ಹೀಗೆ, ಹಾಳೆಯ ಮೇಲೆ ‘ಹಾಡು’ ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ….. ಹಾಡು! ಈಗ ಹಾಳೆಯ ಮೇಲೆ ಹಾಡು […]
ವರ್ಗ: ಪದ್ಯ
ಪ್ರಜಾಪ್ರಭುತ್ವ
ಮುಳುಗುತಿಹ ನೇಸರನು ಮುದಿಸಿಂಹನಂತಾಗಿ ಪಶ್ಚಿಮಾದ್ರಿಯ ಗವಿಯ ಸೇರುತಿಹನು; ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ ಲೋಗರೆಡೆ ಕೆಕ್ಕರಿಸಿ ನೋಡುತಿಹನು! ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ ಕಪ್ಪು ಬಾವುಟವತ್ತಿ ತೋರಿಸಿಹುದು- ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ ಹಾಡಿ ಜಯಜಯಕಾರ […]
ಹೊಳೆ ಬಾಗಿಲಲ್ಲಿ ಒಂದು ಹುಣ್ಣಿಮೆಯ ರಾತ್ರಿ
ಕಣ್ಣಂತೆ, ಅಲ್ಲೊಂದು ಹರಿಯೊ ನದಿಯಂತೆ ಬಣ್ಣ ಬಣ್ಣದ ಕನಸು ಮೀನಂತೆ ಕಪ್ಪು ನದಿಯ ಎದೆಯಲ್ಲಿ ಫಳ ಫಳ ನಕ್ಷತ್ರ ಜಾತ್ರೆ ತಾರೆ ಸಹಿತ ಧುಮುಕಿ ನದಿ ಸೇರಿದ್ದಾನೆ ಚಂದ್ರ ಆಕಾಶಕ್ಕೇ ಹುಟ್ಟು ಕೊಟ್ಟು ಚಂದ್ರನ […]
ಕ್ರಾಂತಿಕಲಿ
ಮುಗಿಲ ಮರೆಗಿರುವ ಮಿಂಚಿನಬಳ್ಳಿ, ಗಗನದಂ- ಚಿಗೆ ತನ್ನ ಕುಡಿನಾಲಗೆಯ ಚಾಚಿ ಕತ್ತಲೆಯ ತುತ್ತುವೊಲು, ಸಾಮಾನ್ಯದಲ್ಲು ಅಸಮಾನತೆಯ ಕಿಡಿಯೊಂದು ಅರಿಯದೊಲು ಅಡಗಿಹುದು ಕೃತುಬಲಂ! ಜನಜೀವನದ ಉಗ್ರ ಜಾಗ್ರತಿಯ ಬಿರುಗಾಳಿ ಬೀಸಲದೆ ಪ್ರಜ್ವಲಿಸಿ, ಕ್ರಾಂತಿಕಲಿಗಳ ಕೈಯ ಪಂಜಿನೊಲು […]
ಅಪಮೌಲ್ಯೀಕರಣ
ಜಗಜ್ಯೋತಿ ಎನ್ನಿಸಿದ ಮಹಾ ಜಾತ್ಯತೀತ ಚೇತನವನ್ನು ಅನುಯಾಯಿಗಳು ‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು ಬಸವ ಳಿದುಹೋದ; ತನ್ನ ದಿವ್ಯ ಸಂದೇಶಗಳ ಪಾಲಿಗೆ ಬಸವ ಅಳಿದು ಹೋದ. *****
ಕಿತ್ತೂರಿನ ಕಿಡಿಗಳು
ಗುಣದಲ್ಲಿ ಗೌರಿ, ಕೆಚ್ಚೆದೆಯಲ್ಲಿ ಚಾಮುಂಡಿ, ಕ್ರೂರ ದಬ್ಬಾಳಿಕೆಗೆ ಬಿಚ್ಚುಗತ್ತಿಯ ಹಿಡಿದು ಕಿತ್ತೂರ ರಾಣಿ, ಬಜ್ಜರದ ಕಿಡಿ! ಮಾರ್ಪೊಳೆದು ಭೀರು ಭೀರುಗಳೆದೆಗೆ ಬೀರ ಚೇತನೆಯೂಡಿ ಉಬ್ಬರಂಬರಿದು ಬಡಿದೆಬ್ಬಿಸಿದ ಕಾವಿನಲಿ ಮೈದುಂಬಿ ಮೇಲೆದ್ದ ಯೋಧಪಡೆ, – ಸಂಗೊಳ್ಳಿ […]
ಪ್ರಳಯದ ಅಲೆಯ ಮೇಲೆ ನಾನು ಹೊರಟೆ
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ತಲೆಕೆರೆಯಲು ಕೂಡಾ ಹೊತ್ತಿಲ್ಲ, ಅಷ್ಟೊಂದು ಕಾಟ ತಬ್ಬಿ ಎದೆಗೊತ್ತಿಕೊಂಡ ಅವನ ದೇಹದ ಮಾಟ ಹಿಡಿದೆಳೆದು ಒಂಟೆಗಳ ಸಾಲಿಗೆ ದೂಡಿದ ದೊರೆ ಥಟ್ಟನೆ- “ನೀನೇ ದಳಪತಿ ಈಗ” […]
