂಚಿನಲಿ ತುಳುಕುವಂತೆ, ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು […]
ಲೇಖಕ: ಚನ್ನವೀರ ಕಣವಿ
ಮಾತಂಗ ಬೆಟ್ಟದಿಂದ
೧ ದುಂಡಾದ ಬಂಡೆಗಳ ಮೇಲುರುಳಿ, ನುಣ್ಣನೆಯ ಹಾಸುಗಲ್ಲಲಿ ಜಾರಿ, ಅಲ್ಲಲ್ಲಿ ಮಡುಗಟ್ಟಿ ಚಕ್ರ ತೀರ್ಥವ ರಚಿಸಿ, ಬೆಟ್ಟದಡಿಗಳ ಮುಟ್ಟಿ ಪಂಪಾನಗರಿಗಿಂಬುಗೊಟ್ಟ, ತುಂಗಭದ್ರೆಯ ಜಲತರಂಗದಿ ಮಿಂದು, ಶ್ರೀ ವಿರೂಪಾಕ್ಷಂಗೆ ಕೈಮುಗಿದು, ಭುವನೇಶ್ವರಿಗೆ ನಮಿಸಿ, ಸಂಪೂಜಿತ ವಿಜಯ […]
ಪ್ರಜಾಪ್ರಭುತ್ವ
ಮುಳುಗುತಿಹ ನೇಸರನು ಮುದಿಸಿಂಹನಂತಾಗಿ ಪಶ್ಚಿಮಾದ್ರಿಯ ಗವಿಯ ಸೇರುತಿಹನು; ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ ಲೋಗರೆಡೆ ಕೆಕ್ಕರಿಸಿ ನೋಡುತಿಹನು! ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ ಕಪ್ಪು ಬಾವುಟವತ್ತಿ ತೋರಿಸಿಹುದು- ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ ಹಾಡಿ ಜಯಜಯಕಾರ […]
ಕ್ರಾಂತಿಕಲಿ
ಮುಗಿಲ ಮರೆಗಿರುವ ಮಿಂಚಿನಬಳ್ಳಿ, ಗಗನದಂ- ಚಿಗೆ ತನ್ನ ಕುಡಿನಾಲಗೆಯ ಚಾಚಿ ಕತ್ತಲೆಯ ತುತ್ತುವೊಲು, ಸಾಮಾನ್ಯದಲ್ಲು ಅಸಮಾನತೆಯ ಕಿಡಿಯೊಂದು ಅರಿಯದೊಲು ಅಡಗಿಹುದು ಕೃತುಬಲಂ! ಜನಜೀವನದ ಉಗ್ರ ಜಾಗ್ರತಿಯ ಬಿರುಗಾಳಿ ಬೀಸಲದೆ ಪ್ರಜ್ವಲಿಸಿ, ಕ್ರಾಂತಿಕಲಿಗಳ ಕೈಯ ಪಂಜಿನೊಲು […]
ಕಿತ್ತೂರಿನ ಕಿಡಿಗಳು
ಗುಣದಲ್ಲಿ ಗೌರಿ, ಕೆಚ್ಚೆದೆಯಲ್ಲಿ ಚಾಮುಂಡಿ, ಕ್ರೂರ ದಬ್ಬಾಳಿಕೆಗೆ ಬಿಚ್ಚುಗತ್ತಿಯ ಹಿಡಿದು ಕಿತ್ತೂರ ರಾಣಿ, ಬಜ್ಜರದ ಕಿಡಿ! ಮಾರ್ಪೊಳೆದು ಭೀರು ಭೀರುಗಳೆದೆಗೆ ಬೀರ ಚೇತನೆಯೂಡಿ ಉಬ್ಬರಂಬರಿದು ಬಡಿದೆಬ್ಬಿಸಿದ ಕಾವಿನಲಿ ಮೈದುಂಬಿ ಮೇಲೆದ್ದ ಯೋಧಪಡೆ, – ಸಂಗೊಳ್ಳಿ […]